ಗಮನ ಸೆಳೆದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌: ಲಾಕ್‌ಡೌನ್‌ ನಂತರ 53 ಸಾವಿರ ಜನ ಪ್ರಯಾಣ

By Kannadaprabha NewsFirst Published Sep 23, 2020, 1:54 PM IST
Highlights

ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕಕೊಂಡಿಯಾದ ಬೆಳಗಾವಿ| ಪುಣೆ, ಚೆನ್ನೈ, ಹೈದ್ರಾಬಾದ್‌, ಬೆಂಗಳೂರು, ತಿರುಪತಿ, ಕಡಪಾ, ಇಂದೋರ್‌ ಮತ್ತಿತರೆಡೆ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸಲಿದೆ ಕುಂದಾನಗರಿ ಬೆಳಗಾವಿ| 

ಜಗದೀಶ ವಿರಕ್ತಮಠ 

ಬೆಳಗಾವಿ(ಸೆ.23): ಒಂದು ಕಾಲದಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನ ಸಂಖ್ಯೆ ಜತೆಗೆ ಪ್ರಯಾಣಿಕರ ಸಂಖ್ಯೆಯೂ ಅತ್ಯಂತ ಗಣನೀಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿದರೆ, ರಾಜ್ಯದಲ್ಲಿಯೇ ಬೆಳಗಾವಿ ವಿಮಾನ ನಿಲ್ದಾಣ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಹೌದು, ಲಾಕಡೌನ್‌ ತೆರವುಗೊಂಡ ಬಳಿಕ ಮೇ 25ರಿಂದ ದೇಶದಲ್ಲಿ ವಿಮಾನಯಾನ ಸೇವೆ ಆರಂಭವಾಗಿತ್ತು. ಹೆಚ್ಚುತ್ತಿರುವ ಕೊರೋನಾ ಆತಂಕದ ಮಧ್ಯೆಯೂ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಹೊರತು ಪಡಿಸಿದರೆ, ಅತೀ ಹೆಚ್ಚು ಪ್ರಯಾಣಿಕರು ಸಂಚರಿಸುವ ಮೂಲಕ ಬೆಳಗಾವಿ ವಿಮಾನ ನಿಲ್ದಾಣ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.

ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಮೇ 26ರಿಂದ ಸೆ. 13ರವರೆಗೆ ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದವರ ಸಂಖ್ಯೆ 53 ಸಾವಿರಕ್ಕೆ ಏರಿಕೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ 18280 ಜನರು ಪ್ರಯಾಣಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಸೆ. 1ರಿಂದ 13ರವರೆಗೆ 793 ಜನ ಪ್ರಯಾಣಿಸಿದ್ದಾರೆ. 2020 ಜನವರಿ ತಿಂಗಳಿಂದ ಸೆ. 13ರವರೆಗೆ 137545 ಜನ ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ.

ಹೆಚ್ಚು ಜನ ಪ್ರಯಾಣ: 2ನೇ ಸ್ಥಾನಕ್ಕೇರಿದ ಬೆಳಗಾವಿಯ ಸಾಂಬ್ರಾ ಏರ್ಪೊರ್ಟ್‌

ಬೆಳಗಾವಿ ನಗರ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕಕೊಂಡಿಯಾಗಿದೆ. ಬೆಳಗಾವಿಯಿಂದ ಪುಣೆ, ಚೆನ್ನೈ, ಹೈದ್ರಾಬಾದ್‌, ಬೆಂಗಳೂರು, ತಿರುಪತಿ, ಕಡಪಾ, ಇಂದೋರ್‌ ಮತ್ತಿತರೆಡೆ ಪ್ರಯಾಣಿಕರಿಗೆ ಸಂಪರ್ಕ ಕಲ್ಪಿಸಲಿದೆ.

ಪುಣೆ ವಿಮಾನ ನಿಲ್ದಾಣಕ್ಕಿಂತಲೂ ಬೆಳಗಾವಿ ಸಮೀಪವಾಗುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿಭಾಗದ ಜನರು, ಉದ್ಯಮಿಗಳು, ನೌಕರರು ಬೆಳಗಾವಿ ನಿಲ್ದಾಣದ ಮೂಲಕವೇ ಪ್ರಯಾಣಿಸಲು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ವಾಯುಸೇನೆ, ಭೂಸೇನೆ, ಐಟಿಬಿಪಿ ಅಧಿಕಾರಿಗಳು, ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು, ಸಚಿವರು, ಜನಪ್ರತಿನಿಧಿಗಳು ಪ್ರಯಾಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ವಿಮಾನ ನಿಲ್ದಾಣ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.

ತಿಂಗಳು ವಿಮಾನ ಹಾರಾಟ ಪ್ರಯಾಣಿಕರ ಸಂಖ್ಯೆ

ಜನವರಿ 666 33624
ಫೆಬ್ರವರಿ 716 38122
ಮಾರ್ಚ್‌ 595 21920

ಏಪ್ರಿಲ್‌ ಲಾಕ್‌ಡೌನ್‌

ಮೇ 26 359
ಜೂನ್‌ 391 10244
ಜುಲೈ 444 14147
ಒಟ್ಟು 2838 118472

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಉಡಾನ್‌ ಯೋಜನೆ ದೊರೆತ ನಂತರ ಬೆಳಗಾವಿ ಚಿತ್ರಣವೇ ಬದಲಾಗಿದೆ. ಉತ್ತರ ಕರ್ನಾಟಕದ ನಂಬರ್‌ 1 ಹಾಗೂ ರಾಜ್ಯದ ಎರಡನೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಬೆಳಗಾವಿ ವಿಮಾನ ನಿಲ್ದಾಣ ನಮ್ಮ ಹೆಮ್ಮೆಯ ವಿಚಾರ. ಬೆಳಗಾವಿಯಿಂದ ದೆಹಲಿ ಹಾಗೂ ಚೆನ್ನೈಗೆ ನೇರ ವಿಮಾನ ಸೇವೆಗೆ ಹೆಚ್ಚು ಬೇಡಿಕೆ ಇದ್ದು, ಆದಷ್ಟುಬೇಗ ಆರಂಭವಾಗಲಿ. ಹಾಗೂ ಕಾರ್ಗೋ ಕಟ್ಟಡ ಕಾಮಗಾರಿ ಬೇಗ ಆರಂಭವಾದರೆ ಬೆಳಗಾವಿಯಿಂದ ವಿಮಾನಗಳ ಮೂಲಕ ಬೆಳಗಾವಿಯಲ್ಲಿ ಉತ್ಪಾದನೆಯಾಗುವ ವಸ್ತುಗಳು ಬೇರೆ ರಾಜ್ಯ ಹಾಗೂ ವಿದೇಶಗಳಿಗೆ ರಫ್ತು ಮಾಡಬಹುದಾಗಿದೆ ಎಂದು ಸಿವಿಲ್‌ ಎಂಜಿನಿಯರ್‌ ಕೃಷ್ಣ ಗಿರಿಯನ್ನವರ ಅವರು ತಿಳಿಸಿದ್ದಾರೆ. 
 

click me!