ಕಲಾವಿದ ಸಹೋದರರಿಬ್ಬರು ಒಂದೇ ದಿನ ಮೃತಪಟ್ಟ ಘಟನೆ ನಡೆದಿದೆ. ಓರ್ವ ಸಹೋದರ ಕೊರೋನಾದಿಂದ ಮೃತಪಟ್ಟರೆ ಇನ್ನೋರ್ವ ಸಹೋದರ ಅನಾರೋಗ್ಯದಿಂದ ಮೃತರಾಗಿದ್ದಾರೆ.
ಮಲೇಬೆನ್ನೂರು (ಸೆ.23): ಸಮೀಪದ ಉಕ್ಕಡಗಾತ್ರಿ ಗ್ರಾಮದ ಜಾನಪದ ಕಲಾವಿದರು, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಜಿ.ಸಿದ್ದನಗೌಡ (62) ಮಂಗಳವಾರ ಕೊರೋನಾದಿಂದ ನಿಧನರಾದರು. ಸುಮಾರು 32 ವರ್ಷಗಳಿಂದ ಗ್ರಾಮದಲ್ಲಿ ಭಜನಾ ತಂಡ ಕಟ್ಟಿಬೆಳೆಸಿದ್ದ ಅವರು, ಕರಿಬಸವೇಶ್ವರನ ಸನ್ನಿಧಾನದಲ್ಲಿ ನಿರಂತರವಾಗಿ ಭಜನೆ ನಡೆಸುತ್ತಿದ್ದರು.
ಜನಪದ ಕಲಾ ಉತ್ಸವ ಆಯೋಜಿಸುತ್ತಾ ತಂಡಗಳನ್ನು ಪ್ರೋತ್ಸಾಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ನೀಡುವ ಗ್ರಾಮೀಣ ಸಿರಿ ಪುರಸ್ಕಾರಕ್ಕೆ ಭಾಜನರಾಗಿದ್ದರು. ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಕೋಶಾಧಿಕಾರಿ ಹನುಮಂತಪ್ಪ, ಸಂಚಾಲಕ ಕುಂಬಳೂರು ಸದಾನಂದ, ದಾವಣಗೆರೆಯ ಸ್ಪೂರ್ತಿ ಸೇವಾ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಮಲೇಬೆನ್ನೂರು ವರದಿಗಾರರ ಕೂಟದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ! ...
ಜಾನಪದ ಕಲಾವಿದ ಸಿದ್ದನಗೌಡರ ಸಹೋದರ ಜಿ.ವೃಷಭೇಂದ್ರಗೌಡ (57) ಅವರೂ ಕೂಡಾ ಅಚ್ಚರಿ ಎಂಬಂತೆ ಮಂಗಳವಾರ ಬೆಳಗ್ಗೆ ಅನಾರೋಗ್ಯದ ಹಿನ್ನೆಲೆ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಗೌಡರ ಜಮೀನಿನಲ್ಲಿ ಮಂಗಳವಾರ ಸಂಜೆ ಮೃತರ ಅಂತ್ಯಕ್ರಿಯೆ ನಡೆಯಿತು.