ಕುಕ್ಕೆ ದೇವಳದ 510 ಸಿಬ್ಬಂದಿಗೆ ನೆಗೆಟಿವ್‌

By Kannadaprabha NewsFirst Published Jul 29, 2020, 9:33 AM IST
Highlights

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕೋವಿಡ್‌-19ನಿಂದ ಮುಕ್ತಗೊಂಡಿದೆ. ದೇವಸ್ಥಾನದ ಸಿಬ್ಬಂದಿಗಳಿಗೆ ಮತ್ತು ಸುಬ್ರಹ್ಮಣ್ಯದ ನಾಗರಿಕರಿಗೆ ಮಂಗಳವಾರ ದೇವಳದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ ಅವರ ಮುತುವರ್ಜಿಯಿಂದ ಉಚಿತ ಕೋವಿಡ್‌ ರಾರ‍ಯಪಿಡ್‌ ಪರೀಕ್ಷೆ ನಡೆಯಿತು.

ಸುಬ್ರಹ್ಮಣ್ಯ(ಜು.29): ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಕೋವಿಡ್‌-19ನಿಂದ ಮುಕ್ತಗೊಂಡಿದೆ. ದೇವಸ್ಥಾನದ ಸಿಬ್ಬಂದಿಗಳಿಗೆ ಮತ್ತು ಸುಬ್ರಹ್ಮಣ್ಯದ ನಾಗರಿಕರಿಗೆ ಮಂಗಳವಾರ ದೇವಳದ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ ಅವರ ಮುತುವರ್ಜಿಯಿಂದ ಉಚಿತ ಕೋವಿಡ್‌ ರಾರ‍ಯಪಿಡ್‌ ಪರೀಕ್ಷೆ ನಡೆಯಿತು.

ದೇವಳದ ಆಡಳಿತ ಕಚೇರಿಯ ಮೇಲ್ಮಹಡಿ ಸಭಾಂಗಣದಲ್ಲಿ ನಡೆದ ಕೋವಿಡ್‌ ಪರೀಕ್ಷೆಯಲ್ಲಿ 571 ಮಂದಿ ಭಾಗವಹಿಸಿದ್ದರು. ಇದರಲ್ಲಿ 510 ಮಂದಿ ಕುಕ್ಕೆ ದೇವಳದ ಸಿಬ್ಬಂದಿಗಳು ಹಾಗೂ 61 ಮಂದಿ ಸ್ಥಳಿಯರು ಪರೀಕ್ಷೆಗೆ ಒಳಗಾಗಿದ್ದರು. ದೇವಳದ 510 ಸಿಬ್ಬಂದಿಗಳ ವರದಿಯು ನೆಗೆಟಿವ್‌ ಆಗುವ ಮೂಲಕ ಕುಕ್ಕೆ ದೇವಳವು ಸಂಪೂರ್ಣವಾಗಿ ಕೋವಿಡ್‌ ಮುಕ್ತ ದೇವಳ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ವಿಂಡೀಸ್‌ಗೆ ದಯಾನೀಯ ಸೋಲು; ಇಂಗ್ಲೆಂಡ್‌ಗೆ ಸರಣಿ ಜಯ

ಪರೀಕ್ಷೆಗೆ ಒಳಪಟ್ಟಿದ್ದ 60 ಸ್ಥಳೀಯರ ವರದಿ ನೆಗೆಟಿವ್‌ ಬಂದಿದ್ದು, ಸ್ಥಳಿಯರಾದ ಓರ್ವ ವ್ಯಕ್ತಿಗೆ ಪಾಸಿಟಿವ್‌ ಬಂದಿದೆ. ಅವರನ್ನು ಸುಬ್ರಹ್ಮಣ್ಯದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಬಳಿಕ ಪಾಸಿಟಿವ್‌ ಬಂದ ವ್ಯಕ್ತಿಯ ಮನೆಯವರಿಗೂ ರಾರ‍ಯಪಿಡ್‌ ಪರೀಕ್ಷೆ ಮಾಡಲಾಗಿದ್ದು, ಅವರೆಲ್ಲರ ವರದಿಯೂ ನೆಗೆಟಿವ್‌ ಬಂದಿದೆ.

ಮುನ್ನೆಚ್ಚರಿಕೆಯಾಗಿ ರಾರ‍ಯಪಿಡ್‌ ಟೆಸ್ಟ್‌: ಕಳೆದ ಎರಡು ತಿಂಗಳಿಂದ ಕುಕ್ಕೆ ದೇವರ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾಧಿಗಳು ಕ್ಷೇತ್ರಕ್ಕೆ ಬಂದು ಹೋಗಿದ್ದರು. ಆದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕೆ ದೇವಳದ ಸಿಬ್ಬಂಧಿಗಳಿಗೆ ಕೋವಿಡ್‌ ರಾರ‍ಯಪಿಡ್‌ ಪರೀಕ್ಷೆ ಮಾಡಲಾಯಿತು.

ಕಾಫಿ ಡೇ ಸಿದ್ಧಾರ್ಥ ಸಾವಿಗೆ ಜು.31ಕ್ಕೆ ಒಂದು ವರ್ಷ: ಅಂತಿಮಗೊಳ್ಳದ ತನಿಖೆ

ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್‌ ಉಳ್ಳಾಲ್‌, ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್‌ ಮುಂತಾದವರು ಉಪಸ್ಥಿತರಿದ್ದರು.

click me!