'ವಿಶ್ವನಾಥ, MTB ನಾಗರಾಜ್‌ ತ್ಯಾಗ ಮಾಡಿ ಬಂದವರು, ಇಬ್ಬರಿಗೂ ಸಚಿವ ಸ್ಥಾನ ಸಿಗಲಿ'

Kannadaprabha News   | Asianet News
Published : Jul 29, 2020, 09:29 AM IST
'ವಿಶ್ವನಾಥ, MTB ನಾಗರಾಜ್‌ ತ್ಯಾಗ ಮಾಡಿ ಬಂದವರು, ಇಬ್ಬರಿಗೂ ಸಚಿವ ಸ್ಥಾನ ಸಿಗಲಿ'

ಸಾರಾಂಶ

ವಿಶ್ವನಾಥ ಹಾಗೂ ಎಂ.ಟಿ.ಬಿ. ನಾಗರಾಜ್‌ ಇವರಿಬ್ಬರೂ ತ್ಯಾಗ ಮಾಡಿ ಬಂದವರು| ಈ ಕುರಿತು ಹೈಕಮಾಂಡ್‌ ಉತ್ತಮ ನಿರ್ಧಾರ ಕೈಗೊಳ್ಳಲಿದೆ| ಪಕ್ಷದಲ್ಲಿ ಯಾವ ಗೊಂದಲ ಇಲ್ಲ. ಇದ್ದರೂ ಮುಖಂಡರು ಸರಿಪಡಿಸುತ್ತಾರೆ ಎಂದ  ಸಚಿವ ಶ್ರೀಮಂತ ಪಾಟೀಲ|

ಧಾರವಾಡ(ಜು.29): ರಾಜ್ಯ ಬಿಜೆಪಿ ಸರ್ಕಾರದ ರಚನೆಗೆ ಎಚ್‌. ವಿಶ್ವನಾಥ ಹಾಗೂ ಎಂ.ಟಿ.ಬಿ. ನಾಗರಾಜ್‌ ಅವರ ಸಹಕಾರವಿದ್ದು, ಅವರಿಗೆ ಸಚಿವ ಸ್ಥಾನ ಸಿಕ್ಕರೆ ಒಳ್ಳೆಯದು ಎಂದು ಕೈಮಗ್ಗ, ಜವಳಿ ಸಚಿವ ಶ್ರೀಮಂತ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಬ್ಬರೂ ತ್ಯಾಗ ಮಾಡಿ ಬಂದವರು. ಆದ್ದರಿಂದ ಈ ಕುರಿತು ಹೈಕಮಾಂಡ್‌ ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂದ ಅವರು, ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಪಡೆದವರಲ್ಲಿ ಅಸಮಾಧಾನ ಇದೆ ಎಂಬ ಪ್ರಶ್ನೆಗೆ, ಪಕ್ಷದಲ್ಲಿ ಯಾವ ಗೊಂದಲ ಇಲ್ಲ. ಇದ್ದರೂ ಮುಖಂಡರು ಸರಿಪಡಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

'ವಿಪಕ್ಷದವರು ರಾತ್ರಿ ಸೂರ್ಯನನ್ನು ಹುಡುಕುತ್ತಾರೆ'

ಕೊರೋನಾ ಕಿಟ್‌ ಖರೀದಿಯಲ್ಲಿ ಅವ್ಯವಹಾರ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಪಕ್ಷದವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಏನೂ ಇಲ್ಲದೇ ಯಾವ ತನಿಖೆ ಮಾಡಬೇಕು ನೀವೇ ಹೇಳಿ. ಎಲ್ಲ ಆರೋಪಗಳಿಗೂ ತನಿಖೆಗೆ ನೀಡಲಾಗೋದಿಲ್ಲ. ರಾಜ್ಯದ ಅಭಿವೃದ್ಧಿ ವಿಷಯದ ಇದ್ದರೆ ಮಾತನಾಡಿ ಎಂದು ವಿಪಕ್ಷಗಳ ಮುಖಂಡರಿಗೆ ಶ್ರೀಮಂತ ಪಾಟೀಲ ತಿರುಗೇಟು ನೀಡಿದ್ದಾರೆ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ