ಧಾರವಾಡ ಅಪಘಾತದಲ್ಲಿ ಮಡಿದ ಕುಟುಂಬಗಳಿಗೆ 5 ಲಕ್ಷ ಪರಿಹಾರ: ಸಿಎಂ ಬೊಮ್ಮಾಯಿ

By Girish Goudar  |  First Published May 22, 2022, 11:23 AM IST

*  ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ಅಪಘಾತ
*  ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರ 
*  ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ: ಬೊಮ್ಮಾಯಿ 
 


ಧಾರವಾಡ(ಮೇ.22): ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರ ನೀಡಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

 

ಧಾರವಾಡದ ಬಾಡ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಜನರ ಕುಟುಂಬಗಳಿಗೆ ಕೇಂದ್ರ ಸಚಿವರಾದ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 5 ಲಕ್ಷ ಪರಿಹಾರ ನೀಡಲಾಗುವುದು. ಈ ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

— Basavaraj S Bommai (@BSBommai)

Tap to resize

Latest Videos

ಈ ಅಪಘಾತ ಅತ್ಯಂತ ದುರದೃಷ್ಟಕರವಾಗಿದ್ದು, ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಅಂತ ಸಿಎಂ ಬೊಮ್ಮಾಯಿ ಅವರು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 9 ಮಂದಿ ಬಲಿ

ಧಾರವಾಡ: ಆ ಗ್ರಾಮದಲ್ಲಿ ಇಂದು ಮದುವೆಯ ಖುಷಿ, ಖುಷಿಯಲ್ಲಿ ಎಲ್ಲರೂ ಮದುವೇ ಮಾಡಲೂ ತಯ್ಯಾರಿ ನಡೆಸಿದ್ರು ಇಂದು ಆಗಬೇಕಿದ್ದ ಮದುವೆಯ ಮನೆಯಲ್ಲಿ ಜವರಾಯ ಬಿಗ್ ಶಾಕ್ ಕೊಟ್ಟಿದ್ದಾನೆ. ಇಡೀ ಗ್ರಾಮಕ್ಕೆ ಗ್ರಾಮವೇ ಶೋಕದ ವಾತಾವರಣದಲ್ಲಿದೆ ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಮಂಜುನಾಥ್ ದಾಸನಕೊಪ್ಪ ಎಂಬ ಯುವಕನು ಮದುವೇ ಇಂದು ನಡೆಯಬೇಕಿತ್ತು. ಆದರೆ ವಿಧಿಯ ಆಟವೇ ಬೇರೆಯೇ ಆಗಿದೆ. 

ಗೋವಾದಲ್ಲಿ ಪಾರ್ಟಿ ಮುಗಿಸಿ ವಾಪಸ್‌ ಬರೋ ವೇಳೆ ಅಪಘಾತ: ಕರ್ನಾಟಕದ ಮೂವರ ದುರ್ಮರಣ

ಮೇ. 21 ರಂದು ಮನೇಯ ಮುಂದೆ ಅದ್ಧೂರಿಯಾಗಿ ಮದುವೇಯಾಗಲು ಆಮಂತ್ರಣ ಪತ್ರಿಕೆಯನ್ನ ರೆಡಿ ಮಾಡಿ ಸಂಭಂದಿಕರಿಗೆ ಕೊಡಲಾಗಿತ್ತು. ಹಿರಿಯರು ಮಾತಿನಂತೆ ಮನೆಯ ಮುಂದೆ ನಡೆಯಬೇಕಿದ್ದ ಮದುವೆ ಮಳೆಯಾಗುತ್ತಿರುವ ಹಿನ್ನಲೆಯಿಂದ ಮೇ. 20 ಬೆಳಿಗ್ಗೆ ಮಠದಲ್ಲಿ ಮದುವೆ ಮಾಡೋದಾಗಿ ನಿಶ್ಚಯ ಮಾಡಿರುತ್ತಾರೆ. ಆದರೆ ಮದುವೇಯಾಗಿ ಖುಷಿಯಿಂದ ಇರಬೇಕಾದ ಮಂಜುನಾಥ ಬಾಳಲ್ಲಿ ಸದ್ಯ ಬರಿಸಿಡಿಲು ಬಡದಂತಾಗಿದೆ..ಎಸ್ ನಿನ್ನೆ ರಾತ್ರಿ 9 ಗಂಟೆಗೆ ಬೆನಕನಟ್ಟಿ ಗ್ರಾಮದಿಂದ ರೇವಣ ಸಿದ್ದೆಶ್ವರ ಮಠದಲ್ಲಿ ಎಂಗೇಜ್‌ಮೆಂಟ್‌ ಕಾರ್ಯಕ್ರಮವನ್ನ ಮುಗಿಸಿಕೊಂಡು ಮನೆಗೆ ಬರುವಾಗ ಕ್ರೂಸರ್‌ರ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ‌ ಮರಕ್ಕೆ ಡಿಕ್ಕಿಯಾಗಿ ಬಳಿಕ ಕೃಷರ್ ವಾಹನ ಪಲ್ಟಿಯಾಗಿದೆ. ಸ್ಥಳದಲ್ಲಿ 7 ಜನರು ಮೃತ ಪಟ್ಡಿದ್ದಾರೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವನ್ನಪದಪಿದ್ದಾರೆ. ಒಟ್ಟು 9 ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದರು. 

ಇನ್ನು 13 ಜನರು ಕಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾರೆ. ಇನ್ನು ಚಾಲಕ ಕುಡಿದ ಮತ್ತಿನಲ್ಲಿ ವಾಹನವನ್ನ‌ ಚಲಾಯಿಸುತ್ತಿದ್ದ ಎಂದು ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.  ಇನ್ನು ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆಯ ಎದುರು ಕಣ್ಣೀಟಿದ್ದರು. ಒಟ್ಟು ಕ್ರೂಸರ್ ವಾಹನದಲ್ಲಿ 22 ಜನರನ್ನ ಕರೆದುಕೊಂಡು ಹೋಗಲಾಗುತ್ತಿತ್ತು ಅದರಲ್ಲಿ 9 ಜನರು ಮೃತಪಟ್ಡಿದ್ದರು. 13 ಜನರು ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೃತ ರಾದವರ ಹೆಸರುಗಳನ್ನ ನೋಡೋದಾದ್ರೆ ಅನನ್ಯ(14), ಹರೀಶ್ (13), ಶಿಲ್ಪಾ(34), ನೀಲವ್ವಾ(60), ಮಧುಶ್ರಿ(20), ಮಹೇಶ್ವರಯ್ಯ(11), ಶಂಬುಲಿಂಗಯ್ಯ(35), ಚನ್ನವ್ವ ಮಂಜುಶ್ರಿ,  ಈ 9 ಜನರು ಮೃತ ಪಟ್ಟಿದ್ದಾರೆ. 13 ಜನರು ಸಾವು ಬದುಕಿನ ಮದ್ಯ ಹೋರಾಟವನ್ನ ನಡೆಸುತ್ತಿದ್ದಾರೆ. 

Bengaluru Accident: ಧಾರಾವಾಹಿ ನಿರ್ದೇಶಕನ ಕಾರಿಗೆ ಪಾದಾಚಾರಿ ಬಲಿ: ಅಪಘಾತದ ವಿಡಿಯೊ ವೈರಲ್‌

ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ನಾನು ಘಟನೆ ಯಾದ ಜಾಗದಲ್ಲೇ ಇದ್ದೆ, ಅಲ್ಲಿ ನಾನು ಹೋಗಿ ನೋಡಿದ್ದೆ ಸ್ಥಳದಲ್ಲಿ ಜನ ತುಂಬಾ ಪರದಾಡುತ್ತಿದ್ದರು ನಾನು ಅಂಬುಲೈನ್ಸ್‌ಗೆ ಕರೆ ಮಾಡಿ ಹೇಳಿದ್ದೆನೆ ಬಳಿಕ ಪೋಲಿಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. 

ಒಟ್ಟಿನಲ್ಲಿ ಚಾಲಕನ ಕುಡಿತದ ಚಡಕ್ಕೆ 9 ಜನರನ್ನ ಬಲಿ ಪಡೆದುಕೊಂಡಿದ್ದಾನೆ. ಮದುವೆಯಾಗಿ ಸುಖದಿಂದ‌ ಜೀವನ ನಡೆಸಬೇಕಿದ್ದ ಮಂಜುನಾಥ ದಾಸನಕೊಪ್ಪ ಎಂಬ ಯವಕನ ಮದುವೆಯ ಸಮಾರಂಭದ ಕಾರ್ಯಕ್ರಮದಲ್ಲಿ ಸದ್ಯ 9 ಜನರು ಸಾವನ್ನಪ್ಪಿದ್ದಾರೆ. ಇನ್ನು 13 ಜನರು ಕಿಮ್ಸ್ ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟವನ್ನ ಮಾಡುತ್ತಿದ್ದಾರೆ.
 

click me!