* ಅಯೋಧ್ಯೆ ಮಾದರಿ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ
* ಹಿಂದೂ ಧರ್ಮ 36 ಸಾವಿರ ದೇವಾಲಯವನ್ನು ಕಳೆದುಕೊಂಡಿದೆ
* ನ್ಯಾಯಾಲಯದಿಂದ ಆರೋಗ್ಯಕರ ತೀರ್ಪು ಹೊರಬೀಳುವ ಭರವಸೆ ಇದೆ
ಬಾಳೆಹೊನ್ನೂರು(ಮೇ.22): ಮುಸ್ಲಿಮರು ಗ್ಯಾನವಾಪಿಯನ್ನು ಸ್ವಇಚ್ಛೆಯಿಂದ ಹಿಂದೂಗಳಿಗೆ ಒಪ್ಪಿಸುವ ಔದಾರ್ಯ ಪ್ರದರ್ಶಿಸಿದರೆ ಎಲ್ಲರಿಗೂ ಕ್ಷೇಮ. ಇಲ್ಲವಾದಲ್ಲಿ ಅಯೋಧ್ಯೆ ಹೋರಾಟದ ಮಾದರಿಯಲ್ಲೇ ದ್ವೇಷ, ಸಂಘರ್ಷ, ಕ್ರೌರ್ಯ, ಅಸೂಯೆಗಳು ನಿರ್ಮಾಣವಾಗಿ ಅಹಿತಕರ ಘಟನೆಗಳು ನಡೆದೀತು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ಇಲ್ಲಿಗೆ ಸಮೀಪದ ಖಾಂಡ್ಯಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾನವಾಪಿ ಪ್ರಕರಣ ಇತ್ತೀಚೆಗೆ ರಾಷ್ಟಾ್ರದ್ಯಂತ ಚರ್ಚೆಯ ವಿಷಯವಾಗಿದೆ. ಅದು ಮಸೀದಿಯಲ್ಲ, ಪುರಾತನ ಪುರಾಣ ಪ್ರಸಿದ್ಧ ಹಿಂದೂ ಶ್ರದ್ಧಾಕೇಂದ್ರವಾಗಿದೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದು ಲಿಂಗ ಅತ್ಯಂತ ಮಹತ್ವಿಕೆ ಪಡೆದಿದೆ. ಅನ್ಯ ಮುಸ್ಲಿಂ ಸಮುದಾಯ ಅದರ ಮೇಲೆ ಆಕ್ರಮಣ ಮಾಡಿ ತನ್ನದೆಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದರು.
ಒದ್ದು ಒಳಗೆ ಹಾಕಲು ನಾನು ಫುಟ್ಬಾಲ್ ಅಲ್ಲ: ಎಚ್ಡಿಕೆಗೆ ಮುತಾಲಿಕ್ ತಿರುಗೇಟು
ಜೂ.1ರ ಬಳಿಕ ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಈ ಕುರಿತು ಹೋರಾಟ ಮುಂದುವರಿಸಲಿದ್ದು, ಸರ್ಕಾರ ಸ್ವಯಂಪ್ರೇರಿತ ದೂರನ್ನು ದಾಖಲು ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗ್ಯಾನವಾಪಿ ದೇಗುಲ ಎಂಬ ಸತ್ಯ ಜಗಜ್ಜಾಹೀರು: ಚಕ್ರವರ್ತಿ ಸೂಲಿಬೆಲೆ
ಗ್ಯಾನವಾಪಿ ಮಸೀದಿಯಲ್ಲ. ಅದೊಂದು ಪ್ರಸಿದ್ಧ ದೇವಾಲಯ ಎಂಬ ಸತ್ಯ ಇದೀಗ ಜಗಜ್ಜಾಹೀರಾಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸಾಮರಸ್ಯ ಕದಡುತ್ತಿರುವ ಮುಸ್ಲಿಂ ಸಂಘಟನೆಗಳು: ಪ್ರಮೋದ್ ಮುತಾಲಿಕ್
ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಿಂದ ಆರೋಗ್ಯಕರ ತೀರ್ಪು ಹೊರಬೀಳುವ ಭರವಸೆ ಇದೆ. ಕುತುಬ್ ಮಿನಾರ್ ವಿಚಾರದಲ್ಲೂ ಕೂಡ 27 ಮಂದಿರಗಳನ್ನು ಕೆಡವಿದ ಪ್ರಕರಣ ಸ್ಪಷ್ಟದಾಖಲೆಗಳ ಸಹಿತ ದೊರೆತಿದೆ. ತಾಜ್‌ಮಹಲ್ ಅದು ತೇಜೋ ಮಹಾಲಯವಾಗಿದೆ. ದೇಶದ ಮೂಲೆ ಮೂಲೆಯಲ್ಲೂ ಅನ್ಯಮತೀಯರ ಅತಿಕ್ರಮಣ ಪ್ರವೃತ್ತಿ ನಿರಂತರವಾಗಿ ಮುಂದುವರಿದಿದೆ. ಕರ್ನಾಟಕದಲ್ಲಿ ಮೂಡಲ ಆಂಜನೇಯ ದೇವಸ್ಥಾನವನ್ನು ಕೆಡವಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಅದರ ಮೇಲೆ ಮಸೀದಿಯನ್ನು ಕಟ್ಟಲಾಗಿತ್ತು ಎಂದರು.
ಒಂದು ಅಧ್ಯಯನದ ಪ್ರಕಾರ ಹಿಂದೂ ಧರ್ಮ 36 ಸಾವಿರ ದೇವಾಲಯವನ್ನು ಕಳೆದುಕೊಂಡಿದ್ದು, ಇತ್ತೀಚಿನ ಬೆಳವಣಿಗೆಗಳನ್ನು ಕಂಡಾಗ ಅದನ್ನೆಲ್ಲಾ ಮರಳಿ ಪಡೆಯುವ ಎಲ್ಲ ಭರವಸೆಗಳೂ ಮೂಡಿ ಬರುತ್ತಿದೆ. ಸಮರ್ಥ ಸರ್ಕಾರ, ಜಾಗೃತಗೊಂಡಿರುವ ಹಿಂದೂ ಸಮಾಜವಿರುವುದರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶವನ್ನು ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.