ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 49 ಸ್ತಬ್ಧಚಿತ್ರ

By Kannadaprabha NewsFirst Published Oct 23, 2023, 4:00 AM IST
Highlights

ರಾಜ್ಯದ 31 ಜಿಲ್ಲೆಯಿಂದ ತಲಾ ಒಂದರಂತೆ 31 ಸ್ತಬ್ಧಚಿತ್ರ, 14 ಇಲಾಖೆಗಳಿಂದ ತಲಾ ಒಂದೊಂದು ಸ್ತಬ್ಧಚಿತ್ರ, ಸ್ತಬ್ಧಚಿತ್ರ ಉಪ ಸಮಿತಿಯಿಂದ 2 ಸ್ತಬ್ದಚಿತ್ರವಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತೆ ಎರಡು ಸ್ತಬ್ಧಚಿತ್ರವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ: ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷ ಅಹಿಂದ ಜವರಪ್ಪ 

ಮೈಸೂರು(ಅ.23): ನಾಡಹಬ್ಬ ದಸರಾ ಅಂಗವಾಗಿ ನಡೆಯುವ ಜಂಬೂಸವಾರಿಯಲ್ಲಿ ಈ ಬಾರಿ ಪ್ರತಿ ಜಿಲ್ಲೆಯಿಂದ ತಲಾ ಒಂದು ಸ್ತಬ್ಧಚಿತ್ರ ಸೇರಿದಂತೆ ಒಟ್ಟಾರೆ 49 ಸ್ತಬ್ಧಚಿತ್ರಗಳು ಪಾಲ್ಗೊಂಡು ಆಯಾ ಜಿಲ್ಲೆಯ ಪ್ರವಾಸೋದ್ಯಮ, ಇತಿಹಾಸ, ಪರಂಪರೆಯ ಮೇಲೆ ಬೆಳಕು ಚೆಲ್ಲುವುದಾಗಿ ಸ್ತಬ್ಧಚಿತ್ರ ಉಪ ಸಮಿತಿ ಅಧ್ಯಕ್ಷ ಅಹಿಂದ ಜವರಪ್ಪ ತಿಳಿಸಿದರು.

ಜಿಪಂ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಯಿಂದ ತಲಾ ಒಂದರಂತೆ 31 ಸ್ತಬ್ಧಚಿತ್ರ, 14 ಇಲಾಖೆಗಳಿಂದ ತಲಾ ಒಂದೊಂದು ಸ್ತಬ್ಧಚಿತ್ರ, ಸ್ತಬ್ಧಚಿತ್ರ ಉಪ ಸಮಿತಿಯಿಂದ 2 ಸ್ತಬ್ದಚಿತ್ರವಿತ್ತು. ನಂತರ ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತೆ ಎರಡು ಸ್ತಬ್ಧಚಿತ್ರವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿಎಂ- ಡಿಸಿಎಂಗೆ ಸಿದ್ಧವಾಗಿದೆ ವಿಶೇಷ ದಸರಾ ಗಿಫ್ಟ್!

ಬಾಗಲಕೋಟೆಯ ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಬನಶಂಕರಿದೇವಿಯ ಸ್ತಬ್ಧಚಿತ್ರವು ಮೊದಲಿಗೆ ತರಳಲಿದೆ. ಬಳ್ಳಾರಿಯ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಿ ದೇವಾಲಯ, ಕಸೂತಿ ಕಲೆ, ನಾರಿಹಳ್ಳ ಅಣೆಕಟ್ಟು, ಬೆಳಗಾವಿ ಜಿಲ್ಲೆಯ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ಪಾಲ್ಸ್, ಸುವರ್ಣ ಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನ ಪ್ರತಿಮೆ ಸೇರಿ ಪ್ರಮುಖ ಆಕರ್ಷಕ ವಸ್ತು ವಷಯವನ್ನು ಇದು ಒಳಗೊಂಡಿದೆ.

ಒಂದು ಜಾನಪದ ಕಲಾತಂಡದ ಜೊತೆ ಒಂದು ಸ್ತಬ್ಧಚಿತ್ರ ತೆರಳಲಿದ್ದು, ವಾಹನಗಳ ಸುಸ್ಥಿತಿಯನ್ನು ಗಮನಿಸಲಾಗಿದೆ. ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಳಗಾವಿಯ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಪಾಲ್ಸ್, ಸುವರ್ಣ ಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರ ಜಿಲ್ಲೆಯಿಂದ ಚಂದ್ರಯಾನ- 3, ಬೀದರ್ಜಿಲ್ಲೆಯ ಕೃಷ್ಣಾಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶವು ಅನಾವರಣಗೊಳ್ಳಲಿದೆ.

ಚಾಮರಾಜನಗರ ಜಿಲ್ಲೆಯ ಜಾನಪದ ಭಕ್ತಿಯ ಬೀಡು, ಚಿಕ್ಕಬಳ್ಳಾಪುರ ಜಿಲ್ಲೆಯ ಏಕತೆಯಲ್ಲಿ ಅನೇಕತೆ, ಚಿಕ್ಕಮಗಳೂರು ಜಿಲ್ಲೆಯ ಬೆಟ್ಟದಿದ ಬಟ್ಟಲಿಗೆ, ಚಿತ್ರದುರ್ಗ ಜಿಲ್ಲೆಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ನಿಸರ್ಗಧಾಮ ಮತ್ತು ಮನೆ, ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ಹುಟ್ಟೂರು ಮತ್ತು ಬಜಾರ ಸಂಪ್ರದಾಯ, ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ, ಗದಗ ಜಿಲ್ಲೆಯ ಸಬರಮತಿ ಆಶ್ರಮ, ಹಾಸನ ಜಿಲ್ಲೆಯ ಹಾಸನಾಂಬ ದೇವಾಲಯ, ಹಲ್ಮಿಡಿ- ಈಶ್ವರದೇವಸ್ಥಾನ, ಅರಸೀಕೆರೆ- ಜೇನುಕಲ್ಲು ಸಿದ್ದೇಶ್ವರ ದೇವಾಲಯ, ಹಾವೇರಿಯ ಶಂಖನಾದ ಮೊಳಗಿಸುತ್ತಿರುವ ಶ್ರೀ ಕನಕದಾಸರು ಮತ್ತು ಗದ್ದಿಗೆ ಕಾಗಿನೆಲೆ, ಕಲಬುರಗಿ ಜಿಲ್ಲೆಯ ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿ ಧಾಮ ಬುದ್ಧನ ಸ್ತೂಪ, ತೊಗರಿ ಕಣಜ, ಸಿಮೆಂಟ್‌ ಕಾರ್ಖಾನೆ, ಕೊಡಗಿನ ಪ್ರೇಕ್ಷಣೀಯ ತಾಣಗಳು ಅನಾವರಣಗೊಳ್ಳಲಿವೆ.

ಕೋಲಾರ ಜಿಲ್ಲೆಯ ನರೇಗಾ ಯೋಜನೆಯಡಿ ನಿರ್ಮಿಸಿದ ವೀರಗಲ್ಲು ಉತ್ಖನನ ಮತ್ತು ಮರುಸ್ಥಾಪನೆ, ಕೊಪ್ಪಳದ ಕಿನ್ನಾಳ ಕಲೆ, ಮಂಡ್ಯದ ಸಾಂಪ್ರದಾಯಕ ಉದ್ಯ ಆಲೆಮನೆ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ಕೊಡುಗೆ, ರಾಯಚೂರು ಜಿಲ್ಲೆಯ ನವರಂಗ್ದರ್ವಾಜಾ ಹಾಗೂ ಆರ್.ಟಿ.ಪಿ.ಎಸ್, ರಾಮನಗರ ಜಿಲ್ಲೆಯ ಚನ್ನಪಟ್ಟಣ ಗೊಂಬೆ, ಶಿವಮೊಗ್ಗ ಜಿಲ್ಲೆಯ ಕುವೆಂಪು ಪ್ರತಿಮೆ, ಗುಡವಿ ಪಕ್ಷಿಧಾಮ, ತುಮಕೂರು ಜಿಲ್ಲೆಯ ಮೂಡಲಪಾಯ, ಯಕ್ಷಗಾನ, ಉಡುಪಿ ಜಿಲ್ಲೆಯ ತ್ಯಾಜ್ಯ ಮತ್ತು ಮತ್ಸ್ಯ ಸ್ನೇಹಿ ಸಮುದ್ರ, ಉತ್ತರ ಕನ್ನಡ ಜಿಲ್ಲೆಯ ಶರಾವತಿ ಮಡಿಲಲ್ಲಿ ವನ್ಯಜೀವಿ ಸಂರಕ್ಷಣೆ ಅಭಿಯಾನ, ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮ, ವಿಜಯನಗರ ಜಿಲ್ಲೆಯ ವಿಠ್ಠಲ ದೇವಸ್ಥಾನ, ಯಾದಗಿರಿ ಜಿಲ್ಲೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಸ್ತಬ್ಧಚಿತ್ರ ಉಪ ಸಮಿತಿಯಿಂದ ಮೈಸೂರು ದಸರಾ ವಾದ್ಯಗೋಷ್ಠಿ, ಯುನೆಸ್ಕೋದಿಂದ ಗುರುತಿಸಲ್ಪಟ್ಟ, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯ, ಸಮಾಜ ಕಲ್ಯಾಣ ಇಲಾಖೆಯಿಂದ ಭಾರತದ ಸಂವಿಧಾನ ಮತ್ತು ಸಂವಿಧಾನ ಪೀಠಿಕೆ ಓದು ಕಡ್ಡಾಯ ಸ್ತಬ್ಧಚಿತ್ರ ಸೇರಿದೆ.

ಉಗ್ರರು ನುಸುಳಿರುವ ಬಗ್ಗೆ ಮಾಹಿತಿ, ದಸರಾ ಮೇಲೆಯೂ ಟೆರರಿಸ್ಟ್‌ಗಳ ಕರಿನೆರಳು? ತುರ್ತು ಭದ್ರತೆ ಹೆಚ್ಚಳ

ವಾರ್ತಾ ಇಲಾಖೆಯಿಂದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹಲಕ್ಷ್ಮೀ ಯೋಜನೆ, ಪ.ವರ್ಗ ಇಲಾಖೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಲಿ ಮತ್ತು ಇತರೆ ಯೋಜನೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯಿಂದ ಅನ್ನಭಾಗ್ಯ ಯೋಜನೆ, ಕರ್ನಾಟಕ ರಾಜ್ಯ ಪೊಲೀಸರಿಂದ ಶೌರ್ಯ- ನ್ಯಾಯ- ರಕ್ಷೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಂಗಾಂಗ ದಾನ ಜಾಗೃತಿ, ಸಹಕಾರ ಹಾಲು ಉತ್ಪಾದಕರ ಮಂಡಳಿಯಿಂದ ಕ್ಷೀರಭಾಗ್ಯ ಯೋಜನೆ, ಸೆಸ್ಕ್ ನಿಂದ ಗೃಹಜ್ಯೋತಿ, ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ, ಪ್ರವಾಸೋದ್ಯಮ ಇಲಾಖೆಯಿಂದ ಲಕ್ಕುಂಡಿಯ ಬ್ರಹ್ಮಜಿನಾಲಯ, ಕಾವೇರಿ ನೀರಾವರಿ ನಿಗಮದಿಂದ ನೀರಾವರಿ ನಿರ್ವಹಣಾ ಪದ್ಧತಿ, ವಾಕ್ಮತ್ತು ಶ್ರವಣ ಸಂಸ್ಥೆಯಿಂದ ಉತ್ತಮ ಜೀವನದೆಡೆಗೆ ಆಯಿಷ್ನ ಕೊಡುಗೆ, ಲಿಡ್ಕರ್‌ ನಿಂದ ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಮುಂತಾದ ಮಾಹಿತಿಯುಳ್ಳ ಸ್ತಬ್ಧಚಿತ್ರಗಳು ಜಂಬೂಸವಾರಿಯಲ್ಲಿ ತೆರಳುವುದಾಗಿ ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಚೇತನ್‌ ಕುಮಾರ್‌, ಎನ್. ಭಾಸ್ಕರ್, ಉಮೇಶ್ ಹ್ಯಾಕನೂರು ಮತ್ತು ಸದಸ್ಯರು ಇದ್ದರು.

click me!