
ಬೆಂಗಳೂರು (ನ.25): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರು ಪೊಲೀಸರು ದಂಡ ವಿಧಿಸಲು ಆಗದಂತೆ ತಮ್ಮ ಬೈಕ್‌ಗಳ ನಂಬರ್‌ಪ್ಲೇಟ್‌ಗಳನ್ನು ಮರೆಮಾಚುತ್ತಿದ್ದಾರೆ. ಆದರೆ, ಹೀಗೆ ಬೈಕ್‌ಗಳ ನಂಬರ್ ಪ್ಲೇಟ್ ಮರೆಮಾಚುವವರ ಮೇಲೆ ಟ್ರಾಫಿಕ್ ಪೊಲೀಸರು ಇನ್ಮುಂದೆ 420 ಕೇಸ್ ದಾಖಲಿಸಲಿದ್ದಾರೆ.
ಬೆಂಗಳೂರಿನಲ್ಲಿ ದಂಡದಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮರೆಮಾಚುವ ಬೈಕ್ ಸವಾರರೇ ಇನ್ಮುಂದೆ ಎಚ್ಚರವಾಗಿರಿ. ನಂಬರ್ ಪ್ಲೇಟ್ ಮರೆಮಾಚುದ್ರೆ 420 ಕೇಸ್ ಬೀಳುತ್ತದೆ. ಬೆಂಗಳೂರಿನಲ್ಲಿ ವಾಹನದ ನಂಬರ್ ಪ್ಲೇಟ್ ಗೆ ಬೈಕ್ ಸವಾರನೊಬ್ಬ ಸ್ಟಿಕ್ಕರ್ ಅಂಟಿಸಿದ್ದನು. ಹೀಗೆ ಸ್ಟಿಕ್ಕರ್ ಅಳವಡಿಸಿದ್ದ ಬೈಕ್ ಸವಾರನೇ ಮೇಲೆ 420 ಕೇಸ್ ದಾಖಲಿಸಲಾಗಿದೆ. ಇದೇ ಆಧಾರದಲ್ಲಿ ಬೈಕ್ ಸವಾರನ ಬಂಧಿಸಿ ಜೈಲಿಗಟ್ಟಿದ್ದಾರೆ.
2024ರ ಸಾರ್ವಜನಿಕ ರಜಾ ದಿನಗಳನ್ನು ಘೋಷಿಸಿದ ಸರ್ಕಾರ
ಬೈಕ್ ನಂಬರ್ ಪ್ಲೇಟ್ ಮುಚ್ಚಿ ಪೊಲೀಸರಿಂದ ಬಂಧನಕ್ಕೊಳಾದ ಬೈಕ್ ಸವಾರ ಚೆನ್ನಬಸವ (22) ಎನ್ನುವ ಯುವಕನಾಗಿದ್ದಾನೆ.ಈತ ಉದ್ದೇಶ ಪೂರ್ವಕವಾಗಿ ಬೈಕ್ ನ ನಂಬರ್ ಪ್ಲೇಟ್ ಗೆ ಸ್ಟಿಕ್ಕರ್ ಅಳವಡಿಸಿದ್ದನು. ಇನ್ನು ಬೈಕ್ ನಂಬರ್ ಗೊತ್ತಾಗುವುದಿಲ್ಲ ಎನ್ನುವ ಕಾರಣದಿಂದ ಪದೇ ಪದೇ ನಗರದಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘನೆ ಮಾಡಿ ಓಡಾಡುತ್ತಿದ್ದನು. ಪೊಲೀಸರು ಹಿಡಿಯಲು ಬಂದಾಗಲೂ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿಕೊಂ ಡು ಹೋಗಿ ಇತರೆ ಸವಾರರಿಗೂ ತೊಂದರೆ ಉಂಟು ಮಾಡಿದ್ದನು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಈಗ ಬೈಕ್ ನಂಬರ್ ಮರೆಮಾಚಿದವನ ಮೇಲೆ 420 ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಕೇರಳ ವಿವಿಯಲ್ಲಿ ನಿಕಿತಾ ಗಾಂಧಿ ಕಾರ್ಯಕ್ರಮದ ವೇಳೆ ಕಾಲ್ತುಳಿತ, ನಾಲ್ಕು ಸಾವು
ಇನ್ನು ಹಲವು ಸಾರ್ವಜನಿಕರು ಕೂಡ ನಂಬರ್ ಪ್ಲೇಟ್ ಮುಚ್ಚಿಕೊಂಡು ಓಡಾಡುತ್ತಾ ತೊಂದರೆ ಕೊಡುತ್ತಿದ್ದುದನ್ನು ಗಮನಿಸಿದ್ದ ಜನರು ಕೂಡ ಪೊಲೀಸರು ದೂರು ನೀಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲಿಯೇ KA03KT5326 ನಂಬರಿನ ಡಿಯೋ ಸ್ಕೂಟರ್ ಬಳಸುತ್ತಿದ್ದ ಚೆನ್ನಬಸವನನ್ನು ಕಾರ್ಯಾಚರಣೆ ನಡೆಸಿ ಜೀವನಭೀಮನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ನಂತರ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ ವಿರುದ್ದ ದೂರು ದಾಖಲಿಸಿದ್ದಾರೆ. ಚೆನ್ನಬಸವನ ಮೇಲೆ ವಂಚನೆ ಪ್ರಕರಣ ದಾಖಲಿಸಿಕೊಂಡ ಬೈಯಪ್ಪನಹಳ್ಳಿ ಪೊಲೀಸರು ಈಗ ನ್ಯಾಯಾಲಯದ ಮುಂಚೆ ಹಾಜರುಪಡಿಸಲಿದ್ದಾರೆ.