ಚಾಮರಾಜನಗರ : ಒಂದೇ ಕುಟುಂಬದ ನಾಲ್ವರೂ ಅತ್ಮಹತ್ಯೆಗೆ ಶರಣು

By Suvarna News  |  First Published Jun 2, 2021, 11:01 AM IST
  • ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು
  • ಚಾಮರಾಜನಗರದ ಮೂಕನಹಳ್ಳಿಯಲ್ಲಿ ಘಟನೆ
  • ಕುಟುಂಬದಲ್ಲೋರ್ವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು

ಚಾಮರಾಜನಗರ (ಜೂ.02): ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. 

ಚಾಮರಾಜನಗರ ಜಿಲ್ಲೆ  ಎಚ್. ಮೂಕನಹಳ್ಳಿಯಲ್ಲಿ  ಒಂದೇ ಕುಟುಂಬದ ನಾಲ್ವರು ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 
 
ಮಹದೇವಪ್ಪ(46),  ಇವರ ಪತ್ನಿ, 10 ವರ್ಷದ ಪುತ್ರಿ ಹಾಗೂ 12 ವರ್ಷ ಮತ್ತೊಬ್ಬ ಪುತ್ರಿ ನೇಣಿಗೆ ಶರಣಾಗಿದ್ದಾರೆ. ಕೆಲ ದಿನಗಳಿಂದ ಮಹಾದೇವಪ್ಪ ಅವರಿಗೆ ಕೊರೋನಾ ಪಾಸಿಟಿವ್ ಆಗಿ ಹೋಂ ಐಸೊಲೇಷನ್ ನಲ್ಲಿದ್ದರು. ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

Tap to resize

Latest Videos

undefined

ಕೊರೋನಾ 3ನೇ ಅಲೆ ಎದುರಿಸಲು ರಾಜ್ಯಾದ್ಯಂತ ತಯಾರಿ ಆರಂಭ ...

ಇದೀಗ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದು, ಕೊರೋನಾ ಆತಂಕದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. 

ಈಗಾಗಲೇ ಕೋವಿಡ್ ಅನೇಕ ಜೀವಗಳನ್ನು ಬಲಿ ಪಡೆದಿದ್ದು, ಆತಂಕದಿಂದಲೂ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!