ವಾಕಿಂಗ್, ಜಾಗಿಂಗ್ ಬಂದವರಿಗೆ ಪೊಲೀಸ್ ಕ್ಲಾಸ್ : ವಾರ್ನಿಂಗ್

By Kannadaprabha News  |  First Published Jun 2, 2021, 10:28 AM IST
  • ಬೆಳ್ಳಂಬೆಳಿಗ್ಗೆ ವಾಕಿಂಗ್ ಹೊರಟವರಿಗೆ ಪೋಲಿಸರು ಶಾಕ್ ನೀಡಿದ್ದಾರೆ
  • ವಾಕಿಂಗ್, ಜಾಗಿಂಗ್ , ಸೈಕ್ಲಿಂಗ್ ಎಂದು ಬೀದಿಗಿಳಿದ ಜನರಿಗೆ ಶಿವಮೊಗ್ಗ ಪೊಲೀಸರು ಖಡಕ್ ಎಚ್ಚರಿಕೆ
  • ಶಿವಮೊಗ್ಗದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಬೆಳಗ್ಗೆ ವಾಕಿಂಗ್ ಹೊರಟಿದ್ದವರನ್ನು ಕರೆತಂದು ಪೋಲಿಸರು ಕ್ಲಾಸ್ 

ಶಿವಮೊಗ್ಗ (ಜೂ.02): ಬೆಳ್ಳಂಬೆಳಿಗ್ಗೆ ವಾಕಿಂಗ್ ಹೊರಟವರಿಗೆ ಪೋಲಿಸರು ಶಾಕ್ ನೀಡಿದ್ದಾರೆ.  ವಾಕಿಂಗ್, ಜಾಗಿಂಗ್ , ಸೈಕ್ಲಿಂಗ್ ಎಂದು ಬೀದಿಗಿಳಿದ ಜನರಿಗೆ ಶಿವಮೊಗ್ಗ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ."  

ಶಿವಮೊಗ್ಗದಲ್ಲಿ ಕೊರೋನಾ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಬೆಳಗ್ಗೆ ವಾಕಿಂಗ್ ಹೊರಟಿದ್ದವರನ್ನು ಕರೆತಂದು ಪೋಲಿಸರು ಕ್ಲಾಸ್ ತೆಗೆದುಕೊಂಡಿದ್ದಾರೆ. ವ್ಯಾಯಮವನ್ನು ಮಾಡಿಸಿದ್ದಾರೆ.

Tap to resize

Latest Videos

ಕೊರೋನಾ ನಿಯಮ ಮೀರಿ ಬೆಳಿಗ್ಗೆಯೇ ವಾಕಿಂಗ್ ಮತ್ತು ದ್ವಿಚಕ್ರ ವಾಹನದಲ್ಲಿ ಬಂದವರಿಗೆ ಪೋಲಿಸ್  ಠಾಣೆಗೆ ಕರೆಸಿ ಖಡಕ್ ಎಚ್ಚರಿಕೆ ನೀಡಲಾಗಿದೆ.

ಕೊರೋನಾ 3ನೇ ಅಲೆ ಎದುರಿಸಲು ರಾಜ್ಯಾದ್ಯಂತ ತಯಾರಿ ಆರಂಭ

ಗಾಡಿ ಸೀಜ್ ಮಾಡಿದ್ದು , ಲಾಕ್‌ಡೌನ್ ಇದ್ದರೂ ಮನೆಯಿಂದ ಹೊರಬಂದಿದ್ದೀರಿ, ಮತ್ತ್ಯಾಕೆ ಲಾಕ್‌ಡೌನ್ ಮಾಡಿರೋದು ಎಂದು ವಾರ್ನಿಂಗ್ ನೀಡಿದರು.

ಡಿವೈಎಸ್ಪಿ ಪ್ರಶಾಂತ ಮಳವಳ್ಳಿ  ರಸ್ತೆಗಿಳಿದವರಿಗೆ ವಾರ್ನಿಂಗ್ ನೀಡಿದ್ದು, ಅಲ್ಲಿಯೇ ವ್ಯಾಯಾಮವನ್ನು ಮಾಡಿಸಿದರು. ಬಳಿಕ ಎಚ್ಚರಿಕೆ ನೀಡಿ, ಮತ್ತೊಮ್ಮೆ ರಸ್ತೆಗೆ ಇಳಿಯದಂತೆ ಸೂಚಿಸಿ ಕಳುಹಿಸಿದರು. 

click me!