ಲೈಟಿಂಗ್ಸ್ ಹಾಕುವಾಗ ವಿದ್ಯುತ್ ಹರಿದು ನಾಲ್ವರು ಸಾವು

Suvarna News   | Asianet News
Published : Apr 07, 2021, 03:09 PM ISTUpdated : Apr 07, 2021, 04:18 PM IST
ಲೈಟಿಂಗ್ಸ್ ಹಾಕುವಾಗ ವಿದ್ಯುತ್ ಹರಿದು  ನಾಲ್ವರು ಸಾವು

ಸಾರಾಂಶ

ಲೈಟಿಂಗ್ಸ್‌ ಅಳವಡಿಸಲು  ಲೈನ್‌ನಿಂದ ವಿದ್ಯುತ್ ಎಳೆದುಕೊಂಡು ಪರೀಕ್ಷಿಸುವಾಗ ಕಬ್ಬಿಣದ ಕಂಬಗಳಿಗೆ ತಗುಲಿ ನಾಲ್ವರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಆನೇಕಲ್ (ಏ.07): ವಿದ್ಯುತ್ ಹರಿದು ನಾಲ್ವರು ವ್ಯಕ್ತಿಗಳು ಸಾವಿಗೀಡಾದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. 

ಅತ್ತಿಬೆಲೆಯ  ಇಂಡಲಬೆಲೆಯಲ್ಲಿಂದು ಕಾರ್ಯಕ್ರಮಕ್ಕೆ ಲೈಟಿಂಗ್ಸ್ ಹಾಕುತ್ತಿದ್ದ ವೇಳೆ  ವಿದ್ಯುತ್ ಕಂಬದಿಂದ ವಿದ್ಯುತ್ ಲೈನ್ ಎಳೆದು ಟೆಸ್ಟ್ ಮಾಡುವಾಗ  ವಿದ್ಯುತ್ ತಗುಲಿ ನಾಲ್ವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.  

ತಂಗಿಯ ಕೊಂದು ರೈಲಿನ ಹಳಿ ಮೇಲೆ ಎಸೆದ ಸಹೋದರ : ಕಟ್ಟಿದ್ದು ಬೇರೆಯದೇ ನಾಟಕ ...

ಆಕಾಶ್ (30), ಮಹಾದೇವ್ (35) , ವಿಷಕಂಠ (35), ಮತ್ತು ವಿಜಯ್ ಸಿಂಗ್ (30) ಮೃತಪಟ್ಟಿದ್ದಾರೆ. 

ಇಲ್ಲಿ ನಾಳೆ (ಏ.08) ನಡೆಯಬೇಕಿದ್ದ ಅಪಾರ್ಟ್‌ಮೆಂಟ್ ಗುದ್ದಲಿ ಪೂಜೆಗೆ  ಲೈಟಿಂಗ್ಸ್ ಹಾಕುವಾಗ  ಈ ದುರ್ಘಟನೆ ನಡೆದಿದೆ.  

ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ