ಹುಬ್ಬಳ್ಳಿ: ಇ ಪೋರ್ಟಲ್‌ ಆರಂಭಿಸಿದ ಬಳಿಕ 30 ಮೊಬೈಲ್‌ ಪತ್ತೆ!

By Kannadaprabha News  |  First Published Mar 4, 2023, 8:18 AM IST

ಸಾರ್ವಜನಿಕರ ಕಳೆದ ಹಾಗೂ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಹು-ಧಾ ನಗರ ಪೊಲೀಸ್‌ ಆರಂಭಿಸಿದ ಇ-ಪೋರ್ಟಲ್‌ರ್‍ ಎಂಬ ನೂತನ ಪ್ರಯೋಗದಿಂದ ವಾರದಲ್ಲಿ ಮೂರು ಲಕ್ಷ ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಹುಬ್ಬಳ್ಳಿ (ಮಾ.4) : ಸಾರ್ವಜನಿಕರ ಕಳೆದ ಹಾಗೂ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಹು-ಧಾ ನಗರ ಪೊಲೀಸ್‌ ಆರಂಭಿಸಿದ ಇ-ಪೋರ್ಟಲ್‌ರ್‍ ಎಂಬ ನೂತನ ಪ್ರಯೋಗದಿಂದ ವಾರದಲ್ಲಿ ಮೂರು ಲಕ್ಷ ಮೌಲ್ಯದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್‌ ಆಯುಕ್ತ ರಮನ್‌ ಗುಪ್ತ,(Commissioner of Police Raman Gupta) ಕಳೆದ ವಾರ ಕಳ್ಳತನ ಮಾಡಿದ ಮೊಬೈಲ್‌ಗಳ ಪತ್ತೆಗೆ ಇ-ಪೋರ್ಟಲ್‌(e Portal) ಆರಂಭಿಸಲಾಗಿತ್ತು. ಸದ್ಯ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊಬೈಲ್‌(Mobile) ಕಳೆದುಕೊಂಡ 30 ಜನರ ಮೊಬೈಲ್‌ ಪತ್ತೆಯಾಗಿವೆ ಎಂದರು.

Tap to resize

Latest Videos

ಬೈಕ್‌ ಸುಟ್ಟು ಹೋದ ಪ್ರಕರಣ: ಕ್ಲೇಮು ತಿರಸ್ಕರಿಸಿದ್ದ ವಿಮಾ ಕಂಪನಿಗೆ ಬಿತ್ತು ಭಾರಿ ದಂಡ!

ಸದ್ಯ ಹು-ಧಾ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಒಂದು ತಾಂತ್ರಿಕ ಕೊಠಡಿ ಆರಂಭಿಸಿದ್ದು, ಡಿಸಿಪಿ ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ನಾಲ್ಕು ಜನರು ತಂಡ ಕಾರ್ಯನಿರ್ವಹಿಸುತ್ತಿದೆ. 2022 ವರ್ಷದ ಇತ್ತೀಚಿನ ಮೊಬೈಲ್‌ ಪತ್ತೆ ಹಚ್ಚಲಾಗುತ್ತಿದೆ. ಉತ್ತಮ ಕಾರ್ಯನಿರ್ವಹಿಸಿ ನಮ್ಮ ಸಿಬ್ಬಂದಿಗೆ .10 ಸಾವಿರ ಬಹುಮಾನ ನೀಡಲಾಗಿದೆ ಎಂದರು.

ಮರಳಿ ಮೊಬೈಲ್‌ ನೀಡಿದ ಬಹುತೇಕರು ಬೇರೆಯವರಿಂದ ಮೊಬೈಲ್‌ ತೆಗೆದುಕೊಂಡವರಾಗಿದ್ದಾರೆ. ನಮ್ಮ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ವತಃ ಪೋಸ್ಟ್‌ ಮೂಲಕ ಕಚೇರಿಗೆ ಕಳುಹಿಸಿಕೊಡುತ್ತಿದ್ದಾರೆ. ಆದರೆ, ಮೊಬೈಲ್‌ ಕಳ್ಳತನ ಮಾಡುವರನ್ನು ಪತ್ತೆ ಹಚ್ಚುವುದು ಕಷ್ಟ. ಸದ್ಯ ನಮ್ಮ ಆದ್ಯತೆ ಮೊಬೈಲ್‌ ಕಳೆದುಕೊಂಡವರಿಗೆ ಹುಡುಕಿ ಕೊಡುವುದಾಗಿದೆ ಎಂದು ತಿಳಿಸಿದರು.

 

ಹುಬ್ಬಳ್ಳಿ: ಒಳ್ಳೆಯ ಆಡಳಿತ ನೀಡುವುದು ಬಿಜೆಪಿ ಡಿಎನ್‌ಎದಲ್ಲಿದೆ: ಸಮೀರ್

ಡಿಸಿಪಿಗಳಾದ ಸಾಹಿಲ್‌ ಬಾಗ್ಲಾ, ಗೋಪಾಲ ಬ್ಯಾಕೋಡ್‌ ಇದ್ದರು.

ನನ್ನ ಮೊಬೈಲ್‌ ಅಕ್ಟೋಬರ್‌ನಲ್ಲಿ ಕಳ್ಳತನವಾಗಿತ್ತು. ಮೊದಲು ಠಾಣೆಗೆ ಹೋಗಿ ದೂರು ದಾಖಲಿಸಲಾಗಿತ್ತು. ಆದರೆ, ಮೊಬೈಲ್‌ ದೊರೆತಿರಲಿಲ್ಲ. ಇ-ಪೋಟಲ್‌ ಆರಂಭಿಸಿರುವುದು ನೋಡಿ ಮಾಹಿತಿ ನೀಡಿದೆ. ಈಗ ಮೊಬೈಲ್‌ ದೊರೆತಿದ್ದು, ಈ ಯೋಜನೆ ತುಂಬ ಉಪಯುಕ್ತವಾಗಿದೆ

ಶಶಿಕಲಾ ಪೂಜಾರಿ. ಸಾರ್ವಜನಿಕರು.

ಇ-ಪೋರ್ಟಲ್‌ ಎಂದರೇನು?

ನಗರ ಪೊಲೀಸರು ಇ-ಪೋರ್ಟಲ್‌ ಆರಂಭಿಸಿದ್ದಾರೆ. ಅವರು ನೀಡಿದ ದೂರವಾಣಿ ಸಂಖ್ಯೆ ಮೊಬೈಲ್‌ಗೆ ಕಳೆದುಕೊಂಡವರು ಹಾಯ್‌.. ಎಂದು ಸಂದೇಶ ಕಳುಹಿಸಿದರೆ ಅವರಿಗೆ ಮರಳಿ ಒಂದು ವೆಬ್‌ಸೈಟ್‌ ಲಿಂಕ್‌ ಬರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ವೆಬ್‌ಸೈಟ್‌ ಓಪನ್‌ ಆಗಿ ಮೊಬೈಲ್‌ ಬಗ್ಗೆ ಮಾಹಿತಿಯ ಹಲವು ಪ್ರಶ್ನೆಗಳು ಬರುತ್ತವೆ. ಅಲ್ಲಿ ಎಲ್ಲದಕ್ಕೂ ಸೂಕ್ತವಾಗಿ ಉತ್ತರಿಸಬೇಕು. ಬಳಿಕ ಪೊಲೀಸರ ಈ ಮಾಹಿತಿಯ ಸಹಾಯದಿಂದ ಮೊಬೈಲ್‌ ಪತ್ತೆ ಹಚ್ಚಲು ಪ್ರಯತ್ನಿಸುತ್ತಾರೆ. ಮೊಬೈಲ್‌ ಸಿಕ್ಕರೆ ತಕ್ಷಣ ನಿಮ್ಮ ದೂರವಾಣಿಗೆ ಕರೆ ಮಾಡಿ ನೀಡುತ್ತಾರೆ.

click me!