ರೈತರು ಉದ್ಯಮಿಗಳಾಗುವತ್ತ ಚಿಂತನೆ ನಡೆಸಿ

By Kannadaprabha News  |  First Published Mar 4, 2023, 6:41 AM IST

ರೈತರು ಉತ್ಪಾದಿಸಿದ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ, ಪ್ಯಾಕಿಂಗ್‌ ಬ್ರ್ಯಾಂಡಿಂಗ್‌ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಲು ವಿಪುಲವಾದ ಅವಕಾಶಗಳಿವೆ. ಹೀಗಾಗಿ, ರೈತರು ಉದ್ಯಮಿಗಳಾಗುವತ್ತ ಚಿಂತನೆ ನಡೆಸಬೇಕು ಎಂದು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್‌. ಯೋಗೇಶ್‌ ತಿಳಿಸಿದರು.


 ಮೈಸೂರು :  ರೈತರು ಉತ್ಪಾದಿಸಿದ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ, ಪ್ಯಾಕಿಂಗ್‌ ಬ್ರ್ಯಾಂಡಿಂಗ್‌ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಲು ವಿಪುಲವಾದ ಅವಕಾಶಗಳಿವೆ. ಹೀಗಾಗಿ, ರೈತರು ಉದ್ಯಮಿಗಳಾಗುವತ್ತ ಚಿಂತನೆ ನಡೆಸಬೇಕು ಎಂದು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್‌. ಯೋಗೇಶ್‌ ತಿಳಿಸಿದರು.

ಮೈಸೂರು ತಾಲೂಕಿನ ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಉತ್ಪನ್ನಗಳನ್ನು ಸಂಸ್ಕರಿಸಿ, ಪ್ಯಾಕಿಂಗ್‌, ಬ್ರ್ಯಾಂಡಿಂಗ್‌ ಮಾಡಲು ಪಿಎಂಎಫ್‌ಎಂಇ ಯೋಜನೆಯಲ್ಲಿ ಶೇ. 50ರ ಸಹಾಯದನ ನೀಡಿ ಸರ್ಕಾರವು ಪೋತ್ಸಾಹಿಸುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

Latest Videos

undefined

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಅಭಿವೃದ್ಧಿಪಡಿಸಿರುವ ತಾಂತ್ರಿಕತೆಗಳನ್ನು ಮಂಡ್ಯ ವಲಯದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಚಂದ್ರಕಲಾ ತಿಳಿಸಿಕೊಟ್ಟರು.

ಸಿಎಫ್‌ಟಿಆರ್‌ಐ ವಿಜ್ಞಾನಿ ಡಾ. ಉಷಾ ಧರ್ಮರಾಜನ್‌ ಮಾತನಾಡಿ, ರೈತರು ಕಚ್ಚಾ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಆದಾಯ ಕಡಿಮೆ, ಅವುಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಸಿಎಫ್‌ಟಿಆರ್‌ಐ ವತಿಯಿಂದ ನೂರಾರು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಜ್ಞಾನಗಳನ್ನು ಬಳಸಿ ರೈತರು ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ರೈತರಾಗಿ ಹಲವು ರೀತಿಯ ಪ್ರಯತ್ನಗಳಿಂದ ಹೆಚ್ಚಿನ ಲಾಭಗಳಿಸುತ್ತಿರುವ ಗುಂಡ್ಲುಪೇಟೆಯ ನಾಗಾರ್ಜುನ, ಹುನಮನಹಳ್ಳಿಯ ಇಂದಿರಮ್ಮ ಮತ್ತು ಮಂಡ್ಯದ ನಿರಂಜನ್‌ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕೃಷಿ

ಉತ್ಪನ್ನಗಳ ಮೌಲ್ಯವರ್ಧನೆ- ಸಂಸ್ಕರಣೆ ಮಾರುಕಟ್ಟೆಯಲ್ಲಿನ ಸವಾಲುಗಳು ಮತ್ತು ಪರಿಹಾರೋಪಾಯಗಳನ್ನು ತಿಳಿಸಿದರು.

ಎರಡನೇ ದಿನದ ಅಧಿವೇಶನದಲ್ಲಿ ಕೃಷಿ ತಂತ್ರಜ್ಞೆ ಡಾ. ಚೈತ್ರ ಭರತ್‌ ಮಾತನಾಡಿ, ಗ್ರಾಹಕರ ಬೇಡಿಕೆಗನುಗುಣವಾಗಿ

ಜಾಣತನದ ಮಾರುಕಟ್ಟೆ, ಆನ್‌ಲೈನ್‌ ಮಾರುಕಟ್ಟೆ, ನೇರ ಮಾರಾಟಗಳಲ್ಲಿರುವ ಅವಕಾಶಗಳು, ಸವಾಲುಗಳು ಮತ್ತು ಮುಂಜಾಗ್ರತೆಗಳ ಬಗ್ಗೆ ತಿಳಿಸಿದರು.

ನಾಗನಹಳ್ಳಿ ವಿಸ್ತರಣಾ ಶಿಕ್ಷಣಾ ಘಟಕದ ವಿಜ್ಞಾನಿ ಡಾ. ನಾಗವೇಣಿ ಅವರು ಸಿರಿಧಾನ್ಯಗಳಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಿರುವ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು.

ತರಬೇತಿ ಕಾರ್ಯಕ್ರಮದ ಮೂರನೇ ದಿನದಲ್ಲಿ ಜಯಪುರ ಹೋಬಳಿಯ ಗೋಪಾಲಪುರ ಗ್ರಾಮದ ಪ್ರಗತಿಪರ ರೈತರಾದ ದಿಲೀಪ್‌ ಅವರು, ತಮ್ಮ ಜಮೀನಿನಲ್ಲಿ ಕ್ಷೇತ್ರ ಭೇಟಿ ಮಾಡಿಸುವ ಮೂಲಕ ಹೈನುಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ನೇರ ಮಾರುಕಟ್ಟೆಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮತ್ತೊಬ್ಬ ಪ್ರಗತಿಪರ ರೈತ ಹುಲ್ಲಹಳ್ಳಿ ಹೋಬಳಿ ಚಂಪೋಟಿ ಎಸ್ಟೇಟನ ತಂಕಚನ್‌ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಕಡಿಮೆ ಬಂಡವಾಳದ ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿಯನ್ನು ತಿಳಿಸಿಕೊಟ್ಟರು. ಕೋಕೋ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್‌, ಬ್ರ್ಯಾಂಡಿಂಗ್‌ ಮತ್ತು ನೇರ / ಆನ್‌ಲೈನ್‌ ಮಾರುಕಟ್ಟೆಮೂಲಕ ಲಾಭಗಳಿಕೆ ಕುರಿತು ತಮ್ಮ ಅನುಭವ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ 25 ಜನ ರೈತರು ಸ್ವ- ಇಚ್ಚೆಯಿಂದ ನೋಂದಾಯಿಸಿಕೊಂಡು ಸಕ್ರಿಯವಾಗಿ ಭಾಗವಹಿಸಿದರು. ಮೂರು ದಿನ ರೈತರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಕಲ್ಪಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಮಮತಾ, ವಜ್ರೇಶ್ವರಿ, ಕೃಷಿ ಅಧಿಕಾರಿಗಳಾದ ರಾಜಶೇಖರ್‌, ಗಂಗನರಸಿಂಹಯ್ಯ, ಶಿಲ್ಪ ಇದ್ದರು.

click me!