ಹೊರರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಕನ್ನಡ ಸಮ್ಮೇಳನ ನಡೆಯುತ್ತಿರುವುದು ಸಂತಸ. ಗಡಿ ಭಾಗ ಹೊಸೂರಿನ ನಿವಾಸಿಯಾದ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಪುಳಕ ತಂದಿದೆ: ಡಾ. ತಾ.ನಂ.ಕುಮಾರಸ್ವಾಮಿ.
ಆನೇಕಲ್(ಮಾ.04): ಕನ್ನಡ ಸಾಹಿತ್ಯ ಪರಿಷತ್ತು ತಮಿಳುನಾಡು ಘಟಕದ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ 4ರ ಶನಿವಾರ ಹಾಗೂ ಮಾ.5ರ ಭಾನುವಾರದಂದು ಚೆನ್ನೈ ನಗರದಲ್ಲಿನ ಕರ್ನಾಟಕ ಸಂಘದ ಆಶ್ರಯದಲ್ಲಿ ಯು.ರಾಮರಾವ್ ಕಲಾ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಸಮ್ಮೇಳನಾಧ್ಯಕ್ಷ ಲಯನ್ ಡಾ. ವೈ.ವೆಂಕಟಸ್ವಾಮಿ ರೆಡ್ಡಿ ತಿಳಿಸಿದರು.
ಅವರು ಆನೇಕಲ್‌ನ ವಿಧಾತ ವಿದ್ಯಾ ಸಂಸ್ಥೆಯಲ್ಲಿ ಲೇಖಕ ಹಾಗೂ ಸಂಶೋಧಕ ಡಾ. ತಾ.ನಂ.ಕುಮಾರಸ್ವಾಮಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಕನ್ನಡ ಸಮ್ಮೇಳನ ನಡೆಯುತ್ತಿರುವುದು ಸಂತಸ. ಗಡಿ ಭಾಗ ಹೊಸೂರಿನ ನಿವಾಸಿಯಾದ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವುದು ಪುಳಕ ತಂದಿದೆ. ನಾಡು, ನುಡಿ, ಗಡಿ, ಜಲ, ನೆಲ ಮುಂತಾದ ಸೂಕ್ಷ್ಮ ವಿಚಾರಗಳಿದ್ದರೂ ಕನ್ನಡಿಗರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು, ಪರಸ್ಪರ ಹಂಚಿಕೊಳ್ಳಲು ಸಮ್ಮೇಳನ ಉತ್ತಮ ವೇದಿಕೆಯಾಗಿದೆ ಎಂದು ಶ್ಲಾಘನೀಯ ಎಂದರು.
ಕಳಸದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಶಾಲೆ ಉಳಿಸಲು ಸರ್ಕಾರ ಮುಂದಾಗಲಿ, ಚಟ್ನಳ್ಳಿ ಮಹೇಶ್
ಸಾಹಿತಿ, ಸಂಶೋಧಕ ಡಾ. ತಾನಂ ಕುಮಾರಸ್ವಾಮಿ ಮಾತನಾಡಿ, ನಾನು ಸಂಶೋಧಿಸಿ ಬರೆದ ‘ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು ಹಾಗೂ ಆಳಿದ ದೊರೆಗಳ ಒಂದು ಅಧ್ಯಯನ’ ವಿಷಯಗಳನ್ನು ಪರಿಗಣಿಸಿ ಡಾಕ್ಟರೆಟ್ ಪ್ರಶಸ್ತಿ ಪ್ರಧಾನ ಮಾಡಿದೆ. ಹಾಗೆಯೇ ಮಾ.4 ಮತ್ತು 5ರಂದು ನಡೆಯಲಿರುವ ಹೊರರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಹಾಗೂ ತಮಿಳುನಾಡು ಘಟಕದ ಕಸಾಪ ಅಧ್ಯಕ್ಷೆ ಡಾ. ತಮಿಳು ಸೆಲ್ವಿ, ಚಲನಚಿತ್ರ ನಟ ದೊಡ್ಡಣ್ಣ, ಮಾಜಿ ಆರೋಗ್ಯ ಮಂತ್ರಿ ಎಚ್.ವಿ.ಹಂಡೆ ಮುಂತಾದ ದಿಗ್ಗಜರು ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಹಾಗೂ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನಾಧ್ಯಕ್ಷರ ಕಿರು ಪರಿಚಯ
ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ಸ್ವತಂತ್ರ ಪೂರ್ವದಲ್ಲಿ ಜನಿಸಿದ ವೈ.ಎಸ್.ವಿ.ರೆಡ್ಡಿ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಡಿಪ್ಲೊಮಾವನ್ನು ಕರ್ನಾಟಕದಲ್ಲಿ ಪೂರೈಸಿ, 1967ರಲ್ಲೇ ವಿದ್ಯಾರ್ಥಿ ನಾಯಕನಾಗಿ ಗಾಂಧಿವನ ನಿರ್ಮಾಣ ಕಾಯಕದಲ್ಲಿ ತೊಡಗಿಸಿಕೊಂಡರು. ಹೊಸೂರಿನಲ್ಲಿ ಭಾರತ ಸರ್ಕಾರದ ಪ್ರಥಮ ಹಾಗೂ ಕಡೆಯ ಗವರ್ನರ್ ಜನರಲ್ ರಾಜಾಜಿ (ಡಾ. ಎಸ್.ರಾಜಗೋಪಾಲಾಚಾರ್ಯ) ಓದಿದ್ದ ಆರ್ವಿ ಶಾಲೆಯ ಕಟ್ಟಡದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಹೊಸೂರಿನಲ್ಲಿ ವಾಯು ಸಂಚಾರ ಪಥ, ಶುದ್ಧ ಕುಡಿನೀರು ಘಟಕ, ಲಯನ್ಸ್ ಕಣ್ಣಿನ ಆಸ್ಪತ್ರೆ ನಿರ್ಮಾಣ, ದೇಗುಲಗಳ ನವೀಕರಣ, ವಿದ್ಯಾಸಂಸ್ಥೆಗಳ ನಿರ್ಮಾಣ ಕಾರ್ಯದಲ್ಲಿ ನೆರವಾಗಿದ್ದಾರೆ.