* ಕೇಳುವ ಪ್ರಶ್ನೆಗೆ ಸರಳವಾಗಿ ಉತ್ತರ ನೀಡುವ ಪೋರ
* "ಇಂಡಿಯನ್ ಬುಕ್ ಆಫ್ ರೆಕಾರ್ಡ್"ನಲ್ಲಿ ಸ್ಥಾನ ಪಡೆದ ಕರಣಂ ಅಕಿರ್ ನಂದನ್
* ಬಾಲಕನ ಈ ಸಾಧನೆಗೆ ತಾಯಿಯ ತರಬೇತಿಯೇ ಕಾರಣ
ರಾಮಮೂರ್ತಿ ನವಲಿ
ಗಂಗಾವತಿ(ಜೂ.30): ಎಷ್ಟೋ ವಿದ್ಯಾರ್ಥಿಗಳು, ಯುವಕರು ಶಾಲಾ ಕಾಲೇಜುಗಳಲ್ಲಿ ಮತ್ತು ಉದ್ಯೋದಗ ಸಂದರ್ಭದಲ್ಲಿ ಸಂದರ್ಶನ ನೀಡುತ್ತಿರುವಾಗ ಕೇಳುವ ಪ್ರಶ್ನೆಗೆ ಉತ್ತರ ನೀಡದೆ ವಿಫಲರಾದವರ ಸಂಖ್ಯೆ ಹೆಚ್ಚು. ಆದರೆ ಇಲ್ಲಿಯ ಮೂರು ವರ್ಷದನೋರ್ವ ತನ್ನ ವಾಕ್ ಚಾತುರ್ಯ ಮತ್ತು ಜ್ಞಾಪಕ ಶಕ್ತಿಯಿಂದ ಪಟ ಪಟನೇ ಕೇಳುವ ಪ್ರಶ್ನೆಗೆ ಉತ್ತರ ನೀಡಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ.
ಗಂಗಾವತಿಯ ದಿ. ಜಯಸಿಂಹ ದಂಡಿನ್ ಎನ್ನುವರ ಮೊಮ್ಮಗ ಕರಣಂ ಅಕಿರ್ ನಂದನ್ ಎನ್ನುವ ಮೂರು ವರ್ಷದ ಬಾಲಕ ಈಗ ಸಾಧನೆ ಮಾಡಿದ್ದಾನೆ. ತಂದೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಪ್ರಶಾಂತ ಅವರ ಪುತ್ರ ಕರಣಂ ಅಕಿರ್ ನಂದನ್ ಎನ್ನುವ ಮೂರು ವರ್ಷದ ಪೋರನಿಗೆ ತಾಯಿ ಚಂದ್ರಿಕಾ ಅವರ ತರಬೇತಿಯೇ ಕಾರಣವಾಗಿದೆ.
ತನ್ನ ಚಿಕ್ಕ ವಯಸ್ಸಿನಿಂದಲೂ ಸುತ್ತ - ಮುತ್ತ ಇರುವ ವಸ್ತುಗಳ ಬಗ್ಗೆ , ಪುಸ್ತಕಗಳ ಮೇಲೆ ತನಗಿರುವ ಕುತೂಹಲವನ್ನು ಗಮನಿಸಿದ ಬಾಲಕನ ತಾಯಿ ಅವನಿಗೆ ಇನ್ನಷ್ಟು ತರಬೇತಿ ನೀಡಿ ಈ ಚಿಕ್ಕ ವಯಸ್ಸಿನಲ್ಲಿ "ಇಂಡಿಯನ್ ಬುಕ್ ಆಫ್ ರೆಕಾರ್ಡ್" ನಲ್ಲಿ ಸ್ಥಾನ ಪಡೆಯಲು ಸಹಕರಿಸಿದ್ದಾರೆ.
ಸಮುದ್ರದಲ್ಲಿ 1.4 ಕಿಮಿ ಲೋಟಸ್ ಫ್ಲೋಟ್ ದಾಖಲೆ ಬರೆದ ಉಡುಪಿಯ 65ರ ಗಂಗಾಧರ್
ತವರೂರು ಕೊಪ್ಪಳದಲ್ಲಿ ಮಾರ್ಗದರ್ಶನ
ಕರಣಂ ಅಕಿರ್ ನಂದನ್ ತಂದೆ ಪ್ರಶಾಂತ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರು ತಾಲೂಕವಾಗಿದ್ದರು, ತಾಯಿ ಚಂದ್ರಿಕಾ ಕೊಪ್ಪಳ ತವರೂರು ಆಗಿದೆ. ಕೊಪ್ಪಳದಲ್ಲಿರುವ ತಾಯಿ ತನ್ನ ಪುತ್ರನಿಗೆ ಪತ್ರಿಕೆಗಳಲ್ಲಿ ಬರುವ ಸುದ್ದಿ, ಕಥೆ, ಕವನ, ರಾಜಕೀಯ, ಧಾರ್ಮಿಕ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಾನು ಓದಿ ಪುತ್ರಗೆ ಮನವರಿಕೆ ಮಾಡುತ್ತಿದ್ದಾಳೆ.
ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಜನರಲ್ ನಾಲೇಜ್ (ಸಾಮಾನ್ಯ ಜ್ಞಾನ) ನೀಡುವ ಮೂಲಕ ಮುಂದಿನ ಅಭ್ಯಾಸಕ್ಕಾಗಿ ಪೂರಕವಾಗುವ ಉದ್ದೇಶದಿಂದ ತರಬೇತಿ ನೀಡುತ್ತಿದ್ದಾಳೆ. ತಂದೆ ವಿದ್ಯುತ್ ಶಕ್ತಿ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಪದವಿಧರರಾಗಿದ್ದಾರೆ. ಈ ಪೋರನಿಗೆ ಕೇಳುವ ಪ್ರಶ್ನೆಗೆ ಪಟ ಪಟನೆ ಉತ್ತರ ನೀಡುತ್ತಾನೆ. ದಶಾವತಾರ, ಆಂಗ್ಲ ಮತ್ತು ತೆಲುಗು ಗೀತೆಗಳು, ಆಂಗ್ಲ ವರ್ಣಮಾಲೆ, ಪ್ರಾಣಿ, ಪಕ್ಷಿ, ಜಲಚರಗಳು, ವಾಹನಗಳು, 8 ಶ್ಲೋಕಗಳು, 12 ಭಾರತದ ಚಿಹ್ನೆಗಳು, ವಾರ ಮತ್ತು ತಿಂಗಳ ಹೆಸರುಗಳು, ಬಣ್ಣ ಮತ್ತು ಆಕಾರಗಳು ಹೀಗೆ ನಾನಾ ವಿಷಯಗಳ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸುತ್ತಾನೆ.
ಅತಿ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿ "ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು" ಎಂಬ ಗಾದೆ ನಿಜ ಎಂದು ತೋರಿಸಿಕೊಟ್ಟಿದ್ದಾನೆ. ಈ ಪೋರನ ಸಾಧನೆಗೆ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪುತ್ರ ಕರಣಂ ಅಕಿರ ನಂದನ್ ಮೂರು ವರ್ಷದ ಬಾಲಕ. ಈತನಿಗೆ ನೆನಪಿನ ಶಕ್ತಿ ಹೆಚ್ಚು. ಒಂದು ಬಾರಿ ತಿಳಿಸಿದರೆ. ನಂತರ ತಾನೇ ಪಟ ಪಟನೆ ಉತ್ತರ ನೀಡುತ್ತಾನೆ. ತಾಯಿಯ ಮಾರ್ಗದರ್ಶನ ಇದ್ದು, ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಕೊಡಿಸಲಾಗುತ್ತದೆ ಎಂದು ಬಾಲಕನ ತಂದೆ ಪ್ರಶಾಂತ ಕರಣಂ ತಿಳಿಸಿದ್ದಾರೆ.