'ಮನ್‌​ಮುಲ್‌ ಹಗ​ರ​ಣ ಸಂಬಂಧ ಯಾವ ತನಿಖೆಯಾದರೂ ಮಾಡಿಕೊಳ್ಳಲಿ'

Kannadaprabha News   | Asianet News
Published : Jun 30, 2021, 10:18 AM IST
'ಮನ್‌​ಮುಲ್‌ ಹಗ​ರ​ಣ ಸಂಬಂಧ ಯಾವ ತನಿಖೆಯಾದರೂ ಮಾಡಿಕೊಳ್ಳಲಿ'

ಸಾರಾಂಶ

ಮುಖ್ಯಮಂತ್ರಿ ಬಳಿ ನಾನೇ ಸಮಯ ನಿಗದಿಪಡಿಸುತ್ತೇನೆ ಏಳು ಶಾಸಕರ ಜೊತೆಗೆ ಮನ್‌ಮುಲ್‌ ಆಡಳಿತ ಮಂಡಳಿ ನಿರ್ದೇಶಕರನ್ನೂ ಕಳುಹಿಸಿಕೊಡುತ್ತೇನೆ ಹಗರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ  - ಎಚ್‌ ಡಿಕೆ

ಮಳವಳ್ಳಿ (ಜೂ.30): ಮುಖ್ಯಮಂತ್ರಿ ಬಳಿ ನಾನೇ ಸಮಯ ನಿಗದಿಪಡಿಸುತ್ತೇನೆ. ಏಳು ಶಾಸಕರ ಜೊತೆಗೆ ಮನ್‌ಮುಲ್‌ ಆಡಳಿತ ಮಂಡಳಿ ನಿರ್ದೇಶಕರನ್ನೂ ಕಳುಹಿಸಿಕೊಡುತ್ತೇನೆ. 

ಹಗರಣದ ಬಗ್ಗೆ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಈ ಮೂಲಕ ಮನ್‌ಮುಲ್‌ ಆಡಳಿತ ಮಂಡಳಿ ವಿರುದ್ಧದ ಮಾಜಿ ಸಚಿವ ಚಲುವರಾಯಸ್ವಾಮಿ ಟೀಕೆಗೆ ತಿರುಗೇಟು ನೀಡಿದರು.

ಬಹಿರಂಗ ಹೇಳಿಕೆ ಕೊಡಲಿ : ಎಚ್‌ಡಿಕೆ - ದೇವೇಗೌಡರಿಗೆ ಕೈ ನಾಯಕ ಸವಾಲ್

ನೀರು ಮಿಶ್ರಿತ ಹಾಲು ಹಗರಣದ ತನಿಖೆಗೆ ಜೆಡಿಎಸ್‌ ವರಿಷ್ಠರೇ ಅಡ್ಡಿಯಾಗಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಾಲಿಗೆ ನೀರು ಬೆರೆಸುತ್ತಿರುವುದು 10-15 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. 

ಆದರೆ, ಮಹಾನುಭಾವರೊಬ್ಬರು ಹಾಲಿ ಆಡಳಿತ ಮಂಡಳಿ ಸೂಪರ್‌ಸೀಡ್‌ ಆಗಬೇಕೆನ್ನುತ್ತಿದ್ದಾರೆ. ಅವರ (ಚಲುವರಾಯಸ್ವಾಮಿ) ನಾಯಕತ್ವದಲ್ಲೇ ಸಿಎಂ ಬಳಿ ನಮ್ಮ ಶಾಸಕರು, ಆಡಳಿತ ಮಂಡಳಿಯವರನ್ನು ಕರೆದುಕೊಂಡು ಹೋಗಿ ಯಾವ ತನಿಖೆಯನ್ನಾದರೂ ಮಾಡಿಸಿಕೊಳ್ಳಲಿ ಎಂದು ಹೇಳಿದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು