* ಮಂಗಳವಾರ 10 ಜನರಿಗೆ ಕೋವಿಡ್ ಪಾಸಿಟಿವ್, 8 ಜನರ ಸಾವು
* ಹಾವೇರಿ ಜಿಲ್ಲೆಯಲ್ಲಿ ಈ ವರೆಗೆ 21,899 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢ
* ಈ ವರೆಗೆ 598 ಜನರು ಕೋವಿಡ್‌ನಿಂದ ಸಾವು
ಹಾವೇರಿ(ಜೂ.30): ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆಯ ಸೋಂಕಿನ ಪ್ರಕರಣಗಳು ಇಳಿಮುಖಗೊಂಡಿದ್ದರೂ, ದಲ್ಲಿ ಮಾತ್ರ ಇಳಿಕೆ ಕಂಡು ಬರುತ್ತಿಲ್ಲ. ಜಿಲ್ಲೆಯಲ್ಲಿ ಮಂಗಳವಾರ 10 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದರೆ, 8 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 21,899 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮಂಗಳವಾರ 22 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದು ವರೆಗೆ 21,089 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈ ವರೆಗೆ 598 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, 212 ಸಕ್ರಿಯ ಪ್ರಕರಣಗಳಿವೆ.
ಡೆಲ್ಟಾಪ್ಲಸ್ ವೈರಸ್ ಬಗ್ಗೆ ರಾಜ್ಯದಲ್ಲಿ ತೀವ್ರ ನಿಗಾ: ಸಚಿವ ಬೊಮ್ಮಾಯಿ
ತಾಲೂಕುವಾರು ಹಾನಗಲ್ಲ-1, ಹಾವೇರಿ-4, ಹಿರೇಕೆರೂರು-3, ರಾಣಿಬೆನ್ನೂರು-2 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ ಹಾನಗಲ್ಲ-3, ಹಾವೇರಿ-2, ಹಿರೇಕೆರೂರು-2, ರಾಣಿಬೆನ್ನೂರು-6, ಸವಣೂರು-3, ಶಿಗ್ಗಾವಿ-5, ಇತರೆ-1 ಜನರು ಬಿಡುಗಡೆ ಹೊಂದಿದ್ದಾರೆ.
8 ಸೋಂಕಿತರ ಸಾವು
ಜಿಲ್ಲೆಯಲ್ಲಿ ಮಂಗಳವಾರ 8 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹಿರೇಕೆರೂರು ತಾಲೂಕಿನ 35 ವರ್ಷದ ಪುರುಷ, 70 ವರ್ಷದ ವೃದ್ಧೆ, ರಾಣಿಬೆನ್ನೂರು ತಾಲೂಕಿನ 54 ವರ್ಷದ ಮಹಿಳೆ, ಬ್ಯಾಡಗಿ ತಾಲೂಕಿನ 48 ವರ್ಷದ ಪುರುಷ, ಸವಣೂರ ತಾಲೂಕಿನ 60 ವರ್ಷದ ವೃದ್ಧೆ, ಹಾನಗಲ್ಲ ತಾಲೂಕಿನ 40 ವರ್ಷದ ಮಹಿಳೆ ಹಾಗೂ ಬೇರೆ ಜಿಲ್ಲೆಯ 67 ವರ್ಷದ ವೃದ್ಧೆ, 60 ವರ್ಷದ ಪುರುಷ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಡಿಎಚ್‌ಒ ಡಾ. ಎಚ್.ಎಸ್.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.