ಪಾಸ್‌ವರ್ಡ್‌ ಕದ್ದು 3.66 ಕೋಟಿ ಬಿಟ್‌ ಕಾಯಿನ್‌ ದೋಚಿದ ಕಳ್ಳರು!

By Kannadaprabha News  |  First Published Mar 19, 2020, 9:57 AM IST

ವ್ಯಾಲೆಟ್‌ನಲ್ಲಿದ್ದ ಪಾಸ್‌ವೈರ್ಡ್‌ ಕದ್ದ ಸೈಬರ್‌ ಕಳ್ಳರು| ಜ.11ರಿಂದ ಮಾ.11ರವರೆಗೆ ಕೃತ್ಯ| 3.66 ಕೋಟಿ ಬಿಟ್ ಕಾಯಿನ್ ದೋಚಿದ ಖದೀಮರು| ಈ ಸಂಬಂಧ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು| 


ಬೆಂಗಳೂರು(ಮಾ.19): ಗ್ರಾಹಕರ ಬ್ಯಾಂಕ್‌ ಖಾತೆಗಳಲ್ಲಿ ಹಣ ದೋಚುತ್ತಿದ್ದ ಸೈಬರ್‌ ಕಳ್ಳರು, ಈಗ ಬಿಟನ್‌ ಕಾಯಿನ್‌ ಕಂಪನಿಯೊಂದರ ಖಾತೆಗಳಿಗೆ ಕನ್ನ ಹಾಕಿ 3.66 ಕೋಟಿಯನ್ನು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಮಹದೇವಪುರದ ಬಿಟ್‌ಚಿಫೆರ್‌ ಲ್ಯಾಬ್ಸ್‌ ಎಲ್‌ಎಲ್‌ಪಿ ಕಂಪನಿಯ ಗ್ರಾಹಕರೇ ಹಣ ಕಳೆದುಕೊಂಡಿದ್ದು, ಈ ಬಗ್ಗೆ ಸಿಐಡಿಯ ಸೈಬರ್‌ ಕ್ರೈಂ ಠಾಣೆಗೆ ಕಂಪನಿ ಸಿಇಒ ಅಶಿಷ್‌ ಸೋನಿ ದೂರು ನೀಡಿದ್ದಾರೆ. ಬಿಟ್‌ ಚಿಫೆರ್‌ ಲ್ಯಾಬ್‌ನಲ್ಲಿ ವಿಮಲ್‌ ಸಾಗರ್‌ ತಿವಾರಿ ಹಾಗೂ ಗೋವಿಂದ್‌ ಕುಮಾರ್‌ ಸೋನಿ ಅವರು ವ್ಯಾಲೆಟ್‌ ಹೊಂದಿದ್ದಾರೆ.

Tap to resize

Latest Videos

ಬೆಂಗಳೂರು: ಅಪಾರ್ಟ್‌ಮೆಂಟ್ ನಿವಾಸಿಗಳೆ ಎಚ್ಚರ, NGO ಕಳ್ಳಿಯರು ಬರ್ತಾರೆ ಹುಷಾರ್!

ಈ ಮೂಲಕ ಬಿಟ್‌ ಕಾಯಿನ್‌ ವ್ಯವಹಾರದಲ್ಲಿ ತೊಡಗಿದ್ದು, ಎಲ್ಲ ಪಾಸ್‌ವರ್ಡ್‌ಗಳನ್ನು ವ್ಯಾಲೆಟ್‌ನಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಇದೇ ವರ್ಷದ ಜ.11ರಿಂದ ಮಾ.11 ನಡುವೆ ವ್ಯಾಲೆಟ್‌ಗೆ ಲಾಗಿನ್‌ ಆಗಿ ಸೈಬರ್‌ ಕಳ್ಳರು ಪಾಸ್‌ವರ್ಡ್‌ ಕದ್ದಿದ್ದಾರೆ. ಆನಂತರ ಆ ಖಾತೆಗಳಲ್ಲಿ 3.66 ಕೋಟಿ ಮೌಲ್ಯದ ಬಿಟ್‌ ಕಾಯಿನ್‌ ಎಗರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಅಶಿಷ್‌ ಸೋನಿ ಮನವಿ ಮಾಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಸೈಬರ್‌ ಲ್ಯಾಬ್‌ ತಜ್ಞರ ಸಹಾಯ ಕೋರಲಾಗಿದೆ ಎಂದು ಸೈಬರ್‌ ಕ್ರೈಂ ಠಾಣೆ ಪೊಲೀಸರು ತಿಳಿಸಿದ್ದಾರೆ.
 

click me!