ಕಾಮುಕ ತಂದೆಯಿಂದ ಮಗಳ ಮೇಲೆಯೇ 3 ವರ್ಷ ನಿರಂತರ ಅತ್ಯಾಚಾರ

By Kannadaprabha News  |  First Published Mar 19, 2020, 9:56 AM IST

ಕಾಮುಕ ತಂದೆಯೇ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಾಲಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಪೆರು​ವಾ​ಯಿ​ಯಲ್ಲಿ ನಡೆ​ದಿದೆ.


ಮಂಗಳೂರು(ಮಾ.19): ಕಾಮುಕ ತಂದೆಯೇ ಅಪ್ರಾಪ್ತ ವಯಸ್ಕ ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಬಾಲಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಪೆರು​ವಾ​ಯಿ​ಯಲ್ಲಿ ನಡೆ​ದಿದೆ. ಆರೋಪಿ ತಂದೆಯನ್ನು ವಿಟ್ಲ ಪೋಲೀಸರು ಬಂಧಿಸಿದ್ದಾರೆ.

ಆರೋಪಿ, ಅಪ್ರಾಪ್ತ ಮಗಳಿಗೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದ, ಎಂದು ಮಗಳು ದೂರಿನಲ್ಲಿ ತಿಳಿಸಿದ್ದಾಳೆ. ಸೋಮವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಮತ್ತೆ ಅತ್ಯಾಚಾರವೆಸಗಿದ್ದು, ಬಾಲಕಿ ಅಸ್ವಸ್ಥಳಾಗಿದ್ದಳು.

Tap to resize

Latest Videos

undefined

ಶಂಕಿತರ ನಿಗಾಗೆ ಖಾಸಗಿ ಹೋಟೆಲ್‌, ರೆಸಾರ್ಟ್‌ ಬಳಕೆ!

ಈ ಹಿನ್ನೆಲೆಯಲ್ಲಿ ದೈಹಿಕವಾಗಿ ಬಳಲುತ್ತಿದ್ದ ಈಕೆಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದಾಗ ಅವಳು ಆಸ್ಪತ್ರೆಯಲ್ಲಿ ಎಲ್ಲಾ ವಿಚಾರಗಳನ್ನು ಬಾಯಿಬಿಟ್ಟಿದ್ದು, ದೂರು ದಾಖಲಾಗಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್‌ ಹಾಗೂ ವಿಟ್ಲ ಎಸ್‌.ಐ. ವಿನೋದ್‌ ರೆಡ್ಡಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

click me!