ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಭಾಗಮಂಡಲದಲ್ಲಿ 292 ಮಿ.ಮೀ ದಾಖಲೆ ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1304.40 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2647.96 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 188.35 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 142.50 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 105.88 ಮಿ.ಮೀ ಮಳೆಯಾಗಿದೆ.
ಮಡಿಕೇರಿ(ಆ.08): ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಭಾಗಮಂಡಲದಲ್ಲಿ 292 ಮಿ.ಮೀ ದಾಖಲೆ ಮಳೆಯಾಗಿದೆ. ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 145.58 ಮಿ.ಮೀ. ಕಳೆದ ವರ್ಷ ಇದೇ ದಿನ 13.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1304.40 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2647.96 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 188.35 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 142.50 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 105.88 ಮಿ.ಮೀ ಮಳೆಯಾಗಿದೆ.
ಹಳಿಗೆ ಕುಸಿದ ಬೃಹತ್ ಗುಡ್ಡ: 2ನೇ ದಿನವೂ ರೈಲು ಸಂಚಾರ ಸ್ಥಗಿತ
ಮಡಿಕೇರಿ ಕಸಬಾ 139.40, ನಾಪೋಕ್ಲು 197.20, ಸಂಪಾಜೆ 124.40, ಭಾಗಮಂಡಲ 292.40, ವಿರಾಜಪೇಟೆ ಕಸಬಾ 154, ಹುದಿಕೇರಿ 144.20, ಶ್ರೀಮಂಗಲ 180.60, ಪೊನ್ನಂಪೇಟೆ 205.20, ಅಮ್ಮತ್ತಿ 103, ಬಾಳೆಲೆ 68, ಸೋಮವಾರಪೇಟೆ ಕಸಬಾ 121.80, ಶನಿವಾರಸಂತೆ 104.40, ಶಾಂತಳ್ಳಿ 222.60, ಕೊಡ್ಲಿಪೇಟೆ 100.23, ಕುಶಾಲನಗರ 31, ಸುಂಟಿಕೊಪ್ಪ 55.30 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ: ಮಳೆಯಬ್ಬರಕ್ಕೆ 20ಕ್ಕೂ ಹೆಚ್ಚು ಕಟ್ಟಡಳಿಗೆ ಹಾನಿ