ಕೊಡಗು ರೆಡ್ ಕ್ರಾಸ್ ಘಟಕ ನಗರದ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಬೆಚ್ಚನೆಯ ಉಡುಪುಗಳನ್ನು ನೀಡಲಾಯಿತು. ರೆಡ್‌ಕ್ರಾಸ್ ವತಿಯಿಂದ ನಗರದ ಶಿಶುಕಲ್ಯಾಣ ಸಂಸ್ಥೆಯ 25 ಮಕ್ಕಳಿಗೆ ಮಳೆಗಾಲಕ್ಕಾಗಿ ಬೆಚ್ಚನೆಯ ಉಡುಪುಗಳು, ಜಮಖಾನ, ಹೊದಿಕೆ, ಟವಲ್, ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಯಿತು.
ಮಡಿಕೇರಿ(ಆ.08): ಕೊಡಗು ರೆಡ್‌ಕ್ರಾಸ್ ಘಟಕದ ವತಿಯಿಂದ ಮಳೆಗಾಲ ಹಿನ್ನೆಲೆಯಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಬೆಚ್ಚನೆಯ ಉಡುಪುಗಳನ್ನು ನೀಡಲಾಯಿತು.
ರೆಡ್‌ಕ್ರಾಸ್ ವತಿಯಿಂದ ನಗರದ ಶಿಶುಕಲ್ಯಾಣ ಸಂಸ್ಥೆಯ 25 ಮಕ್ಕಳಿಗೆ ಮಳೆಗಾಲಕ್ಕಾಗಿ ಬೆಚ್ಚನೆಯ ಉಡುಪುಗಳು, ಜಮಖಾನ, ಹೊದಿಕೆ, ಟವಲ್, ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಯಿತು.
ಉಕ್ಕಿ ಹರಿಯುತ್ತಿದೆ ನೇತ್ರಾವತಿ, ಕುಮಾರಧಾರ: ಪ್ರವಾಹದ ಆತಂಕ
ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಕಾರ್ಯದರ್ಶಿ ಎಚ್.ಆರ್. ಮುರಳೀಧರ್, ನಿರ್ದೇಶಕರಾದ ಕೆ.ಡಿ.ದಯಾನಂದ್, ಎಂ.ಧನಂಜಯ್, ಪ್ರಸಾದ್‌ಗೌಡ, ಕೊಡಗು ಶಿಶುಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕೆ.ಮೋಹನ್ ಮೊಣ್ಣಪ್ಪ, ಶಶಿಮೊಣ್ಣಪ್ಪ, ಶಿಲ್ಪ ರವೀಂದ್ರ ರೈ ಹಾಜರಿದ್ದರು.
ಹಳಿಗೆ ಕುಸಿದ ಬೃಹತ್ ಗುಡ್ಡ: 2ನೇ ದಿನವೂ ರೈಲು ಸಂಚಾರ ಸ್ಥಗಿತ