ತಂಗಳು ಬಿರಿಯಾನಿ ತಿಂದು ಮೂರು ಮಕ್ಕಳು ಸೇರಿದಂತೆ 25 ಮಂದಿ ಕೂಲಿ ಕಾರ್ಮಿಕರು ಅಸ್ವಸ್ಥರಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಅರೇಪಾಳ್ಯ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ (ಜು.20): ಹುಟ್ಟು ಹಬ್ಬದ ತಂಗಳು ಬಿರಿಯಾನಿ ಸೇವಿಸಿ ಮೂರು ಮಕ್ಕಳು ಸೇರಿದಂತೆ 25 ಮಂದಿ ಅಸ್ವಸ್ಥತಗೊಂಡಿದ್ದು ಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಣಗಳ್ಳಿ ಗ್ರಾಮದ ಪುಟ್ಟ ಲಕ್ಷಮ್ಮ( 55), ಪುಟ್ಟ ತಾಯಮ್ಮ (40), ಸಿದ್ದಮ್ಮ(70) ದೇವಿ ( 28) ಮಹದೇವಮ್ಮ (60) ಇತ್ತಲದೊಡ್ಡಿ ಗ್ರಾಮದ ಮೇಘಾನಾ(13), ಲಾವಣ್ಯ (7), ಕಮಲ(25), ಯಶವಂತ್(9), ಭಾಗ್ಯ(33), ಪ್ರೀಯಾಂಕ (18 ವ?ರ್) ಇನ್ನಿತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜು.18 ರಂದು ಅರೇಪಾಳ್ಯ ಗ್ರಾಮದಲಿ ಸಂತೋಷ್ ಎಂಬುವವರು ಮಗನ ಹುಟ್ಟುಹಬ್ಬಕ್ಕೆ ಚಿಕನ್ ಬಿರಯಾನಿ ಮಾಡಿಸಿ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಅಂದು ಬಿರಿಯಾನಿ ಹೆಚ್ಚುವರಿ ಮಾಡಿದ್ದರಿಂದ ಬಹಳಷ್ಟು ಉಳಿದಿತ್ತು. ಮಾರನೆಯ ದಿನ ಸಂತೋಷ್ ಅವರ ಜಮೀನಿಗೆ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರಿಗೆ ಉಳಿದಿದ್ದ ತಂಗಳು ಬಿರಿಯಾನಿ ತಿನ್ನಲು ನೀಡಲಾಗಿದ್ದು ತಿಂದ ಕಾರ್ಮಿಕರು ಮನೆಗೂ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಮಕ್ಕಳು ಸೇವಿಸಲು ನೀಡಿದ್ದಾರೆ ತಿಂದವರೆಲ್ಲರಿಗೂ ಸಂಜೆಯಾಗುತ್ತಿದಂತೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ.
undefined
ಇದನ್ನೂ ಓದಿ: ಬಗೆಹರಿಯದ ರಾಯಚೂರು ಕಲುಷಿತ ನೀರು ಸಮಸ್ಯೆ, ಮಹಿಳೆ ಸಾವು, 40 ಜನರು ಅಸ್ವಸ್ಥ
ಬಳಿಕ ಎಲ್ಲರೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಶಾಸಕರ ಭೇಟಿ: ವಿಚಾರ ತಿಳಿದ ತಕ್ಷಣ ಶಾಸಕ ಎನ್.ಮಹೇಶ್ ಆಸ್ಪತ್ರೆಗೆ ಭೇಟಿ ಮಾಡಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾರ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಚರ್ಚಿಸಿ ಯಾವುದೇ ಅಹಿತಕರ ಘಟನೆಯಾಗದಂತೆ ಉತ್ತಮ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮರಿಸ್ವಾಮಿ, ಪಿಎಸ್‌ಐ ಮಂಜುನಾಥ್, ಚೇತನ್, ಶಂಕನಪುರ ಜಗದೀಶ್, ಜಕಾವುಲ್ಲಾ, ಮಹಾದೇವಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.