ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ 24,140 ಜನರಿಗೆ ಸೋಂಕಿನ ಲಕ್ಷಣ!

By Kannadaprabha NewsFirst Published May 24, 2021, 9:42 AM IST
Highlights

* ಗ್ರಾಮ ಪಡೆಯ ಸರ್ವೇ ಕಾರ್ಯದಿಂದ ಪತ್ತೆ
* 55 ಗ್ರಾಮಗಳು ಕೋವಿಡ್‌ ಮುಕ್ತ
* ಕೊಟ್ಟೂರು ತಾಲೂಕಿನಲ್ಲಿ ಅತಿ ಕಡಿಮೆ ಸೋಂಕಿತರು 
 

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಮೇ.24): ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ ಸೋಂಕು ನಿಯಂತ್ರಿಸಲು ಕೈಗೊಂಡಿರುವ ಸರ್ವೇ ಕಾರ್ಯದಿಂದ 237 ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಒಟ್ಟು 24,140 ಜನರಿಗೆ ಕೋವಿಡ್‌ ಸೋಂಕು ಪತ್ತೆಯಾಗಿದೆ.

ಸೋಂಕನ್ನು ಹದ್ದುಬಸ್ತಿಗೆ ತರಲು ಜಿಪಂನಿಂದ ಮನೆಮನೆ ಸರ್ವೇ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು ಸೋಂಕಿತರ ಪ್ರಮಾಣ ಏರಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ರಚನೆಯಾಗಿರುವ ಗ್ರಾಮಪಡೆಗಳು ತಮ್ಮ ಊರುಗಳಲ್ಲಿನ ಸೋಂಕಿತರು ಹಾಗೂ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ.

"

ಗ್ರಾಮ ಪಡೆಯಿಂದ ಎರಡೂ ಜಿಲ್ಲೆಗಳ 1048 ಗ್ರಾಮಗಳ 4,01,674 ಕುಟುಂಬಗಳ ಪೈಕಿ, 3,14,971 ಕುಟುಂಬಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ. ಈ ಪೈಕಿ ಬಳ್ಳಾರಿ ತಾಲೂಕಿನಲ್ಲಿ 2466 ಜನರಿಗೆ ರೋಗದ ಲಕ್ಷಣಗಳು ಕಂಡು ಬಂದಿದೆ.

ಹಡಗಲಿ -2223, ಹಗರಿಬೊಮ್ಮನಹಳ್ಳಿ -2006, ಹರಪನಹಳ್ಳಿ -2699, ಹೊಸಪೇಟೆ -1266, ಕಂಪ್ಲಿ -2351, ಕೊಟ್ಟೂರು- 410, ಕೂಡ್ಲಿಗಿ -1663, ಕುರುಗೋಡು- 1751, ಸಂಡೂರು -3854, ಸಿರುಗುಪ್ಪ -3451 ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಬಳ್ಳಾರಿ ಹಾಗೂ ಹಡಗಲಿ ತಾಲೂಕಿನಲ್ಲಿ ಗ್ರಾಮಪಡೆಯಿಂದ ಸರ್ವೇ ಕಾರ್ಯ ಮುಗಿದಿದ್ದು, ಉಳಿದ ತಾಲೂಕುಗಳಲ್ಲಿ ಶೇ. 23ರಷ್ಟುಬಾಕಿಯಿದೆ.

ಬಳ್ಳಾರಿ: ರೆಡ್ಡಿ ಜನಸಂಘದಿಂದ 100 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌

ಅತಿ ಹೆಚ್ಚು ಸೋಂಕು:

ಬಳ್ಳಾರಿ ತಾಲೂಕಿನ ಕೊಳಗಲ್ಲು-135, ಶ್ರೀಧರಗಡ್ಡೆ-120 ಜನರಲ್ಲಿ ಸೋಂಕು ಇದೆ. ಹಡಗಲಿ ತಾಲೂಕಿನ ಕೆ.ಎಂ. ತಾಂಡಾ- 75, ಹಿರೇಹಡಗಲಿ- 50 ಜನರಿಗೆ ಸೋಂಕು ಪತ್ತೆಯಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ- 122, ಬಾಚಿಗೊಂಡನಹಳ್ಳಿ 52, ಹರಪನಹಳ್ಳಿ ತಾಲೂಕಿನ ಹಲವಾಗಲು 81, ಅರಸಿಕೇರಿ- 42, ಹೊಸಪೇಟೆ ತಾಲೂಕಿನ ಗಾದಿಗನೂರು- 105, ವೆಂಕಟಾಪುರ- 69, ಕಂಪ್ಲಿ ತಾಲೂಕಿನ ಎಮ್ಮಿಗನೂರು- 94, ಮೆಟ್ರಿ-40, ಕೊಟ್ಟೂರು ತಾಲೂಕಿನ ದೂಪದಹಳ್ಳಿತಾಂಡ -48, ಉಜ್ಜನಿ- 44 ಪ್ರಕರಣಗಳು ಕಂಡು ಬಂದಿವೆ.

ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡ -160, ಸಿಜೆಹಳ್ಳಿ ತಾಂಡ-169, ಕುರುಗೋಡು ತಾಲೂಕಿನ ಸಿಂದಿಗೇರಿ- 52, ಬಾದನಹಟ್ಟಿ-42, ಸಂಡೂರು ತಾಲೂಕಿನ ವಿಠಲಾಪುರ- 179, ವಡ್ಡು ಗ್ರಾಮ- 124, ಸಿರುಗುಪ್ಪ ತಾಲೂಕಿನ ಮುದ್ದಟನೂರು- 54, ಕರೂರು- 36 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೊಟ್ಟೂರು ಅತಿ ಕಡಿಮೆ:

ಬಳ್ಳಾರಿ- ವಿಜಯನಗರ ಜಿಲ್ಲೆಯ ಪೈಕಿ ಕೊಟ್ಟೂರು ತಾಲೂಕಿನಲ್ಲಿ ಅತಿ ಕಡಿಮೆ ಸೋಂಕಿತರು ಕಂಡು ಬಂದಿದ್ದು, ಸಾವಿನ ಪ್ರಕರಣದಲ್ಲೂ ಕೊಟ್ಟೂರು ತೀರಾ ಕಡಿಮೆ ಇದ್ದು ಎರಡು ಜಿಲ್ಲೆಯ ಪೈಕಿ ಸದ್ಯ ಕೊಟ್ಟೂರು ತಾಲೂಕು ಭಾಗಶಃ ಸೇಫ್‌.

ಸ್ಥಳೀಯ ಆಡಳಿತ ಸೋಂಕು ನಿಯಂತ್ರಣದ ಕ್ರಮಗಳನ್ನು ಕೈಗೊಂಡಲ್ಲಿ ಇರುವ ಸಕ್ರೀಯ ಪ್ರಕರಣಗಳನ್ನು ಶೂನ್ಯಕ್ಕಿಳಿಸಬಹುದಾಗಿದೆ. ಇಡೀ ತಾಲೂಕಿನಲ್ಲಿ 410 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ ಭಾಗಶಃ ಜನರು ಗುಣಮುಖರಾಗಿದ್ದಾರೆ. ಅವಳಿ ಜಿಲ್ಲೆಯ ಪೈಕಿ 55 ಗ್ರಾಮಗಳಲ್ಲಿ ಅತ್ಯಂತ ಕಡಿಮೆ ಹಾಗೂ ಶೂನ್ಯ ಪ್ರಕರಣಗಳಿವೆ.

ಗ್ರಾಮೀಣ ಭಾಗದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಜಿಪಂನಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಯಪಡೆ ಸದಸ್ಯರು ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದು, ಸೋಂಕಿತರಿಗೆ ಮೆಡಿಕಲ್‌ ಕಿಟ್‌ ನೀಡಲಾಗುತ್ತಿದೆ ಎಂದು ಬಳ್ಳಾರಿ ಜಿಪಂ ಸಿಇಒ ಕೆ.ಆರ್‌. ನಂದಿನಿ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!