ಶಿವಮೊಗ್ಗದಲ್ಲಿ ತಯಾರಾದ 23 ಅಡಿ ಎತ್ತರದ ಅಪ್ಪು ಪ್ರತಿಮೆ ಬಳ್ಳಾರಿಯಲ್ಲಿ ಜ.21ರಂದು ಅನಾವರಣ

By Suvarna NewsFirst Published Jan 16, 2023, 7:04 PM IST
Highlights

ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಪುನೀತ್ ರಾಜಕುಮಾರ್  23 ಅಡಿ ಎತ್ತರದ ಪ್ರತಿಮೆ ಯೊಂದು ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದಲ್ಲಿ ಸಿದ್ದಗೊಂಡಿದೆ. ಈ ಭವ್ಯ ಪ್ರತಿಮೆಯನ್ನು ಪ್ರಖ್ಯಾತ ಶಿಲ್ಪ ಕಲಾವಿದ ಜೀವನ್ ನೇತೃತ್ವದ ತಂಡದಿಂದ ಪುನೀತ್ ಕಲಾ ಕೃತಿ ನಿರ್ಮಾಣ ಮಾಡಲಾಗಿದೆ. 

ಶಿವಮೊಗ್ಗ (ಜ.16): ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಪುನೀತ್ ರಾಜಕುಮಾರ್  23 ಅಡಿ ಎತ್ತರದ ಪ್ರತಿಮೆ ಯೊಂದು ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದಲ್ಲಿ ಸಿದ್ದಗೊಂಡಿದೆ. ಈ ಭವ್ಯ ಪ್ರತಿಮೆಯನ್ನು ಪ್ರಖ್ಯಾತ ಶಿಲ್ಪ ಕಲಾವಿದ ಜೀವನ್ ನೇತೃತ್ವದ ತಂಡದಿಂದ ಪುನೀತ್ ಕಲಾ ಕೃತಿ ನಿರ್ಮಾಣ ಮಾಡಲಾಗಿದೆ. ಸಾರಿಗೆ ಸಚಿವ ಶ್ರೀರಾಮುಲುರಿಂದ ನಟ ಪುನೀತ್ ರಾಜಕುಮಾರ್  ರವರ ಈ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 21ರಂದು ಬಳ್ಳಾರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು ಸಂಜೆ ಗಂಟೆಗೆ ಪುನೀತ್ ಪ್ರತಿಮೆ ಅನಾವರಣಗೊಳ್ಳಲಿದೆ. ಸುಮಾರು 3000 ಕೆಜಿ ತೂಕದ ಫೈಬರ್ ಆರ್ಟ್ ನಿಂದ ನಿರ್ಮಿಸಿದ ಅಪ್ಪುವಿನ ಕಲಾ ಕೃತಿ ನೈಜತೆಯಿಂದ ಕೂಡಿ ಆಕರ್ಷಣೀಯವಾಗಿ ಮೂಡಿ ಬಂದಿದೆ.

'ಯುವ' ರಾಜ್ ಕುಮಾರ್ ಪಟ್ಟಾಭಿಷೇಕಕ್ಕೆ ದಿನಾಂಕ ಫಿಕ್ಸ್: ಅಪ್ಪು ಉತ್ತರಾಧಿಕಾರಿ ದರ್ಬಾರ್ ಶುರು ಯಾವಾಗ?

ಅಪ್ಪುವಿನ 23 ಅಡಿ ಎತ್ತರದ ವಿಗ್ರಹವನ್ನು ಸುಮಾರು 22 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 23 ಅಡಿ ಎತ್ತರದ ಪ್ರತಿಮೆಯನ್ನು 3 ತಿಂಗಳಲ್ಲಿ ನಿರ್ಮಾಣವಾಗಿದೆ. ಕಬ್ಬಿಣ, ಫೈಬರ್‌ನಿಂದ ನಿರ್ಮಿಸಲಾಗಿದ್ದು, ಒಟ್ಟು 3 ಸಾವಿರ ಕೆ.ಜಿ. ತೂಕವನ್ನು ಹೊಂದಿದೆ. ಕಬ್ಬಿಣವೇ 1ಸಾವಿರ ಕೆ.ಜಿ. ಇದೆ.  ನಿಧಿಗೆ ಗ್ರಾಮದಲ್ಲಿರುವ ಜೀವನ್ ಕಲಾ ಸನ್ನಿಧಿ ಹೆಸರಿನ ಶಿಲ್ಪಕಲಾ ಸಂಸ್ಥೆಯ  ಜೀವನ್ ಮತ್ತವರ 15 ಜನಶಿಲ್ಪಿಗಳು ಈ ಪ್ರತಿಮೆಗಾಗಿ ಶ್ರಮವಹಿಸಿದ್ದಾರೆ. ಮೊದಲು ಮಣ್ಣಿನಲ್ಲಿ ಪ್ರತಿಮೆಯನ್ನು ತಯಾರಿಸಿ ಮೌಲ್ಡಿ ನಿರ್ಮಿಸಿಕೊಂಡು ಆನಂತರದಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಅದಕ್ಕಾಗಿ 16 ಜನರ ತಂಡ ದಿನದ 24 ಗಂಟೆಗಳ ಕಾಲ ಹಗಲು ರಾತ್ರಿ 3 ತಿಂಗಳ ಕಾಲ ಕೆಲಸ ಮಾಡಿದೆ. 40 ಅಡಿ ಉದ್ದದ 20 ಚಕ್ರದ ಲಾರಿಯಲ್ಲಿ ಪುನೀತ್ ಪ್ರತಿಮೆಯನ್ನು ಇಂದೇ ಬಳ್ಳಾರಿಗೆ ರವಾನೆ ಮಾಡಲಾಗುತ್ತಿದೆ.

14 ತಿಂಗಳ ಮಗುವಿನಿಂದ ಎರಡು ಕಣ್ಣುಗಳು ದಾನ! ಅಪ್ಪು ಅಂದ್ರೆ ಪ್ರಾಣ!

ಬಳ್ಳಾರಿಯ ಅಪ್ಪು ಅಭಿಮಾನಿಗಳ ಕೋರಿಕೆಯ ಮೇರೆಗೆ ಸಚಿವ ಶ್ರೀರಾಮುಲು ಈ ಪ್ರತಿಮೆ ನಿರ್ಮಿಸಲು ಸೂಚಿಸಿದ್ದರು. ಈಗಾಗಲೇ ರಾಜ್ಯದಲ್ಲಿರುವ ಅಪ್ಪು ವಿನ ಇತರ ಪ್ರತಿಮೆಗಳಿಗಿಂತ ದೊಡ್ಡ ಪ್ರತಿಮೆ ನಿರ್ಮಿಸಬೇಕೆಂಬ ಶ್ರೀರಾಮುಲು ಅಪೇಕ್ಷೆಯಂತೆ ನಿಮ್ಮ ಹಣ ಮಾಡಲಾಗಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ರಾಜಕುಮಾರ್ ಅವರ ಕುಟುಂಬದವರು ಭಾಗಿ ಯಾಗಲಿದ್ದಾರೆ. ನಟ ಶಿವರಾಜ್ ಕುಮಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ನಟ ಯುವರಾಜ್ ಮೊದಲಾದವರು ಪಾಲ್ಗೊಳ್ಳುವ ನೀರಿಕ್ಷೆ ಇದೆ.

click me!