ವಿದೇಶಿ ಪ್ರಜೆ ಮನೆ ಮೇಲೆ ದಾಳಿ : ಬೆಳಕಿಗೆ ಬಂತು ಭಾರಿ ದಂಧೆ

Kannadaprabha News   | Asianet News
Published : Jan 31, 2020, 07:57 AM IST
ವಿದೇಶಿ ಪ್ರಜೆ ಮನೆ ಮೇಲೆ ದಾಳಿ : ಬೆಳಕಿಗೆ ಬಂತು ಭಾರಿ ದಂಧೆ

ಸಾರಾಂಶ

ಬೆಂಗಳೂರಿನಲ್ಲಿ ನೆಲೆಸಿದ್ದ ವಿದೇಶಿ ಪ್ರಜೆಯೊಬ್ಬನ ಮನೆಯ ಮೇಲೆ ದಾಳಿ ನಡೆಸಿದ್ದು ಈ ವೇಳೆ ಭಾರಿ ದಂಧೆಯು ಬೆಳಕಿಗೆ ಬಂದಿದೆ. ಆತನನ್ನು ಬಂಧಿಸಲಾಗಿದೆ. 

ಬೆಂಗಳೂರು [ಜ.31]:  ಮನೆಯೊಂದರ ಮೇಲೆ ದಾಳಿ ನಡೆಸಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ಹೊರ ಮಾವು ಸಮೀಪ ನಡೆದಿದೆ.

ಬೇತೆಲ್‌ ಲೇಔಟ್‌ ನಿವಾಸಿ ಹೊರ ಮಾವು ಸಮೀಪದ ಬೇತೆಲ್‌ ಲೇಔಟ್‌ನ ನಿವಾಸಿ ಎಜಿಕೆ ಸೆಲೆಸ್ಟೈನ್‌ ಬಂಧಿತನಾಗಿದ್ದು, 20 ಲಕ್ಷ ರು. ಮೌಲ್ಯದ 500 ಎಕ್ಸಿಟೆನ್ಸಿ ಮಾತ್ರೆಗಳು, ಕಾರು ಹಾಗೂ ಎರಡು ಮೊಬೈಲ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಆರೋಪಿ, ತನ್ನ ಮನೆಯಲ್ಲೇ ಡ್ರಗ್ಸ್‌ ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಂಜೇನಿಯಾ ದೇಶದ ಸೆಲೆಸ್ಟೈನ್‌, ಹಲವು ತಿಂಗಳ ಹಿಂದೆ ಬಿಸಿನೆಸ್‌ ವೀಸಾದಡಿ ಭಾರತಕ್ಕೆ ಬಂದಿದ್ದ. ಬಳಿಕ ಬೆಂಗಳೂರಿಗೆ ಆಗಮಿಸಿದ ಆತ, ಹೆಣ್ಣೂರು ಸಮೀಪ ಹೂಡಿಯಲ್ಲಿ ನೆಲೆಸಿದ್ದ.

3 ಲಕ್ಷ ಬಾಂಗ್ಲಾದೇಶಿಗಳು ಬೆಂಗಳೂರಿನಲ್ಲಿದ್ದಾರೆ; ಸಾಕ್ಷ್ಯ ಕೊಟ್ಟ ಭಾಸ್ಕರ್ ರಾವ್..

ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಗುರಿಯಾಗಿಸಿಕೊಂಡು ಆರೋಪಿ ದಂಧೆ ನಡೆಸುತ್ತಿದ್ದ. ಆತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಮಾಲೀನ ಸಮೇತ ಬಂಧಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!