ಗೋಡ್ಸೆಗೆ ಪ್ರಧಾನಿ ಹೋಲಿಕೆ, ಈಗ ಮಾತಾಡಲ್ಲ ಎಂದ್ರು ಮಾಜಿ ಪ್ರಧಾನಿ

By Kannadaprabha News  |  First Published Jan 31, 2020, 7:56 AM IST

ಗೋಡ್ಸೆಯನ್ನು ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿಗೆ ಹೋಲಿಕೆ ಮಾಡಿರುವ ಬಗ್ಗೆ ವಿಚಾರ ತಿಳಿದುಕೊಂಡು ಮಾತನಾಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.


ತುಮಕೂರು(ಜ.31): ಗೋಡ್ಸೆಯನ್ನು ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿಗೆ ಹೋಲಿಕೆ ಮಾಡಿರುವ ಬಗ್ಗೆ ವಿಚಾರ ತಿಳಿದುಕೊಂಡು ಮಾತನಾಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದಾರೆ.

ಅವರು ತುಮಕೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಗೋಡ್ಸೆಗೆ ಹೋಲಿಕೆ ಮಾಡಿರುವ ವಿಚಾರದ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

Tap to resize

Latest Videos

ಗೋಡ್ಸೆ, ಮೋದಿ ಸಿದ್ಧಾಂತ ಒಂದೇ: ರಾಹುಲ್ ವಾಗ್ದಾಳಿ!

ಜಿಲ್ಲೆಯ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಈ ದೇಶದಲ್ಲಿ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ದೇಶದ ರಾಜಕೀಯವನ್ನು ನಾನು ನೋಡಿ ಆಗಿದೆ. ದೆಹಲಿ ಚುನಾವಣಾ ಫಲಿತಾಂಶ ಬರಲಿ. ಆಮೇಲೆ ಮಾತನಾಡುತ್ತೇನೆ ಎಂದರು.

30 ವರ್ಷಗಳಿಂದ ಅಲೆಯುತ್ತಿದ್ದ ಅಂಧ ದಂಪತಿಗೆ ಕೊನೆಗೂ ಸಿಕ್ತು ಸೂರು!

click me!