ಮಂಡ್ಯ: 20 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

Kannadaprabha News   | Asianet News
Published : Jan 31, 2020, 08:37 AM IST
ಮಂಡ್ಯ: 20 ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ

ಸಾರಾಂಶ

ಕಿಡಿಗೇಡಿಗಳ ಕೃತ್ಯಕ್ಕೆ 20 ಎಕರೆ ಅರಣ್ಯ ಹೊತ್ತಿ ಉರಿದು ನಾಶವಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಗೌರಿಪುರ ಗ್ರಾಮ ವ್ಯಾಪ್ತಿ ಸಮೀಪದ ಮಿಲಿಟರಿ ಕಾಂಪೌಂಡ್‌ ಅರಣ್ಯ ಪ್ರದೇಶದಿಂದ ಮೊದಲು ಕಾಣಿಸಿಕೊಂಡ ಬೆಂಕಿ ದಟ್ಟವಾಗಿ ಅರಣ್ಯ ತುಂಬೆಲ್ಲಾ ಆವರಿಸಿಕೊಂಡಿದೆ.

ಮಂಡ್ಯ(ಜ.31): ಐತಿಹಾಸಿಕ ಕರೀಘಟ್ಟಬೆಟ್ಟದ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ 20 ಎಕರೆ ಅರಣ್ಯ ಪ್ರದೇಶ ಗುರುವಾರ ಭಸ್ಮವಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಕರೀಘಟ್ಟಬೆಟ್ಟಕ್ಕೆ ಹೊಂದಿಕೊಂಡಿರುವ ಗೌರಿಪುರ ಗ್ರಾಮ ವ್ಯಾಪ್ತಿ ಸಮೀಪದ ಮಿಲಿಟರಿ ಕಾಂಪೌಂಡ್‌ ಅರಣ್ಯ ಪ್ರದೇಶದಿಂದ ಮೊದಲು ಕಾಣಿಸಿಕೊಂಡ ಬೆಂಕಿ ದಟ್ಟವಾಗಿ ಅರಣ್ಯ ತುಂಬೆಲ್ಲಾ ಆವರಿಸಿಕೊಂಡಿದೆ.

'ಪೌರತ್ವ ಕಾಯ್ದೆಯಿಂದ ಹಿಂದೂಗಳಿಗೂ ಕಾದಿದ್ಯಾ ಗಂಡಾಂತರ'..?

ಬೆಂಕಿ ಹೊತ್ತಿದ್ದ ಪ್ರದೇಶ ಗುಡ್ಡಗಾಡು ಸ್ಥಳವಾಗಿದ್ದು, ಹುಲ್ಲು ಮತ್ತು ಒಂದಷ್ಟುಗಿಡಗಳು ಬೆಂಕಿಗಾಹುತಿಯಾಗಿವೆ. ಅರಣ್ಯ ಇಲಾಖೆಯ ಹಲವು ಸಿಬ್ಬಂದಿ 5 ತಾಸು ಸೊಪ್ಪುಗಳ ಬರಲಿನಿಂದ ಬಡಿದು ಬೆಂಕಿ ನಂದಿಸಿದ್ದಾರೆ.

ಕರೀಘಟ್ಟಬೆಟ್ಟಗುಡ್ಡಗಳಿಂದ ಕೂಡಿದ ಕುರುಚಲು ಅರಣ್ಯ ಪ್ರದೇಶವಾಗಿದೆ. ಯಾವುದೇ ಅಗ್ನಿಶಾಮಕ ವಾಹನಗಳು ಸಂಚರಿಸಲು ಇಲ್ಲಿ ಸಾಧ್ಯವಿಲ್ಲ. ಸುಮಾರು 403 ಎಕರೆಯಷ್ಟಿರುವ ಈ ಅರಣ್ಯ ಪ್ರದೇಶಬೆಟ್ಟದೊಂದಿಗೆ ವ್ಯಾಪಿಸಿಕೊಂಡಿರುವ ಗುಡ್ಡ ಮತ್ತು ಗೋಮಾಳ ಇತರೆ ಸಾಮಾಜಿಕ ಅರಣ್ಯ ಭೂಮಿಯನ್ನೊಳಗೊಂಡಂತೆ ಒಟ್ಟು 565 ಎಕೆರೆಯಷ್ಟುಅರಣ್ಯ ಪ್ರದೇಶ ಹೊಂದಿದೆ.

ಶಿವನ ಮಂತ್ರ ಹೇಳಿ ಮತಾಂತರಗೊಂಡವರ ಮನಪರಿವರ್ತನೆ

PREV
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು