ಬೆಂಗಳೂರು (ಮೇ.17): ರಾಜ್ಯದಲ್ಲಿ ಕೊರೋನಾ ಹೆಚ್ಚಾದ ಈ ಟೈಮಲ್ಲಿ ಅನೇಕ ಯುವಜನರು ಮನೆಯೊಳಗೆ ಉಳಿದು ಆನ್‌ಲೈನ್ ಗೇಮಿಂಗ್, ಸಿನಿಮಾ ಅಂತ ಟೈಮ್ ಕಳಿತಿದ್ರೆ ಇಲ್ಲಿಬ್ಬರು ಕಾಲೇಜು ಯುವತಿಯರು ಕೊರೋನಾದಿಂದ ಸಾವಿಗೀಡಾದವರಿಗಾಗಿ ಮಿಡಿಯುತ್ತಿದ್ದಾರೆ.
ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರಿಬ್ಬರು ಸೋಂಕಿನಿಂದ ಮೃತಪಟ್ಟವರ ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಗೌರವಯುವ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ದಿನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಂತ್ಯಸಂಸ್ಕಾರ ಇವರಿಂದಾಗುತ್ತಿದೆ.
undefined
ಕುಟುಂಬದವರ ಹಿಂದೇಟು: ಅಂಜುಮನ್ ಸಮಿತಿ ಸಹಕಾರದಲ್ಲಿ ಅಂತ್ಯಸಂಸ್ಕಾರ .
ನಿಕೋಲೆ ಫೊರ್ಟಾಡೋ (20), ಟೀನಾ ಚೆರಿಯನ್ (21) ಎಂಬ ಯುವತಿಯರಿಬ್ಬರು ಸ್ಮಶಾನಗಳ ಎದುರು ಸಾಲಾಗಿ ನಿಂತ ಆಂಬುಲೆನ್ಸ್‌ಗಳಿಂದ ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಹೊಸೂರು ಮುಖ್ಯರಸ್ತೆಯಲ್ಲಿರುವ ಸ್ಮಶಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊರೋನಾ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುವ ಒಂದು ತಂಡದೊಂದಿಗೆ ಇಬ್ಬರು ಯುವತಿಯರು ಮೃತರ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.
ಹುಬ್ಬಳ್ಳಿ : ಆರ್‌ಎಸ್ಸೆಸ್‌ನಿಂದ ಸೋಂಕಿತರ ಉಚಿತ ಶವಸಂಸ್ಕಾರ
ನಿಕೋಲೆ : ಈಕೆ ಅಂತಿಮ ವರ್ಷದ BSW ವಿದ್ಯಾರ್ಥಿನಿಯಾಗಿದ್ದು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಟೀನಾ : ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ. ಸದ್ಯ ಕಾಲೇಜುಗಳು ಮುಚ್ಚಿದ್ದು ಈ ನಿಟ್ಟಿನಲ್ಲಿ ಸಮಾಜ ಸೇವೆ ಉದ್ದೇಶದಿಂದ ಈ ಕೆಲಸಕ್ಕೆ ಇಳಿದಿದ್ದಾಗಿ ಹೇಳಿದ್ದಾರೆ.
ಮೊದಲ ದಿನ ಆಂಬುಲೆನ್ಸ್‌ಗಳಿಂದ ಮೃತದೇಹವನ್ನು ಇಳಿಸಿ ತೆಗೆದುಕೊಂಡು ಹೋಗಲು ಕೊಂಚ ಅಳುಕಾಗಿತ್ತು. ದಿನಗಳು ಕಳೆಯುತ್ತಾ ಅಭ್ಯಾಸವಾಯ್ತು. ಕಳೆದ ವಾರ ಸಾವಿನ ಸಂಖ್ಯೆ ಅತ್ಯಧಿಕವಾಗಿದ್ದು, ಒಂದೇ ದಿನ 25ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಸಂಸ್ಕಾರ ನಡೆಸಿದ್ದನ್ನು ನೆನಪಿಸಿಕೊಂಡರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona