Mysuru : ಪ್ರಮುಖ ರಸ್ತೆ, ವೃತ್ತಗಳಲ್ಲಿ ಇವತ್ತು, ನಾಳೆಯೂ ದೀಪಾಲಂಕಾರ

By Kannadaprabha News  |  First Published Oct 11, 2022, 5:21 AM IST

ಸಾರ್ವಜನಿಕರ ಒತ್ತಾಯದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಸಚಿವರೊಂದಿಗೆ ಸಮಾಲೋಚಿಸಿ, ನಗರದ ಹೃದಯಭಾಗ, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅ.11, 12 ರಂದು ಸಂಜೆ 6.30 ರಿಂದ ರಾತ್ರಿ 10.30ರವರೆಗೆ ದೀಪಾಲಂಕಾರ ಮುಂದುವರೆಸಲಾಗುವುದು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ


 ಮೈಸೂರು (ಅ.11):  ಸಾರ್ವಜನಿಕರ ಒತ್ತಾಯದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಸಚಿವರೊಂದಿಗೆ ಸಮಾಲೋಚಿಸಿ, ನಗರದ ಹೃದಯಭಾಗ, ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅ.11, 12 ರಂದು ಸಂಜೆ 6.30 ರಿಂದ ರಾತ್ರಿ 10.30ರವರೆಗೆ ದೀಪಾಲಂಕಾರ ಮುಂದುವರೆಸಲಾಗುವುದು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಈ ವರ್ಷ ದಸರಾ (Dasara)  ಮಹೋತ್ಸವದ ಸಂದರ್ಭದಲ್ಲಿ ಸೆಸ್ಕ್ ವತಿಯಿಂದ ವಿಶೇಷ ವಿನ್ಯಾಸದೊಂದಿಗೆ ನಿರ್ವಹಿಸಲಾದ ವಿದ್ಯುತ್‌ (Electricity) ದೀಪಾಲಂಕಾರ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು (Minister)  ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಎಲ್ಲ ಸಚಿವರು, ಎಲ್ಲಾ ಶಾಸಕರು, ಮೇಯರ್‌ ಮತ್ತು ಉಪಮೇಯರ್‌, ಎಲ್ಲಾ ನಿಗಮ- ಮಂಡಳಿ ಅಧ್ಯಕ್ಷರು, ಜಿಲ್ಲಾ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Latest Videos

undefined

ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ,, ಪೊಲೀಸ್‌ (Police) ಆಯುಕ್ತರು ಮತ್ತು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಮಾಡಲು ಸಹಕರಿಸಿದ್ದಾರೆ. ಅವರೆಲ್ಲರಿಗೂ ನಿಗಮವು ಅಭಿನಂದಿಸುತ್ತದೆ. ಈ ಬಾರಿ ದಸರಾ ಮಹೋತ್ಸವದಲ್ಲಿ, ವಿಶಿಷ್ಟವಾಗಿ ಅಲಂಕರಿಸಿ ಇಡೀ ನಗರವನ್ನು ಆಕರ್ಷಕವಾಗಿ ಕಾಣುವಂತೆ ದೀಪಾಲಂಕಾರ ಮಾಡಿದ ಬಗ್ಗೆ ಸಮಸ್ತ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುವಿರುವುದಕ್ಕೆ ಸಹಾ ನಿಗಮವು ವಂದನೆಗಳನ್ನು ಅರ್ಪಿಸುತ್ತದೆ ಎಂದಿದ್ದಾರೆ.

ವಿದ್ಯುತ್‌ (Electricity)  ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ನಿಗಮದ ಸಂಬಂಧಿತ ಎಲ್ಲ ಅಧಿಕಾರಿಗಳಿಗೆ ಕಾಲಕಾಲಕ್ಕೆ ಮಾಹಿತಿ/ಸಲಹೆಗಳನ್ನು ಕಾಲಕಾಲಕ್ಕೆ ಫೋಟೋ ಮತ್ತು ವಿಡಿಯೋ ಸಹಿತ ನೀಡಿ ಸಹಕಾರ ನೀಡಿದ್ದು ಅವರೆಲ್ಲರಿಗೂ ನಿಗಮವು ಅಭಿನಂದಿಸುತ್ತದೆ.

ವಿದ್ಯುತ್‌ ಗುತ್ತಿಗೆದಾರರು ತುಂಬಾ ಮುತುವರ್ಜಿ ಹಾಗೂ ಶ್ರಮವಹಿಸಿ ಹಗಲಿರುಳು ದುಡಿದಿದ್ದಾರೆ. ನಿಗಮದ ಮುಖ್ಯ ಅಭಿಯಂತರರು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಮತ್ತು ಕಿರಿಯ ಅಭಿಯಂತರರು, ಪವರ್‌ ಮ್ಯಾನ್‌ಗಳು ಮತ್ತಿತರ ಸಹಾಯಕ ಸಿಬ್ಬಂದಿಗಳೂ ಸಹಾ 24/ 7 ಶ್ರಮವಹಿಸಿ ದೀಪಾಲಂಕಾರದಲ್ಲಿ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ನಿರ್ದೇಶಕರು (ತಾಂತ್ರಿಕ) ಮಂಜಪ್ಪ ಅವರ ಮೇಲ್ವಿಚಾರಣೆ ಮಾಡಿ ಅಚ್ಚುಕಟ್ಟಾಗಿ ಪೂರ್ಣವಾಗಿ ಜವಾಬ್ದಾರಿ ವಹಿಸಿಕೊಂಡು ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ. ಇವರೆಲ್ಲರಿಗೂ ಅಭಿನಂದನೆಗಳು ಎಂದು ಅವರು ತಿಳಿಸಿದ್ದಾರೆ.

ದೀಪಾಲಂಕಾರ ಮುಂದುವರಿಕೆಯಿಂದ ಮೈಸೂರು ನಗರ ಝಗಮಗಿಸಿವುದರೊಂದಿಗೆ ವ್ಯಾಪಾರ ವಹಿವಾಟು ಸಹಾ ವೃದ್ಧಿಗೊಂಡಿದೆ ಎಂದಿರುವ ಅವರು, ಮಾಧ್ಯಮ ಮಿತ್ರರು ವಾಸ್ತವವಾಗಿ ದೀಪಾಲಂಕಾರದ ಬಗ್ಗೆ ವಿಶಿಷ್ಟವಾಗಿ ವರದಿ ಮಾಡಿದ್ದಾರೆ. ನಮಗೆ ಕಾಲಕಾಲಕ್ಕೆ ಸಣ್ಣಪುಟ್ಟದೋಷಗಳನ್ನು ಸರಿಪಡಿಸಲು ಎಚ್ಚರಿಸಿದ್ದಾರೆ. ಅವುಗಳನ್ನುನಾವು ಸರಿಪಡಿಸಿದ್ದೇವೆ . ಎಲ್ಲ ರೀತಿಯಿಂದ ಸಹಕರಿಸಿದ ಮಾಧ್ಯಮ ಮಿತ್ರರಿಗೂ ನಿಗಮವು ಅಭಿನಂದಿಸುತ್ತದೆ ಎಂದಿದ್ದಾರೆ.

ಅಧ್ವಾನದ ದಸರಾ :  

ಮೈಸೂರು (ಅ.09): ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವ ಅದ್ಧೂರಿಯಾಗಿ ಆಗಲಿಲ್ಲ. ಬದಲಿಗೆ ಅಧ್ವಾನವಾಗಿತ್ತು. ಜನರೇ ಬಂದು ಯಶಸ್ವಿಗೊಳಿಸಿದ್ದಾರೆಯೇ ಹೊರತು, ಕಾರ್ಯಕ್ರಮಗಳಿಂದ ದಸರಾ ಯಶಸ್ವಿಯಾಗಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದಸರಾ (Dasara)  ಮಹೋತ್ಸವ ಸಂಬಂಧ ಆತ್ಮಾವಲೋಕ ನಡೆಯಬೇಕು, ಈಗ ಆಗಿರುವ ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಬೇಕು. ಕೋವಿಡ್‌ ಕಾರಣದಿಂದ 2 ವರ್ಷದಿಂದ  ಇರಲಿಲ್ಲ. ಹಾಗಾಗಿ ಜನ ಬಂದಿದ್ದಾರೆ. ದಸರಾ ಜನರಿಂದ ಯಶಸ್ವಿಯಾಗಿದೆ ಎಂದರು.

ಮುಖ್ಯಮಂತ್ರಿಗಳು (Karnataka CM) ದಸರಾಕ್ಕೆ 35 ಕೋಟಿ ನೀಡುವುದಾಗಿ ಹೇಳಿದ್ದರು. ಆದರೆ ನಂತರ ದಿನಗಳಲ್ಲಿ ಅನುದಾನ ಕಡಿತ, ಅನುದಾನ ಬಿಡುಗಡೆ ಆಗಿಲ್ಲ ಎಂಬ ಮಾತು ಕೇಳಿಬಂತು. ದಸರಾ ಎಂಬುದು ಸಂಪ್ರದಾಯ, ಸಾಂಸ್ಕೃತಿಕ ಉತ್ಸವ ಆಗಬೇಕಿತ್ತು. ಗ್ರಾಮೀಣ (Rural) ದಸರಾ ಆಚರಣೆಗೆ 3 ಲಕ್ಷ ಕೊಡುವುದಾಗಿ ಆರಂಭದಲ್ಲಿ ಹೇಳಿ, ನಂತರ ಕೇವಲ 1 ಲಕ್ಷ ನೀಡಲಾಯಿತು. ಕ್ರೀಡೆಯಲ್ಲಿ ಪಾಲ್ಗೊಂಡವರಲ್ಲಿ ಉತ್ಸಾಹವೇ ಇರಲಿಲ್ಲ. ಅನುದಾನ ಕೊರತೆ ಕಾರಣಕ್ಕೆ ಮ್ಯಾರಥಾನ್‌ ರದ್ದುಪಡಿಸಿದ್ದಾಗಿ ಅವರು ತಿಳಿಸಿದರು.

ಸಾಹಿತ್ಯ ಸಮ್ಮೇಳನವು ಸಾಹಿತ್ಯದ ಉತ್ಸವವಾಗಬೇಕಿತ್ತು. ಆದರೆ ಸತ್ತವರನ್ನು ಆಹ್ವಾನಿಸಿ, ಬದುಕಿದ್ದವರನ್ನು ಬಿಡಲಾಗಿತ್ತು. ನಾನೂ ಸಾಹಿತ್ಯ ಕ್ಷೇತ್ರದಿಂದ ಪರಿಷತ್‌ಗೆ ಆಯ್ಕೆಯಾದವನು. ನನ್ನ ಕೇಳಿದರೆ ಹೇಳುತ್ತಿದ್ದೆ. ದಸರಾ ಕವಿಗೋಷ್ಠಿಯಿಂದ ಅವಮಾನವಾಯಿತು ಎಂದರು.

ಯುವ ದಸರಾ ಕಾರ್ಯಕ್ರಮಕ್ಕೆ ಸ್ಥಳೀಯ ಕಲಾವಿದರಾದ ದರ್ಶನ್‌, ವಿಶ್ವದಲ್ಲೇ ಖ್ಯಾತಿಪಡೆದ ಕೆಜಿಎಫ್‌ನ ಯಶ್‌ ಅವರನ್ನು ಕರೆಸಬಹುದಿತ್ತು. ಅವರನ್ನೆಲ್ಲಾ ನಿರ್ಲಕ್ಷ್ಯಿಸಿ ಬೇರೆ ಬೇರೆಯವರಿಗೆ ಲಕ್ಷಾಂತರ ಖರ್ಚು ಮಾಡಿದ್ದಾರೆ. ಯಾರನ್ನೂ ವಿಶ್ವಾಸಕ್ಕೆ ತೆರೆದುಕೊಂಡಿಲ್ಲ. ಸದ್ಯ ಚಾಮುಂಡೇಶ್ವರಿ ಕೃಪೆಯಿಂದ ಏನೂ ಆಗಿಲ್ಲ. ಜಂಬೂಸವಾರಿ ಹೋಗುತ್ತಿದ್ದರೆ ಆನೆಯೇ ಕಾಣುತ್ತಿರಲಿಲ್ಲ. ಅಷ್ಟುಜನ ತುಂಬಿದ್ದರು. ಏನಾದರೂ ಅನಾಹುತವಾಗಿದ್ದರೆ ಏನು ಮಾಡಬೇಕಿತ್ತು. ದಸರಾಕ್ಕೆ ಕಳಂಕ ಬರುತ್ತಿತ್ತು ಎಂದು ಅವರು ಕಿಡಿಕಾರಿದರು.

ಜಿಲ್ಲಾ ಮಂತ್ರಿಗಳಿಗೆ ಅನುಭವದ ಕೊರತೆ ಇದೆ. ಇಲ್ಲಿನ ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ದುರಾದೃಷ್ಟವಶಾತ್‌ ಬಿಜೆಪಿ ಸರ್ಕಾರ ಬಂದಾಗಲೆಲ್ಲ ಬೇರೆಯವರೇ ಉಸ್ತುವಾರಿ ಸಚಿವರಾಗುತ್ತಾರೆ. ರಾಮದಾಸ್‌ಗೆ ವಹಿಸಬಹುದಿತ್ತು. ಇಲ್ಲವೇ ನಾನು, ಜಿ.ಟಿ. ದೇವೇಗೌಡರು, ತನ್ವೀರ್‌ಸೇಠ್‌ ಮೊದಲಾದವರು ಇದ್ದೆವು. ನಮ್ಮ ಸಲಹೆ ಕೇಳಬಹುದಿತ್ತು. ಬರಿ ಲೆಕ್ಕ ಕೊಟ್ಟರೆ ಏನೂ ಪ್ರಯೋಜನವಿಲ್ಲ. ತಪ್ಪುಗಳ ಪಟ್ಟಿಆಗಬೇಕು. ದಸರಾ ಸಂಬಂಧ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

click me!