18ರ ಯುವತಿಗೆ ಕೊರೋನಾ: ತಮ್ಮನ್ನು ಕ್ವಾರೆಂಟೈನ್ ಮಾಡುವಂತೆ ದಾದಿಯರ ಗಲಾಟೆ

By Suvarna NewsFirst Published May 13, 2020, 2:34 PM IST
Highlights

ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆಪಡೆಯುತ್ತಿರುವ 18ರ ಯುವತಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದೀಗ ಯುವತಿಗೆ ಚಿಕಿತ್ಸೆ ನೀಡಿದ ನರ್ಸ್‌ಗಳು ತಮ್ಮನ್ನು ಕ್ವಾರೆಂಟೈನ್‌ಗೆ ಒಳಪಡಿಸುವಂತೆ ಗಲಾಟೆ ಮಾಡಿದ್ದಾರೆ.

ಬಳ್ಳಾರಿ(ಮೇ 13): ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆಪಡೆಯುತ್ತಿರುವ 18ರ ಯುವತಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಇದೀಗ ಯುವತಿಗೆ ಚಿಕಿತ್ಸೆ ನೀಡಿದ ನರ್ಸ್‌ಗಳು ತಮ್ಮನ್ನು ಕ್ವಾರೆಂಟೈನ್‌ಗೆ ಒಳಪಡಿಸುವಂತೆ ಗಲಾಟೆ ಮಾಡಿದ್ದಾರೆ.

ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ವರ್ಷದ ಯುವತಿಗೆ ಕೊರೋನಾ ಪಾಸಿಟಿವ್ ಹಿನ್ನಲೆ ಕೇಸ್‌ನಿಂದಾಗಿ ವಿಮ್ಸ್ ನ ವೈದ್ಯರಿಗೆ ಈಗಾಗಲೇ ಕ್ವಾರೆಂಟೈನ್ ಮಾಡಲಾಗಿದೆ.

ಹಿಂದೂ ವೃದ್ದನ ಅಂತ್ಯ ಸಂಸ್ಕಾರ ಮಾಡಿದ ಮುಸ್ಲಿಂ ಯುವಕರು..!

ಆ ಮಹಿಳೆಗೆ ಚಿಕಿತ್ಸೆ ನೀಡಲು ಸಹಕರಿಸಿದ  ಸ್ಟಾಫ್ ನರ್ಸ್ ಮತ್ತು ಶೂಶ್ರೂಕರಿಗೂ ಕ್ವಾರೆಂಟೆನ್ ಮಾಡಲು ಒತ್ತಾಯ ಮಾಡಿದ್ಧಾರೆ. ಟೆಸ್ಟ್ ಮಾಡಿ ನಮ್ಮನ್ನು ಕ್ವಾರಂಟೈನ್ ಮಾಡಿ ಎಂದು ಒತ್ತಾಯಿಸಿ ಸ್ಟಾಫ್ ನರ್ಸ್‌ಗಳು ವಿಮ್ಸ್ನಲ್ಲಿ ಗಲಾಟೆ ಮಾಡಿದ್ದಾರೆ.

ಈಗಾಗಲೇ ನಾವು ವೈದ್ಯರನ್ನು ಕ್ವಾರೆಂಟೈನ್ ಮಾಡಿದ್ದೇವೆ, ಕೆಲ ನರ್ಸ್‌ಗಳನ್ನು ಮಾತ್ರ ಕ್ವಾರೆಂಟೈನ್ ಮಾಡಿದ್ದೇವೆ ಎನ್ನುತ್ತಿರೋ ವಿಮ್ಸ್ ಆಡಳಿತ ಮಂಡಳಿ ಉಳಿದವರಿಗೆ ಕ್ವಾರೆಂಟೈನ್ ಮಾಡಲು ಸಾಧ್ಯವಿಲ್ಲ, ಸುಮ್ಮನೆ ಕೆಲಸ ಮಾಡಿಕೊಂಡು ಹೋಗಿ ಎನ್ನುತ್ತಿದ್ದಾರೆ ಎಂದು ನರ್ಸಿಂಗ್ ಸೂಪರಿಂಟೆಂಡೆಂಟ್ ಆರೋಪಿಸಿದ್ದಾರೆ.

click me!