ಬೆಂಗಳೂರು: ತಾಯಿ ಮೊಬೈಲ್ ಕೊಟ್ಟಿಲ್ಲವೆಂದು ನೇಣಿಗೆ ಶರಣಾದ ಮಗಳು

Published : Sep 14, 2019, 09:57 PM ISTUpdated : Sep 14, 2019, 10:07 PM IST
ಬೆಂಗಳೂರು: ತಾಯಿ ಮೊಬೈಲ್ ಕೊಟ್ಟಿಲ್ಲವೆಂದು ನೇಣಿಗೆ ಶರಣಾದ ಮಗಳು

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಮೊಬೈಲ್​ ಗೀಳು ಅತಿ ಹೆಚ್ಚಾಗ್ತಿದೆ. ಯಾವ ಮಟ್ಟಿಗೆ ಅಂದ್ರೆ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವ ಮಟ್ಟಿಗೆ ಫೋನ್ ಹಿಂದೆ ಬಿದ್ದಿದ್ದಾರೆ. ಈ ಮೊಬೈಲ್​ನಿಂದಾಗಿ ಅದೆಷ್ಟೋ ಅನಾಹುತಗಳು ನಡೆದು ಹೋಗಿವೆ. ಇದೀಗ ತಾಯಿ ಮೊಬೈಲ್ ಕೊಟ್ಟಿಲ್ಲವೆಂದು ಮಗಳು ನೇಣಿಗೆ ಶರಣಾದ ದುರ್ಘಟನೆ ನಡೆದಿದೆ.

ಬೆಂಗಳೂರು, [ಸೆ.14]: ಪಬ್ ಜೀ ಗೇಮ್ ಆಡಲು ಇಂಟರ್ ನೆಟ್ ಪ್ಯಾಕ್ ಹಾಕಿಸಿಕೊಳ್ಳಲು ಹಣ ನೀಡಿಲ್ಲವೆಂದು ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿತ್ತು.

ಈ ಸುದ್ದಿ ಮಾಸುವ ಮುನ್ನವೇ ತಾಯಿ ಮೊಬೈಲ್ ಕೊಟ್ಟಿಲ್ಲವೆಂದು ಮಗಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು [ಶನಿವಾರ] ಬೆಂಗಳೂರಿನ  ಹನುಮಂತ ‌ನಗರದಲ್ಲಿ ನಡೆದಿದೆ.

ಬೆಳಗಾವಿ: ಪಬ್‌ಜಿಗೆ ಹಣ ಕೊಡದ್ದಕ್ಕೆ ತಂದೆಯನ್ನೇ ಕೊಚ್ಚಿದ ಹುಚ್ಚು ಮಗ

ಪ್ರಿಯಾಂಕ(16) ನೇಣಿಗೆ ಶರಣಾದ ಬಾಲಕಿ.  ಪ್ರಿಯಾಂಕ ಇಂದು [ಶನಿವಾರ] ಸಂಜೆ ಸ್ನೇಹಿತೆ ಮನೆಗೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುತ್ತೇನೆಂದು ಹೇಳಿದ್ದಾಳೆ. 

ಆದ್ರೆ, ಇದಕ್ಕೆ ತಾಯಿ ನಿರಾಕರಿಸಿದ್ದು, ಮೊಬೈಲ್ ತೆಗೆದುಕೊಂಡು ಹೋಗದಂತೆ ಪ್ರಿಯಾಂಕಗೆ ಬುದ್ಧಿವಾಗಿದ ಹೇಳಿದ್ದಾಳೆ. ಇದೇ ವಿಚಾರಕ್ಕೆ ತಾಯಿಯೊಂದಿಗೆ ಪ್ರೀಯಾಂಕ ಜಗಳ ಮಾಡಿದ್ದಾಳೆ. 

ಬಳಿಕ ತಾಯಿ ದೇವಸ್ಥಾನಕ್ಕೆ ಹೋಗಿದ್ದಾರೆ. ಇತ್ತ ಪ್ರಿಯಾಂಕ ಮೊಬೈಲೆ ಸಿಕ್ಕಿಲ್ಲವೆಂದು ಸ್ನೇಹಿತೆ ಮನೆಗೆ ಹೋಗದೆ ರೂಮ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.

 ಈ ಬಗ್ಗೆ ಹನುಮಂತ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!
ಶಾಕಿಂಗ್: ರಾತ್ರಿಯಾದ್ರೆ ಬೆಡ್‌ರೂಂ ಬಳಿ ಬರ್ತಾನೆ ಸೈಕೋ! ಅಪರಿಚಿತನ ಕಾಟಕ್ಕೆ ಬೇಸತ್ತ ವೈದ್ಯೆ!