ಕೊಡಗು ಜಿಲ್ಲೆಯ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

By Web DeskFirst Published Sep 14, 2019, 8:18 PM IST
Highlights

ಕೊಡಗು ಜಿಲ್ಲೆ ರೈತರಿಗೆ ಸಿಹಿ ಸುದ್ಧಿ ನೀಡಿದ ರಾಜ್ಯ ಸರ್ಕಾರ| ಸಾಲಮನ್ನಾ ನಿರೀಕ್ಷೆಯಲ್ಲಿದ್ದ ಕೊಡಗು ಜಿಲ್ಲಾ ರೈತರ ಮೊಗದಲ್ಲಿ ಮಂದಹಾಸ . 

ಬೆಂಗಳೂರು/ಕೊಡಗು, [ಸೆ.14]: ಸತತ ಮಳೆಯಿಂದಾಗಿ ಬೆಳೆ, ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕೊಡುಗು ಜಿಲ್ಲೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
   
ಕೊಡಗು ಜಿಲ್ಲೆಯ  4257 ರೈತರ ಸಾಲಮನ್ನಾಕ್ಕೆ ರಾಜ್ಯ ಸರ್ಕಾರ ಇಂದು [ಶನಿವಾರ] ಹಣ ಬಿಡುಗಡೆ ಮಾಡಿದೆ. ಸಹಕಾರಿ ಸಾಲ ಮನ್ನಾ- 2018 ಯೋಜನೆಯಡಿ ಹಣ ಬಿಡುಗಡೆ ಮಾಡಿದೆ.

ಕೊಡಗು : ಸಾವಿರಾರು ಹೆಕ್ಟೇರ್‌ ಪ್ರದೇಶದ ಭತ್ತ ಕೃಷಿ ಮಣ್ಣುಪಾಲು!

4257 ರೈತರ 32.64 ಕೋಟಿ ರು. ಸಾಲದ ಹಣವನ್ನು ಸರ್ಕಾರ ರಿಲೀಸ್ ಮಾಡಿದ್ದು, ಈ ಬಗ್ಗೆ ಕೊಡಗು ಡಿಸಿಸಿ ಬ್ಯಾಂಕ್ ಅಧಿಕೃತ ಮಾಹಿತಿ ನೀಡಿದೆ. 2018ರಲ್ಲಿ ಘೋಷಿಸಿದ್ದ 32,903 ರೈತರ 254.81 ಕೋಟಿ ಸಾಲಮನ್ನಾದ ಪೈಕಿ ಅದರಲ್ಲಿ 10421 ರೈತರ 68.45 ಕೋಟಿ ರು. ಬಿಡುಗಡೆ ಮಾಡಲಾಗಿತ್ತು.

16673 ರೈತರ ಪೈಕಿ 6252  ರೈತರ 48.25 ಕೋಟಿ ರು. ಹಣ ಬಾಕಿ ಉಳಿದಿತ್ತು, ಅದರಲ್ಲಿ ಸದ್ಯ 4257 ರೈತರಿಗೆ ಸಂಬಂಧಿಸಿದ 32.64 ಕೋಟಿ ಬಿಡುಗಡೆ ಮಾಡಲಾಗಿದೆ. ಇದ್ರಿಂದ ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

click me!