ಎರಡನೇ ಅಂತಸ್ಥಿನ ಮನೆ ಮೇಲಿಂದ ಬಿದ್ದು ಬ್ಯಾಂಕ್ ಅಧಿಕಾರಿ ಸಾವು|ಮಾಜಿ ಶಾಸಕ ಎಂ.ಎಲ್. ಮುತ್ತಣ್ಣವರ ಪುತ್ರ ಸತ್ಯಾನಂದ|ದಾವಣಗೆರೆ ನಗರದ ವಿವೇಕಾನಂದ ಬಡಾವಣೆಯಲ್ಲಿ ಘಟನೆ
ದಾವಣಗೆರೆ, [ಸೆ.14]: 2ನೇ ಅಂತಸ್ಥಿನ ಮನೆ ಮೇಲಿಂದ ಬಿದ್ದು ಮಾಜಿ ಶಾಸಕ ಎಂ.ಎಲ್. ಮುತ್ತಣ್ಣವರ ಪುತ್ರ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ಸತ್ಯಾನಂದ ಮುತ್ತಣ್ಣವರ (35) ಸಾವನ್ನಪ್ಪಿದ ಮೃತ ದುರ್ದೈವಿ. ಮಾಜಿ ಶಾಸಕ ಎಂ.ಎಲ್. ಮುತ್ತಣ್ಣವರ ಪುತ್ರ ಸತ್ಯಾನಂದ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಂದು [ಶನಿವಾರ] ನೀರಿನ ವಾಲ್ ಆನ್ ಮಾಡಲು ಹೋಗಿ ಆಯ ತಪ್ಪಿ 2ನೇ ಅಂತಸ್ಥಿನ ಮನೆ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸತ್ಯಾನಂದ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ಸಾವನ್ನಪ್ಪಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.