ಬೀದಿ ನಾಯಿಗಳು ದಾಳಿ ನಡೆಸೋದು ಸಾಮಾನ್ಯ. ಆದರೆ ನಾಯಿಗಳು ದಾಳಿ ನಡೆಸಿ 16 ಕುರಿಗಳನ್ನು ಸಾಯಿಸಿವೆ ಎಂದರೆ ನಂಬಲು ಕಷ್ಟ. ಆದರೂ ನಂಬಲೇ ಬೇಕು. ಚಿಕ್ಕಬಳ್ಳಾಪುರದಲ್ಲಿ ನಾಯಿಗಳ ಗುಂಪು ದಾಳಿ ಮಾಡಿ ಸುಮಾರು 16 ಕುರಿಗಳು ಅಸುನೀಗಿದ್ದು, 8 ಕುರಿಗಳು ಗಾಯಗೊಂಡಿವೆ.
ಚಿಕ್ಕಬಳ್ಳಾಪುರ (ಡಿ.18): ಮಧ್ಯರಾತ್ರಿ ಕುರಿ ಕೊಟ್ಟಿಗೆಯಲ್ಲಿ ನಾಯಿಗಳು ದಾಳಿ ನಡೆಸಿದ ಪರಿಣಾಮ 16 ಕುರಿಗಳು ಮೃತಪಟ್ಟಿದ್ದು, 8 ಕುರಿಗಳು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ಬೀಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿ ಬೀಡಗಾನಹಳ್ಳಿಯ ನಾಗರಾಜ್‌ಗೆ ಸೇರಿದ ಕುರಿಗಳು ಕೊಟ್ಟಿಗೆಯಲ್ಲಿ ಇದ್ದಾಗ ಸೋಮವಾರ ಮಧ್ಯರಾತ್ರಿ ನಾಯಿಗಳ ಹಿಂಡು ದಾಳಿ ನಡೆಸಿ ಕುರಿಗಳನ್ನು ಕಚ್ಚಿದ್ದರಿಂದ ಮೃತಪಟ್ಟಿವೆ.
ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಕೃಷಿ ಅಧಿಕಾರಿ
ರೈತ ನಾಗರಾಜು ಕುರಿ ಸಾಕಾಣಿ ಮಾಡಿ ಕುಟುಂಬ ಪೋಷಿಸಿಕೊಳ್ಳುತ್ತಿದ್ದ. ಸುಮಾರು 1 ಲಕ್ಷ ರು. ನಷ್ಟವಾಗಿದೆ ಎಂದು ದೂರು ನೀಡಿದ್ದಾರೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಬೈರೆಡ್ಡಿ, ಜಯಮಾಲಾ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಕಳ್ಳ ಪ್ರಯಾಣಿಕರು ಸಿಕ್ಕಿಬಿದ್ರು, ಬಿಎಂಟಿಸಿ ಕಲೆಕ್ಟ್ ಮಾಡಿದ ಬೆಚ್ಚಿಬೀಳುವ ಮೊತ್ತ!