ಬಾಗಲಕೋಟೆ: ಜಾತ್ರೆ ವೇಳೆ ಅವಘಡ, ರಥ ಚಕ್ರದಡಿ ಸಿಲುಕಿ ವ್ಯಕ್ತಿ ಸಾವು

By Suvarna News  |  First Published Dec 18, 2019, 8:22 AM IST

ಸಿದ್ಧರಾಮೇಶ್ವರ ಜಾತ್ರೆ ವೇಳೆ ಅವಘಡ, ಓರ್ವ ವ್ಯಕ್ತಿ ಸಾವು, ಮತ್ತೊಬ್ಬನಿಗೆ ಗಾಯ| ಲವಳೇಶ್ವರ ತಾಂಡಾದಲ್ಲಿ ನಡೆದ ದುರ್ಘಟನೆ|ರಥ ಎಳೆಯುವಾಗ ಗಾಲಿಗೆ ಸಿಲುಕಿ ವ್ಯಕ್ತಿ ಸಾವು| ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೋಲಿಸರ ಭೇಟಿ|
 


ಬಾಗಲಕೋಟೆ(ಡಿ.18): ರಥ ಎಳೆಯುವಾಗ ಚಕ್ರದಡಿ ಸಿಲುಕಿ ಓರ್ವ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ಜಿಲ್ಲೆಯ ಲವಳೇಶ್ವರ ತಾಂಡಾದಲ್ಲಿ ಮಂಗಳವಾರ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬಸಪ್ಪ (28) ಎಂದು ಗುರುತಿಸಲಾಗಿದೆ. 

ತಾಂಡಾದ ಸಿದ್ಧರಾಮೇಶ್ವರ ಜಾತ್ರೆಯಲ್ಲಿ ರಥ ಎಳೆಯುವಾಗ ಗಾಲಿಯಲ್ಲಿ ಸಿಲುಕಿದ ಬಸಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶರಣಪ್ಪ ಕಂಬಾರ ಅವರು ಗಾಯಗೊಂಡಿದ್ದಾರೆ. ಗಾಯಗೊಂಡ ಶರಣಪ್ಪ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಸಪ್ಪ ಹಾಗೂ ಶರಣಪ್ಪ ಕಂಬಾರ ಇಬ್ಬರೂ ಜಡ್ರಾಮಕುಂಟಿ ಗ್ರಾಮದವರು ಎಂದು ತಿಳಿದು ಬಂದಿದೆ. ಜಾತ್ರೆ ಇರುವ ಹಿನ್ನೆಲೆಯಲ್ಲಿ ಇಬ್ಬರೂ ಲವಳೇಶ್ವರ ತಾಂಡಾಕ್ಕೆ ಹೋಗಿದ್ದರು. ಆದರೆ, ವಿಧಿಯಾಟದಿಂದ ಬಸಪ್ಪ ಇಹಲೋಕ ತ್ಯಜಿಸಿದ್ದಾನೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.(ಸಾಂದರ್ಭಿಕ ಚಿತ್ರ)
 

click me!