ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದ ಕೃಷಿ ಅಧಿಕಾರಿ

By Kannadaprabha NewsFirst Published Dec 18, 2019, 8:12 AM IST
Highlights

ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಡಿ.ಚಂದ್ರಶೇಖರ್‌ ಅವರು ಲಂಚ ಪಡೆಯುತ್ತಿದ್ದಾಗಲೇ ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದಿದ್ಧಾರೆ. ಸುಮಾರು 3ವರೆ ಲಕ್ಷದಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿ, ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಪುರ(ಡಿ.18): ಲಂಚ ಪಡೆಯುತ್ತಿದ್ದ ಆರೋಪದಡಿ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಡಿ.ಚಂದ್ರಶೇಖರ್‌ ವಿರುದ್ಧ ಪ್ರಕರಣ ದಾಖಲಿಸಿ, ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.

ಬಾಗೇಪಲ್ಲಿ ತಾಲೂಕಿನ ಬುಟ್ಟಿವಾರಿಪಲ್ಲಿಯ ಲಕ್ಷ್ಮೀನರಸಿಂಹಪ್ಪ ಎಂಬುವರು ಹನಿ ನೀರಾವರಿ ಯೋಜನೆಯಡಿ 15 ಕಾಮಗಾರಿಗಳಿಗೆ ಸುಮಾರು 16 ಲಕ್ಷ ಬಿಲ್‌ ಮಾಡಿಕೊಡಲು ಕೃಷಿ ಅಧಿಕಾರಿ ಚಂದ್ರಶೇಖರ್‌ 3.5 ಲಕ್ಷ ರು. ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 50 ಸಾವಿರ ನೀಡಲಾಗಿತ್ತು ಎನ್ನಲಾಗಿದೆ.

'BJPಗೆ ನಮ್ಮ ಅವಶ್ಯಕತೆ ಇಲ್ಲ, JDS ಬಿಡೋ ಪ್ರಶ್ನೆ ಇಲ್ಲ'..!

2ನೇ ಕಂತಿನ 50 ಸಾವಿರ ಮಂಗಳವಾರ ಮಧ್ಯಾಹ್ನ ಸ್ವೀಕರಿಸುತ್ತಿದ್ದಾಗ ಚಿಕ್ಕಬಳ್ಳಾಪುರದ ಎಸಿಬಿ ಉಪಾಧೀಕ್ಷಕ ಕೆ.ಎಸ್‌. ವೆಂಕಟೇಶ ನಾಯ್ಡು ನೇತೃತ್ವದಲ್ಲಿ ದಾಳಿ ನಡೆಸಿ, 50 ಸಾವಿರ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ಚಂದ್ರಶೇಖರ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸಿಬಿ ಉಪಾಧೀಕ್ಷಕ ಕೆ.ಎಸ್‌.ವೆಂಕಟೇಶ್‌ ನಾಯ್ಡು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಸಿಬಿ ಇನ್ಸ್‌ಪೆಕ್ಟರ್‌ ಲಕ್ಷ್ಮೀದೇವಮ್ಮ ಸೇರಿದಂತೆ ಸಿಬ್ಬಂದಿ ಇದ್ದರು.

ದೆಹಲಿ ರೇಪ್ ಕ್ಯಾಪಿಟಲ್: 'ಮೋದಿ ಹೇಳಿದ್ರೆ ಚಕಾರವಿಲ್ಲ..'!

click me!