15 ಕೋಟಿ ಬೆಸ್ಕಾಂ ಬಿಲ್‌ ಬಾಕಿ : ನೀರು, ಬೀದಿ ದೀಪ ಬಂದ್‌?

By Kannadaprabha News  |  First Published Nov 9, 2021, 6:51 AM IST
  • ಸುಮಾರು 15 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಪರಿಣಾಮ 
  • ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಸಂಪರ್ಕ ಹಾಗೂ ಬೀದಿ ದೀಪಗಳು ಬಂದ್‌

 ಕೆಂಗೇರಿ (ನ.09): ಸುಮಾರು 15 ಕೋಟಿ ರು. ವಿದ್ಯುತ್‌ ಬಿಲ್‌ (Electricity Bill) ಬಾಕಿ ಉಳಿಸಿಕೊಂಡಿರುವ ಪರಿಣಾಮ ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳ (Grama Panchayat) ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ (Drinking water) ಸಂಪರ್ಕ ಹಾಗೂ ಬೀದಿ ದೀಪಗಳು (Street Light) ಬಂದ್‌ ಆಗುವ ಸಾಧ್ಯತೆಯಿದೆ.

ಏಕೆಂದರೆ, ಈ ಗ್ರಾಮ ಪಂಚಾಯಿತಿಗಳು ಬೆಸ್ಕಾಂಗೆ(Bescom) ಕುಡಿಯುವ ನೀರು ಹಾಗೂ ಬೀದಿ ದೀಪಗಳ ವಿದ್ಯುತ್‌ ಶುಲ್ಕ ಪಾವತಿ ಮಾಡದೆ 14.60 ರು. ಕೋಟಿ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಕುಡಿಯುವ ನೀರು, ಬೀದಿ ದೀಪಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂ ಆದೇಶ ಮಾಡಿದೆ.

Latest Videos

undefined

ಬೆಸ್ಕಾಂ ಕೆಂಗೇರಿ (Kengeri) ವಿಭಾಗದ ಕೆ-1, ಕೆ-3, ಕೆ-4 ಉಪ ವಿಭಾಗಗಳ ವ್ಯಾಪ್ತಿಯಲ್ಲಿನ ಗ್ರಾಪಂಗಳು ಭಾರಿ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ. ಕೆ-1 ಉಪ ವಿಭಾಗದ ಸುಲಿಕೆರೆ ಗ್ರಾಪಂ, ಎಚ್‌.ಗೊಲ್ಲಹಳ್ಳಿ, ಕುಂಬಳಗೋಡು, ಕೆ.ಗೊಲ್ಲಹಳ್ಳಿ, ರಾಮೋಹಳ್ಳಿ ಗ್ರಾಪಂಗಳಿಂದ ಬರೋಬ್ಬರಿ ರು. 9.5 ಕೋಟಿ ಪಾವತಿಯಾಗಬೇಕಿದೆ. ಇನ್ನು ಕೆ-3 ಉಪ ವಿಭಾಗದ ಕಗ್ಗಲಿಪುರ, ಸೋಮನಹಳ್ಳಿ, ಅಗರ, ತರಳು, ನೆಲಗುಳಿ, ಕಗ್ಗಲಹಳ್ಳಿ ಹಾಗೂ ದೇವಸಂದ್ರ ಗ್ರಾಪಂಗಳಿಂದ ರು.2.5 ಕೋಟಿ ಬಾಕಿ ಇದೆ. ಕೆ-4 ಉಪ ವಿಭಾಗದ ಕೊಡಗಹಳ್ಳಿ ಗ್ರಾಪಂನಿಂದ ರು.2.60 ಕೋಟಿ ಬಾಕಿ ಇದೆ ಎಂದು ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಶ್ರೀಕಾಂತ್‌ ತಿಳಿಸಿದ್ದಾರೆ.

13 ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಕುಡಿಯುವ ನೀರು ಹಾಗೂ ಬೀದಿ ದೀಪಗಳ ವಿದ್ಯುತ್‌ ಶುಲ್ಕ ಪಾವತಿಗೆ ಮನವಿ ಮಾಡಲಾಗಿದೆ. ಆದರೂ ಪಂಚಾಯಿತಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಆದೇಶ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಗ್ರಾಮ ಪಂಚಾಯಿತಿಗಳು ಕಾರಣವೇ ಹೊರತು ಬೆಸ್ಕಾಂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು : 

ತುಮಕೂರು  : ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ಬೆಸ್ಕಾಂ (Bescom) ಸಿಬ್ಬಂದಿಗೆ ಅಟ್ಟಾಡಿಸಿ ಕಲ್ಲು, ದೊಣ್ಣೆಗಳಿಂದ ಹೊಡೆದ ಘಟನೆ ತುಮಕೂರು (Tumakuru) ಜಿಲ್ಲೆ, ಶಿರಾ ತಾಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ ನಡೆದಿತ್ತು.

ವಿದ್ಯುತ್ ಬಿಲ್ ವಸೂಲಿಗಾಗಿ ಶಾಖಾಧಿಕಾರಿ ತೆರಳಿದ್ದರು. ಈ ವೇಳೆ ಗ್ರಾಮಸ್ಥರು ಕಲ್ಲು ದೊಣ್ಣೆಗಳಿಂದ ಹಲ್ಲೆ (Assault ) ನಡೆಸಿದ್ದರು. ಗ್ರಾಮಸ್ಥರು ಹಲ್ಲೆ ನಡೆಸಿರುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಇದೀಗ ಅದು ಎಲ್ಲೆಡೆ (Video) ವೈರಲ್‌ ಆಗಿತ್ತು.

 ಮೊಬೈಲ್​ನಲ್ಲಿ ಸೆರೆಯಾಗಿದೆ. ಲೈನ್ ಮ್ಯಾನ್​ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬುವರ ಮೇಲೆಯೂ ಹಲ್ಲೆ ನಡೆಸಿದ್ದು, ಶಾಖಾಧಿಕಾರಿ ರಾಜಣ್ಣಗೆ ಗಂಭೀರ ಗಾಯವಾಗಿದೆ. ಸದ್ಯ  ಗಾಯಾಳುಗಳೆಲ್ಲರನ್ನೂ ಶಿರಾ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಈ ಘಟನೆಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೂಡ ನಡೆಸಲಾಗಿತ್ತು. 

  • ಸುಮಾರು 15 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಪರಿಣಾಮ
  • ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳಿಂದ ಬಾಕಿ
  •  ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಸಂಪರ್ಕ ಹಾಗೂ ಬೀದಿ ದೀಪಗಳು ಬಂದ್‌?
  •  ಬೆಸ್ಕಾಂಗೆ ಕುಡಿಯುವ ನೀರು ಹಾಗೂ ಬೀದಿ ದೀಪಗಳ ವಿದ್ಯುತ್‌ ಶುಲ್ಕ ಪಾವತಿ ಮಾಡದೆ 14.60 ರು. ಕೋಟಿ ಬಾಕಿ  
  • 13 ಗ್ರಾಪಂಗಳ ಪಂಚಾಯಿತಿಗೆ ಹಲವು ಬಾರಿ ಪತ್ರ ಬರೆದು  ಶುಲ್ಕ ಪಾವತಿಗೆ ಮನವಿ ಮಾಡಲಾಗಿದೆ
  •  ಪಂಚಾಯಿತಿಗಳು ಕ್ರಮ ಕೈಗೊಂಡಿಲ್ಲದ ಕಾರಣ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಆದೇಶ  
click me!