ಸಂಬಳದ ವಿಚಾರಕ್ಕೆ ಗುಂಪು ಘರ್ಷಣೆ: ವ್ಯಕ್ತಿ ಸಾವು

By Kannadaprabha NewsFirst Published May 25, 2020, 12:15 PM IST
Highlights

ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ವಾಟರ್‌ ಮ್ಯಾನ್‌ ಸಂಬಳದ ವಿಚಾರವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ವ್ಯಕಿಯೊರ್ವ ಮೃತಪಟ್ಟು, ಗ್ರಾಮದಲ್ಲಿ ಬೈಕ್‌ಗಳು ಮತ್ತು ಟ್ರಾಕ್ಟರ್‌ಗಳಿಗೆ ಬೆಂಕಿದ ಘಟನೆ ನಡೆದಿದೆ.

ಕೋಲಾರ(ಮೇ 25): ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ವಾಟರ್‌ ಮ್ಯಾನ್‌ ಸಂಬಳದ ವಿಚಾರವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ವ್ಯಕಿಯೊರ್ವ ಮೃತಪಟ್ಟು, ಗ್ರಾಮದಲ್ಲಿ ಬೈಕ್‌ಗಳು ಮತ್ತು ಟ್ರಾಕ್ಟರ್‌ಗಳಿಗೆ ಬೆಂಕಿದ ಘಟನೆ ನಡೆದಿದೆ.

ತಾಲೂಕು ಕಸಬಾ ಹೋಬಳಿ ಮಾಸ್ತೇನಹಳ್ಳಿ ಪಂಚಾಯಿತಿಯ ಗೌಡಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಗ್ರಾಮದ ವೆಂಕಟಕೃಷ್ಣಪ್ಪ (60) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಈಗ ಗಲಭೆ ಹತೋಟಿಗೆ ಬಂದಿದ್ದು ಬಿಗಿ ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿದೆ.

ಲಾಕ್‌ಡೌನ್‌ ಎಫೆಕ್ಟ್: ದೇವಸ್ಥಾನದಲ್ಲಿ ಸರಳ ವಿವಾಹ!

ಕಳೆದ ನಾಲ್ಕು ದಿನಗಳ ಹಿಂದೆ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಸಭೆ ನಡೆದಿದ್ದು, ಸಭೆಯಲ್ಲಿ ಗೌಡಹಳ್ಳಿ ಗ್ರಾಮದ ವಾಟರ್‌ ಮ್ಯಾನ್‌ ರಾಮಚಂದ್ರಪ್ಪ ಮಾಸಿಕ ಸಂಬಳದ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿದ್ದ ಗ್ರಾಮದ ವೆಂಕಟರೆಡ್ಡಿ ಈಗ ಅದರ ವಿಚಾರ ಬೇಡ ಗ್ರಾಮದಲ್ಲಿ ಮಾತನಾಡೋಣ ಎಂದರು. ನಂತರ ಸಭೆ ನಡೆದ ದಿನವೇ ಈ ವಿಚಾರದಲ್ಲಿ ವಾಟರ್‌ ಮ್ಯಾನ್‌ ರಾಮಚಂದ್ರಪ್ಪನ ಸಹೋದರ ವೆಂಕಟಕೃಷ್ಣಪ್ಪ ಮತ್ತು ಪಂಚಾಯಿತಿ ಸದಸ್ಯ ವೆಂಕಟರೆಡ್ಡಿ ನಡುವೆ ದೂರವಾಣಿಯಲ್ಲಿ ಮಾತಿನ ಚಕಮುಕಿ ನಡೆಯಲಾಗಿ ಇದು ಗ್ರಾಮದಲ್ಲಿ ಗುಂಪು ಘರ್ಷಣೆಗೆ ದಾರಿಯಾಗಿದೆ. ಈ ಸಂದರ್ಭದಲ್ಲಿ ವೆಂಕಟಕೃಷ್ಣಪ್ಪನ ತಲೆಗೆ ಪೆಟ್ಟಾಗಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್‌ ಆಸ್ಪತ್ರೆಗೆ ದಾಖಲಿಸಿ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಗ್ರೀನ್‌ ಝೋನ್ ಆಗಿದ್ದ ಉಡುಪಿಯಲ್ಲಿ ಹತ್ತೇ ದಿನದಲ್ಲಿ 73 ಪಾಸಿಟಿವ್‌ ಪ್ರಕರಣ

ಈ ಸಂಬಂಧ ಗ್ರಾಮದಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಏರ್ಪಟ್ಟು ಮೃತನ ಕಡೆಯವರು ಪಂಚಾಯಿತಿ ಸದಸ್ಯ ವೆಂಕಟರೆಡ್ಡಿ ಹಾಗೂ ಆತನ ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಮನೆಗಳ ಮೇಲೂ ಸಹ ಕಲ್ಲುತೂರಾಟಗಳು ನಡೆದಿರುತ್ತದೆ. ಈ ಸಂಬಂಧ ಎರಡು ಕಡೆಯಿಂದಲೂ ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ. ಗ್ರಾಮಕ್ಕೆ ಎಎಸ್ಪಿ ಜಾಹ್ನವಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

click me!