14 ಲಕ್ಷ ರು. ಮೌಲ್ಯದ ಸಿಗರೇಟ್‌ ಕಳವು

Kannadaprabha News   | Asianet News
Published : Sep 13, 2020, 09:59 AM IST
14 ಲಕ್ಷ ರು. ಮೌಲ್ಯದ ಸಿಗರೇಟ್‌ ಕಳವು

ಸಾರಾಂಶ

ಸುಮಾರು 14 ಲಕ್ಷ ರು. ಮೌಲ್ಯದ ಸಿಗರೇಟ್ ಕದ್ದೊಯ್ದ ಪ್ರಕರಣ ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. 

ಹುಬ್ಬಳ್ಳಿ (ಸೆ.13):  ರಾಜ್ಯದೆಲ್ಲೆಡೆ ಗಾಂಜಾ ಘಮಲು ಸದ್ದು ಮಾಡುತ್ತಿರುವ ಬೆನ್ನಲ್ಲೆ ನಗರದಲ್ಲಿ ಬರೋಬ್ಬರಿ .14 ಲಕ್ಷ ಕಿಮ್ಮತ್ತಿನ ಸಿಗರೇಟ್‌ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ಗದಗ ರಸ್ತೆ ಐಟಿಸಿ ಗೋದಾಮಿನಿಂದ ಗಬ್ಬೂರು ಗ್ರಾಮದ ಆರ್‌ಟಿಒ ಆಫೀಸ್‌ನ ಮಧ್ಯದಲ್ಲಿ ಗೂಡ್ಸ್‌ ನಿಲ್ಲಿಸಿದ್ದ ವೇಳೆ ಘಟನೆ ನಡೆದಿದೆ. ಗೂಡ್ಸ್‌ ಮೇಲ್ಭಾಗದಲ್ಲಿ ಕಟ್ಟಿದ್ದ ತಾಡಪಾಲನ್ನು ಹರಿದಿರುವ ಕಳ್ಳರು ಸಿಗರೇಟ್‌ ತುಂಬಿದ್ದ ಬಾಕ್ಸನ್ನು ಕದ್ದೊಯ್ದಿದ್ದಾರೆ. 

ಹುಬ್ಬಳ್ಳಿ-ಧಾರವಾಡ: ಗ್ರಾಮೀಣ ಭಾಗದಲ್ಲೂ ಇದೆ ಗಾಂಜಾ ಘಾಟು! ...

5,30,439 ರು. ಮೌಲ್ಯದ 5 ಬಾಕ್ಸ್‌ ಗೋಲ್ಡ್‌ ಫ್ಲೇಕ್‌ ಸಿಗರೇಟ್‌, 7,35,885 ರು. ಮೌಲ್ಯದ ಗೋಲ್ಡ್‌ ಫ್ಲೇಕ್‌ ಕಿಂಗ್‌ ಸಿಗರೇಟ್‌ 5 ಬಾಕ್ಸ್‌, 1,47,177 ರು. ಮೌಲ್ಯದ ಗೋಲ್ಡ್‌ ಫ್ಲೇಕ್‌ ಕಿಂಗ್‌ ಬ್ಲೂ ಸಿಗರೇಟ್‌ 1 ಬಾಕ್ಸ್‌ ಸೇರಿದಂತೆ ಇನ್ನೂ ಐದು ಬಗೆಯ ಸಿಗರೇಟ್‌ ಬಂಡಲ್‌ಗಳು ಕಳುವಾಗಿವೆ. ಒಟ್ಟಾರೆ 14,46,698 ರು. ಮೌಲ್ಯದ ಸಿಗರೇಟ್‌ ಕಳುವಾಗಿದೆ ಎಂದು ಚಾಲಕ ದ್ಯಾಮಣ್ಣ ನೀಲಪ್ಪ ಬಡಿಗೇರ ಎಂಬವರು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ತನಿಖೆಯಲ್ಲಿದೆ.

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!