ಡ್ರಗ್ಸ್ ಕೇಸ್ : ಯುವ ಮುಖಂಡ ಸಿಸಿಬಿ ವಶಕ್ಕೆ?

Kannadaprabha News   | Asianet News
Published : Sep 13, 2020, 09:39 AM IST
ಡ್ರಗ್ಸ್ ಕೇಸ್ : ಯುವ ಮುಖಂಡ ಸಿಸಿಬಿ ವಶಕ್ಕೆ?

ಸಾರಾಂಶ

ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಯುವ ಮುಖಂಡನನ್ನು ಅರೆಸ್ಟ್ ಮಾಡಲಾಗಿದೆ. 

ಹುಬ್ಬಳ್ಳಿ (ಸೆ.13): ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಮುಖಂಡನೊಬ್ಬನನ್ನು ಇಲ್ಲಿನ ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮಾಜಿ ಸಚಿವರೊಬ್ಬರ ಆಪ್ತನಾಗಿರುವ ಈತ, ನಟಿ ರಾಗಿಣಿ ಸೇರಿದಂತೆ ಮತ್ತಿತರರನ್ನು ಗೋವಾ ಕ್ಯಾಸಿನೋಗೆ ಕರೆದುಕೊಂಡು ಹೋಗಿದ್ದ. ಆಗ ರಾಗಿಣಿ ಜತೆ ತೆಗೆಸಿಕೊಂಡ ಫೋಟೋಗಳನ್ನು ಫೇಸ್‌ಬುಕ್‌ಗೂ ಅಪ್‌ಲೋಡ್‌ ಮಾಡಿದ್ದ. 

ಡ್ರಗ್ಸ್ ಕೇಸಲ್ಲಿ ತಗಲಾಕೊಂಡಿರೋ ನಟಿಮಣಿಯರಿಗೆ ಮತ್ತೊಂದು ಸಂಕಷ್ಟ ...

ಬಳಿಕ ಡಿಲೀಟ್‌ ಕೂಡ ಮಾಡಿದ್ದು, ಒಂದು ವಾರದಿಂದ ಈ ಕುರಿತು ವದಂತಿಗಳು ಹಬ್ಬಿದ್ದವು. ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ಸಿಸಿಬಿ ಅಧಿಕಾರಿಗಳ ತಂಡ ಇಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆನ್ನಲಾಗಿದೆ. 

ಅದರಂತೆ ಈತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಡ್ರಗ್ಸ್ ದಂಧೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಹಲವರನ್ನು ಬಂಧಿಸಿ ತನಿಖೆಗೂ ಒಳಪಡಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಮುಖಂಡನನ್ನು ಅರೆಸ್ಟ್ ಮಾಡಲಾಗಿದೆ. 

ರಾಜ್ಯದಲ್ಲಿ ಡ್ರಗ್ಸ್ ದಂಧೆ ಬೆಳಕಿಗೆ ಬರುತ್ತಲೇ ಒಂದೊಂದೇ ಹೆಸರುಗಳು ಹೊರಬರುತ್ತಿದ್ದು, ಹೊಸ ಹೊಸ ಆಯಾಮಗಳೇ ದೊರೆಯುತ್ತಿವೆ. 

PREV
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!