ಡ್ರಗ್ಸ್‌ ಮಾಫಿಯಾ: ಮಾಜಿ ಸಚಿವರೊಬ್ಬರ ಆಪ್ತ ಸಿಸಿಬಿ ವಶಕ್ಕೆ?

Kannadaprabha News   | Asianet News
Published : Sep 13, 2020, 09:40 AM ISTUpdated : Sep 13, 2020, 09:47 AM IST
ಡ್ರಗ್ಸ್‌ ಮಾಫಿಯಾ: ಮಾಜಿ ಸಚಿವರೊಬ್ಬರ ಆಪ್ತ ಸಿಸಿಬಿ ವಶಕ್ಕೆ?

ಸಾರಾಂಶ

ಮಾಜಿ ಸಚಿವರೊಬ್ಬರ ಆಪ್ತನಾಗಿರುವ ಈತ, ನಟಿ ರಾಗಿಣಿ ಸೇರಿದಂತೆ ಮತ್ತಿತರರನ್ನು ಗೋವಾ ಕ್ಯಾಸಿನೋಗೆ ಕರೆದುಕೊಂಡು ಹೋಗಿದ್ದ| ರಾಗಿಣಿ ಜತೆ ತೆಗೆಸಿಕೊಂಡ ಫೋಟೋಗಳನ್ನು ಫೇಸ್‌ಬುಕ್‌ಗೂ ಅಪ್‌ಲೋಡ್‌ ಮಾಡಿದ್ದ, ಬಳಿಕ ಡಿಲೀಟ್‌ ಕೂಡ ಮಾಡಿದ್ದಾನೆ| 

ಹುಬ್ಬಳ್ಳಿ(ಸೆ.13): ಬೆಂಗಳೂರಿನಲ್ಲಿ ಡ್ರಗ್ಸ್‌ ಜಾಲದ ನಂಟು ಹುಬ್ಬಳ್ಳಿಗೂ ಹಬ್ಬಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಸಂಬಂಧ ಯುವ ಮುಖಂಡನೊಬ್ಬನನ್ನು ಇಲ್ಲಿನ ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವರೊಬ್ಬರ ಆಪ್ತನಾಗಿರುವ ಈತ, ನಟಿ ರಾಗಿಣಿ ಸೇರಿದಂತೆ ಮತ್ತಿತರರನ್ನು ಗೋವಾ ಕ್ಯಾಸಿನೋಗೆ ಕರೆದುಕೊಂಡು ಹೋಗಿದ್ದ. ಆಗ ರಾಗಿಣಿ ಜತೆ ತೆಗೆಸಿಕೊಂಡ ಫೋಟೋಗಳನ್ನು ಫೇಸ್‌ಬುಕ್‌ಗೂ ಅಪ್‌ಲೋಡ್‌ ಮಾಡಿದ್ದ. ಬಳಿಕ ಡಿಲೀಟ್‌ ಕೂಡ ಮಾಡಿದ್ದಾನೆ. ಕಳೆದ ಒಂದು ವಾರದಿಂದ ಈ ಕುರಿತು ವದಂತಿಗಳು ಹಬ್ಬಿದ್ದವು.

ಡ್ರಗ್ಸ್‌ ಮಾಫಿಯಾ: ಕೊರೋನಾ ನೆಪ ಹೇಳಿ ಎಸ್ಕೇಪ್‌ ಆಗಿದ್ದ ಮತ್ತೊಬ್ಬ ಅರೆಸ್ಟ್‌

ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ಸಿಸಿಬಿ ಅಧಿಕಾರಿಗಳ ತಂಡ ಇಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆನ್ನಲಾಗಿದೆ. ಅದರಂತೆ ಈತನನ್ನು ವಶಕ್ಕೆ ಪಡೆದು ಪಾರ್ಟಿ ಮಾಡಿದ್ದಾರೆನ್ನಲಾದ ಸ್ಥಳಗಳಿಗೆ ಕರೆದುಕೊಂಡು ಹೋಗಿ ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿನ ಡ್ರಗ್ಸ್‌ ಜಾಲದ ನಂಟು ಹುಬ್ಬಳ್ಳಿಗೂ ಹಬ್ಬಿದೆ ಎಂಬ ಮಾತು ಕೇಳಿ ಬರುತ್ತಿರುವುದಂತೂ ಸತ್ಯ. ಆದರೆ ಇದು ಎಷ್ಟರ ಮಟ್ಟಿಗೆ ಎಂಬುದು ಖಚಿತವಾಗಬೇಕೆಂದರೆ ಇನ್ನಷ್ಟುದಿನಗಳ ಕಾಲ ಬೇಕಾಗಬಹುದು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!