ಬೆಂಗಳೂರು: 14 ದಿನಗಳಲ್ಲಿ 123 ಮಂದಿ ಕೊರೋನಾಗೆ ಬಲಿ

By Kannadaprabha NewsFirst Published Nov 15, 2020, 7:23 AM IST
Highlights

ಬೆಂಗಳೂರಲ್ಲಿ ಶನಿವಾರ 1195 ಮಂದಿಗೆ ಸೋಂಕು| 4000 ಗಡಿಯತ್ತ ಸಾವಿನ ಸಂಖ್ಯೆ| ಕಳೆದ ಎಂಟೂವರೆ ತಿಂಗಳ ಅವಧಿಯಲ್ಲಿ ನಡೆಸಿದ ಕೊರೋನಾ ಸೋಂಕು ಪರೀಕ್ಷೆ ಹಾಗೂ ಪತ್ತೆಯಾದ ಸೋಂಕಿತರ ಸಂಖ್ಯೆ ಗಮನಿಸಿದಾಗ ಜುಲೈ ತಿಂಗಳಲ್ಲಿ ಅತಿ ಹೆಚ್ಚು, ಅಂದರೆ ಪರೀಕ್ಷೆ ನಡೆಸಿದ 2,15,765 ಪೈಕಿ 52,106 ಜನರಲ್ಲಿ ಸೋಂಕು ಪತ್ತೆ| 

ಬೆಂಗಳೂರು(ನ.15): ನಗರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,195 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಂಬತ್ತು ಮಂದಿ ಮೃತರಾಗಿದ್ದಾರೆ. 771 ಜನರು ಗುಣಮುಖರಾಗಿದ್ದಾರೆ.

ಈವರೆಗೆ ನಗರದಲ್ಲಿ ಈವರೆಗೆ ಸೋಂಕಿಗೆ ತುತ್ತಾದವರ ಸಂಖ್ಯೆ 3,56,440ಕ್ಕೆ ಏರಿಕೆಯಾಗಿದ್ದರೆ, ಗುಣಮುಖರಾದವರ ಒಟ್ಟು ಸಂಖ್ಯೆ 3,34,258ಕ್ಕೆ ತಲುಪಿದೆ. ಒಟ್ಟು ಸಾವಿನ ಸಂಖ್ಯೆ 3,997ಕ್ಕೆ ಏರಿಕೆಯಾಗಿದೆ. ಈ ಮಧ್ಯ ನಗರದಲ್ಲಿ ಇನ್ನೂ 18,184 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 386 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೆಪ್ಟೆಂಬರಲ್ಲಿ ಅತಿ ಹೆಚ್ಚು ಸಾವು:

ನಗರದಲ್ಲಿ ಮಾ.8ರಂದು ಮೊದಲ ಕೊರೋನಾ ಸೋಂಕು ಪ್ರಕರಣ ಪತ್ತೆಯೊಂದಿಗೆ ಆ ತಿಂಗಳಲ್ಲಿ ಒಟ್ಟು 44 ಸೋಂಕು ಪ್ರಕರಣ ದಾಖಲಾಗಿತ್ತು. ಸಾವಿನ ಸಂಖ್ಯೆ ಶೂನ್ಯವಿತ್ತು. ಆದರೆ ಏಪ್ರಿಲ್‌ನಲ್ಲಿ 6 ಜನರು ಮೃತಪಟ್ಟರು. ನಂತರ ಮೇ 11, ಜೂನ್‌ 83, ಜುಲೈ 962, ಆಗಸ್ಟ್‌ 950, ಸೆಪ್ಟೆಂಬರ್‌ 971 ಹಾಗೂ ಅಕ್ಟೋಬರ್‌ ತಿಂಗಳಲ್ಲಿ 897 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ನವೆಂಬರ್‌ನಲ್ಲಿ ಸೋಂಕು ಹಾಗೂ ಸಾವಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಕಳೆದ 14 ದಿನಗಳಲ್ಲಿ 123 ಮಂದಿ ಸಾವನ್ನಪ್ಪಿದ್ದಾರೆ.

ಕೊರೋನಾ ಕೇಸ್‌ನಲ್ಲಿ ಭಾರೀ ಇಳಿಕೆ: 7 ತಿಂಗಳ ಬಳಿಕ 3ಕ್ಕೆ ಇಳಿದ ಸಾವಿನ ಸಂಖ್ಯೆ

ಜುಲೈನಲ್ಲಿ ಅತಿ ಹೆಚ್ಚು ಪ್ರಕರಣ:

ಕಳೆದ ಎಂಟೂವರೆ ತಿಂಗಳ ಅವಧಿಯಲ್ಲಿ ನಡೆಸಿದ ಕೊರೋನಾ ಸೋಂಕು ಪರೀಕ್ಷೆ ಹಾಗೂ ಪತ್ತೆಯಾದ ಸೋಂಕಿತರ ಸಂಖ್ಯೆ ಗಮನಿಸಿದಾಗ ಜುಲೈ ತಿಂಗಳಲ್ಲಿ ಅತಿ ಹೆಚ್ಚು, ಅಂದರೆ ಪರೀಕ್ಷೆ ನಡೆಸಿದ 2,15,765 ಪೈಕಿ 52,106 ಜನರಲ್ಲಿ ಸೋಂಕು ಪತ್ತೆಯಾಗಿತ್ತು.

ನಗರದಲ್ಲಿ ಮಾರ್ಚ್‌ನಲ್ಲಿ 1,169 ಮಂದಿ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಿದಾಗ 44 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ 8,824 ಮಂದಿ ಪರೀಕ್ಷೆ ಪೈಕಿ 101, ಮೇ ತಿಂಗಳಲ್ಲಿ 35,173 ಮಂದಿ ಪರೀಕ್ಷೆ ಪೈಕಿ 386, ಜೂನ್‌ನಲ್ಲಿ 70,973 ಮಂದಿ ಪರೀಕ್ಷೆ ಪೈಕಿ 4,904, ಜುಲೈನಲ್ಲಿ 2,15,765 ಪರೀಕ್ಷೆ ನಡೆಸಿದಾಗ 52,106 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆಗಸ್ಟ್‌ ನಲ್ಲಿ 5,55,400 ಪರೀಕ್ಷೆ ಪೈಕಿ 74,696, ಸೆಪ್ಟೆಂಬರ್‌ನಲ್ಲಿ 8,01,288 ಮಂದಿ ಪರೀಕ್ಷೆ ಪೈಕಿ 1,02,458, ಅಕ್ಟೋಬರ್‌ನಲ್ಲಿ 12,68,943 ಮಂದಿ ಪರೀಕ್ಷೆ ಪೈಕಿ 1,01,120 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು.ನವೆಂಬರ್‌ನಲ್ಲಿ ಕಳೆದ 14 ದಿನಗಳಲ್ಲಿ 6,55,500 ಮಂದಿ ಪರೀಕ್ಷೆ ಪೈಕಿ 17,804 ಪ್ರಕರಣ ದಾಖಲಾಗಿವೆ.
 

click me!