ರಾತ್ರಿ ಇದ್ದು ಮಲಗಿ ಹೋಗಲು ಬಂದಿಲ್ಲ!: ಎಚ್‌ಡಿಕೆಗೆ ಟಾಂಗ್‌

By Kannadaprabha NewsFirst Published Nov 15, 2020, 7:17 AM IST
Highlights

ನಾನು ರಾತ್ರಿ ಇಲ್ಲಿ ಇದ್ದು ಮಲಗಿ ಹೋಗುವ ಸಲುವಾಗಿ ಬಂದಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಟಾಂಗ್ ನಿಡಲಾಗಿದೆ

ಕೆ.ಆರ್‌.ಪೇಟೆ (ನ.15): ತನ್ನ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದ ಬಗ್ಗೆ ವಿವರ ನೀಡುವಾಗ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಟಾಂಗ್‌ ನೀಡಿದರು. ‘ಎಚ್‌.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ನಾನು ಇಲ್ಲಿ ಕಾಪಿ ಮಾಡುತ್ತಿಲ್ಲ.

ಅವರು ರಾತ್ರಿ ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು. ನಾನು ಬೆಳಗ್ಗೆಯಿಂದ ರಾತ್ರಿಯವರೆಗೆ ರೈತರ ಜೊತೆಗಿದ್ದು ವಾಸ್ತವತೆ ಅರಿಯುತ್ತಿದ್ದೇನೆ’ ಎಂದರು. ‘ನಾನೂ ರೈತನ ಮಗ. ಕೃಷಿ ಕಾಯಕ ನನಗೆ ಹೊಸದೇನೂ ಅಲ್ಲ. ಮೊದಲೆಲ್ಲ ನಾನು ಎಲ್ಲಾ ರೀತಿಯ ಕೃಷಿ ಕೆಲಸವನ್ನು ಮಾಡಿದ್ದೇನೆ. ಪೊಲೀಸ್‌ ಇಲಾಖೆ ಹಾಗೂ ಸಿನಿಮಾಗೆ ಬಂದ ಮೇಲೆ ಕೃಷಿ ಅನುಭವ ಕಡಿಮೆಯಾಗಿದೆ. ಹೀಗಾಗಿ ಮೈ ಸ್ವಲ್ಪ ಬಗ್ಗುತ್ತಿಲ್ಲ. ಈಗ ಮತ್ತೆ ಮೈ ಬಗ್ಗಿಸಿದರೆ ರೈತರ ರೀತಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಬೇರೆಯಲ್ಲ, ಜೋಡೆತ್ತುಗಳಾಗಿ ದುಡಿಯುತ್ತೇವೆ

 ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಅಣ್ಣ-ತಮ್ಮಂದಿರಿದ್ದಂತೆ ಎಂದು ಸಚಿವ ಬಿ.ಸಿ.ಪಾಟೀಲ್‌ ಬಣ್ಣಿಸಿದರು. ‘ವಾಸ್ತವದಲ್ಲಿ ನಾನು ಮತ್ತು ತೋಟಗಾರಿಕಾ ಸಚಿವ ನಾರಾಯಣ ಗೌಡ ಹಾಗೆಯೇ ಇದ್ದೇವೆ. ಅವರು ನಾರಾಯಣಗೌಡ. ನಾನು ಬಸವನಗೌಡ. ಕೃಷಿ, ತೋಟಗಾರಿಕೆ ಬೇರೆ ಬೇರೆಯಲ್ಲ.

ಇಂದು ‘ರೈತರ ಜತೆ ಒಂದು ದಿನ’ ಕಾರ‍್ಯಕ್ರಮ: ಅನ್ನದಾತನ ಕಷ್ಟ-ಸುಖ ಕೇಳಲಿರುವ ಕೃಷಿ ಸಚಿವ! ..

ಎರಡೂ ಇಲಾಖೆಗಳೂ ರೈತರನ್ನೇ ಅವಲಂಬಿಸಿವೆ. ನಾವಿಬ್ಬರೂ ಜೋಡೆತ್ತುಗಳಾಗಿ ಕೃಷಿ ಮತ್ತು ತೋಟಗಾರಿಕೆಯನ್ನು ಮುನ್ನಡೆಸುವ ಗುರಿ ಹೊಂದಿದ್ದೇವೆ’ ಎಂದರು. ಲಾಕ್‌ಡೌನ್‌ ಸಮಯದಲ್ಲಿ ಸಾಕಷ್ಟುಸಮಸ್ಯೆಗಳು ಎದುರಾಗಿದ್ದವು. ಆ ವೇಳೆ ನಾನು ಮತ್ತು ನಾರಾಯಣಗೌಡರು ಪರಸ್ಪರ ಹೊಂದಾಣಿಕೆಯಿಂದ ರೈತರ ಉತ್ಪನ್ನಗಳ ಸಾಗಣೆಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾಗಿ ತಿಳಿಸಿದರು.

click me!