ದಾವಣಗೆರೆಯಲ್ಲಿ ಕೊರೋನಾಗೆ ಮಹಿಳೆ ಬಲಿ: 12 ಹೊಸ ಕೇಸ್‌ ಪತ್ತೆ

By Kannadaprabha News  |  First Published Jul 1, 2020, 11:01 AM IST

ದಾವಣಗೆರೆಯಲ್ಲಿ ಮತ್ತೆ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಮಂಗಳವಾರ(ಜೂ.30)ದಂದು ಕೊರೋನಾ ಮತ್ತೊಂದು ಬಲಿ ಪಡೆದಿದೆ. ಇದರ ಜತೆಗೆ ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ದಾವಣಗೆರೆ(ಜು.01): ಕೊರೋನಾ ಸೋಂಕಿಗೆ ಒಂದು ಬಲಿ ಆಗುವುದರೊಂದಿಗೆ ಜಿಲ್ಲೆಯಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಹೊಸದಾಗಿ 12 ಪಾಸಿಟಿವ್‌ ಕೇಸ್‌ಗಳು ವರದಿಯಾದರೆ, 8 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 36 ಸಕ್ರಿಯ ಕೇಸ್‌ಗಳಿವೆ.

ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ)ಯಿಂದ ಬಳಲುತ್ತಿದ್ದ ಇಲ್ಲಿನ ಎಸ್‌ಪಿಎಸ್‌ ನಗರದ ವಾಸಿ 50 ವರ್ಷದ ಮಹಿಳೆ (ಪಿ-14411) ಸೋಂಕಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 309 ಪಾಸಿಟಿವ್‌ ಪ್ರಕರಣ ವರದಿಯಾಗಿದ್ದು, 8 ಜನರು ವೈರಸ್‌ಗೆ ಬಲಿಯಾಗಿದ್ದಾರೆ. 265 ಜನ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 36 ಜನರಿಗೆ ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Tap to resize

Latest Videos

ಹರಿಹರ ನಗರದ ಅಗಸರ ಬೀದಿಯ 40 ವರ್ಷದ ಮಹಿಳೆ (ಪಿ-14400), 16 ವರ್ಷದ ಬಾಲಕಿ (14401)ಯುಪಿ- 9890ರ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಭರಮಸಾಗರದ 75 ವರ್ಷದ ವೃದ್ಧ(14402), ದಾವಣಗೆಗರೆ ಹೊಂಡದ ಸರ್ಕಲ್‌ನ ಸುಲ್ತಾನ್‌ ಪೇಟೆಯ 35 ವರ್ಷದ ಮಹಿಳೆ (14403), ಜಗಳೂರು ಪಟ್ಟಣದ 43 ವರ್ಷದ ಪುರುಷ (14404) ಯು ಇಬ್ಬರೂ ಐಎಲ್‌ಐನಿಂದಾಗಿ ಸೋಂಕಿಗೆ ತುತ್ತಾಗಿದ್ದಾರೆ.

ಸಾವಿನ ಸಂಖ್ಯೆ ಸತತ 10 ದಿನ ಇಳಿದರೆ ಕೊರೋನಾ ಕ್ಷೀಣ!

ಇಲ್ಲಿನ ಬೇತೂರು ರಸ್ತೆಯ 9 ವರ್ಷದ ಬಾಲಕಿ (14405)ಯು ರಾರ‍ಯಂಡಮ್‌ ಸ್ಯಾಂಪಲ್‌ ಸಂಗ್ರಹದ ವೇಳೆ ಸೋಂಕು ದೃಢಪಟ್ಟಿದೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ವಿನೋಬ ನಗರ 2ನೇ ಮುಖ್ಯರಸ್ತೆಯ 50 ವರ್ಷದ ಮಹಿಳೆ (14406), 27 ವರ್ಷದ ಪುರುಷ (14407), 26 ವರ್ಷದ ಪುರುಷ (14408), 76 ವರ್ಷದ ವೃದ್ಧೆಯು ರೋಗಿ ಸಂಖ್ಯೆ 10387 ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. ಹರಿಹರದ ಗಾಂಧಿ ನಗರದ 34 ವರ್ಷದ ಪುರುಷ (14410), ದಾವಣಗೆರೆ ಎಸ್‌ಎಸ್‌ಎಂ ನಗರದ 50 ವರ್ಷದ ಮಹಿಳೆ (14411)ಗೆ ತೀವ್ರ ಉಸಿರಾಟದ ತೊಂದರೆ(ಎಸ್‌ಎಆರ್‌ಐ)ಯ ಹಿನ್ನೆಲೆ ಹೊಂದಿದವರು. ಈ ಪೈಕಿ ಎಸ್‌ಎಸ್‌ಎಂ ನಗರದ ವಾಸಿಯಾದ ಮಹಿಳೆ (14411) ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ.

ಸೋಂಕಿನಿಂದ ಸಂಪೂರ್ಣ ಗುಣಮುಖರಾದ ದಾವಣಗೆರೆ ಬೀಡಿ ಲೇಔಟ್‌ನ 35 ವರ್ಷದ ಮಹಿಳೆ (ಪಿ-9889), ಹರಿಹರದ ಎಕೆ ಕಾಲನಿಯ 10 ವರ್ಷದ ಬಾಲಕ (9894), 35 ವರ್ಷದ ಮಹಿಳೆ (9893), ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದ 34 ವರ್ಷದ ಪುರುಷ (9892), ಕ್ಯಾಸಿನಕೆರೆ ಗ್ರಾಮದ 23 ವರ್ಷದ ಪುರುಷ (10385), ದಾವಣಗೆರೆ ವಿನೋಬ ನಗರದ 34 ವರ್ಷದ ಪುರುಷ (10387), ಬಳ್ಳಾರಿ ಜಿಲ್ಲೆ ಹೊಸಪೇಟೆಯ 48 ವರ್ಷದ ಪುರುಷ (10388), ದಾವಣಗೆರೆ ಬೀಡಿ ಲೇಔಟ್‌ನ 15 ವರ್ಷದ ಬಾಲಕ(10389), 12 ವರ್ಷದ ಬಾಲಕ (10390)ನನ್ನು ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 

click me!