ಲಖನೌಗೆ ಹೋದ ಬೈಲಹೊಂಗಲ ಯೋಧನಿಗೆ ಅಂಟಿದ ಡೆಡ್ಲಿ ಕೊರೋನಾ..!

Kannadaprabha News   | Asianet News
Published : Jul 01, 2020, 10:22 AM IST
ಲಖನೌಗೆ ಹೋದ ಬೈಲಹೊಂಗಲ ಯೋಧನಿಗೆ ಅಂಟಿದ ಡೆಡ್ಲಿ ಕೊರೋನಾ..!

ಸಾರಾಂಶ

ಲಖನೌದಿಂದ ಬೈಲಹೊಂಗಲ ಪಟ್ಟಣಕ್ಕೆ ಬಂದಿದ್ದ ಯೋಧ, ವಾಪಸ್‌ ಲಖನೌಗೆ ಹೋದಾಗ ಕೊರೋನಾ ದೃಢ|ಬೆಳಗಾವಿ ಜಿಲ್ಲೆಯಲ್ಲಿರುವ ಬೈಲಹೊಂಗಲ ಪಟ್ಟಣ| ಜೂ.28 ರಂದು ರೈಲು ಮುಖಾಂತರ ಮತ್ತೆ ಸೇನೆಗೆ ವಾಪಸಾಗಿ ಜೂ.30 ರಂದು ಲಖನೌ ತಲುಪಿ ಅಲ್ಲಿ ಆತನ ಆರೋಗ್ಯ ಪರಿಶೀಲಿಸಿದಾಗ ಸೋಂಕು ಪತ್ತೆ| 

ಬೈಲಹೊಂಗಲ(ಜು. 01): ಕೊರೋನಾ ಸೋಂಕಿತ ಗರ್ಭಿಣಿ ಗುಣಮುಖರಾಗಿ ಮನೆಗೆ ಮರಳಿದ ಬೆನ್ನಲ್ಲೇ ಲಖನೌದಿಂದ ಪಟ್ಟಣಕ್ಕೆ ಬಂದಿದ್ದ ಯೋಧ, ವಾಪಸ್‌ ಲಖನೌಗೆ ಹೋದಾಗ ಕೊರೋನಾ ದೃಢಪಟ್ಟಿದೆ. 

ಯೋಧ ಇಲ್ಲಿ ಓಡಾಡಿದ್ದರಿಂದ ಸಹಜವಾಗಿ ಉತ್ತರ ಪ್ರದೇಶದ ಲಖನೌದಲ್ಲಿ ಎಎಂಸಿ ವಿಭಾಗದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ 21 ವರ್ಷದ ಯುವಕ ಜೂ.22 ರಂದು ರಜೆ ಮೇರೆಗೆ ಬೈಲಹೊಂಗಲಕ್ಕೆ ಬಂದಿದ್ದ. ಈ ವೇಳೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದ ಆತನಿಗೆ ಸೋಂಕಿನ ಲಕ್ಷಣಗಳಿರಲಿಲ್ಲ. 

ಬೆಳಗಾವಿ: ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ, ಗ್ರಾಮವೇ ಸೀಲ್ ಡೌನ್

ಜೂ.28 ರಂದು ರೈಲು ಮುಖಾಂತರ ಮತ್ತೆ ಸೇನೆಗೆ ವಾಪಸಾಗಿ ಜೂ.30 ರಂದು ಲಖನೌ ತಲುಪಿ ಅಲ್ಲಿ ಆತನ ಆರೋಗ್ಯ ಪರಿಶೀಲಿಸಿದಾಗ ಸೋಂಕು ಪತ್ತೆಯಾಗಿದೆ. ಹೀಗಾಗಿ ತಹಶೀಲ್ದಾರ ಸೂಚನೆ ಮೇರೆಗೆ ಕಂದಾಯ ನಿರೀಕ್ಷಕ ಎಂ.ಬಿ.ಹಿರೇಮಠ, ಪುರಸಭೆ ಪರಿಸರ ಅಭಿಯಂತರ ಸತೀಶ ಖಜ್ಜಿಡೋಣಿ, ಆರೋಗ್ಯ ಇಲಾಖೆ ಅಧಿಕಾರಿ ಎಸ್‌.ಎನ್‌. ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಅಭಿಷೇಕ, ಸಿಬ್ಬಂದಿ, ಅಂಗನವಾಡಿ ಶಿಕ್ಷಕಿ ಅವರ ಮನೆಗೆ ತೆರಳಿ ಯೋಧನ, ಪ್ರಾಥಮಿಕ ಸಂಪರ್ಕದವರ ಕುರಿತು ಮಾಹಿತಿ ಕಲೆ ಹಾಕಿ. ಮನೆ ಬಿಟ್ಟು ಹೊರಗೆ ಸಂಚಾರ ಮಾಡದಂತೆ ಸೂಚಿಸಿದ್ದಾರೆ.
 

PREV
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!