ಹಾಸ್ಟೆಲ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ: ಏನೇ ಆದ್ರೂ ನಮ್ ಜವಾವ್ದಾರಿ ಎಂದ ಅಧಿಕಾರಿಗಳು

By Kannadaprabha News  |  First Published Jul 1, 2020, 10:36 AM IST

ಸಾರ್ವಜನಿಕರ ಭಾರಿ ವಿರೋಧದ ಮಧ್ಯೆಯೂ ಕೋವಿಡ್‌- 19ರ 21 ಸೋಂಕಿತರನ್ನು ಸರರ್ಕರ್ಕಾರರಿ ಆಸ್ಪತ್ರೆಯಿಂದ ಮಂಗಳವಾರ ರಾತ್ರಿ ಜನನಿಭಿಡ ಪ್ರದೇಶವಾದ ಸೋನಾರಕೇರಿ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಯಿತು. ಇದರಿಂದ ಭಟ್ಕಳದ ಸೋನಾರಕೇರಿ ಹಾಸ್ಟೆಲ್‌ ಕೋವಿಡ್‌ -19 ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಗಿದೆ.


ಭಟ್ಕಳ(ಜು.01): ಸಾರ್ವಜನಿಕರ ಭಾರಿ ವಿರೋಧದ ಮಧ್ಯೆಯೂ ಕೋವಿಡ್‌- 19ರ 21 ಸೋಂಕಿತರನ್ನು ಸರರ್ಕರ್ಕಾರರಿ ಆಸ್ಪತ್ರೆಯಿಂದ ಮಂಗಳವಾರ ರಾತ್ರಿ ಜನನಿಭಿಡ ಪ್ರದೇಶವಾದ ಸೋನಾರಕೇರಿ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಯಿತು. ಇದರಿಂದ ಭಟ್ಕಳದ ಸೋನಾರಕೇರಿ ಹಾಸ್ಟೆಲ್‌ ಕೋವಿಡ್‌ -19 ತಾತ್ಕಾಲಿಕ ಆಸ್ಪತ್ರೆಯಾಗಿ ಬದಲಾಗಿದೆ.

ಮಂಗಳವಾರ ಬೆಳಿಗ್ಗೆ ವಿಟಿ ರಸ್ತೆ, ಸೋನಾರಕೇರಿ ಸಾರ್ವಜನಿಕರು ಸೋನಾರಕೇರಿ ಹಾಸ್ಟೆಲ್‌ನಲ್ಲಿ ಕೋವಿಡ್‌ ಸೋಂಕಿತರನ್ನು ಯಾವುದೇ ಕಾರಣಕ್ಕೂ ಇಡಬಾರದು ಎಂದು ಎಸಿ ಮೂಲಕ ಡಿಸಿಗೆ ಮನವಿ ಸಲ್ಲಿಸಿದ್ದರು. ಆದರೆ, ರಾತ್ರಿ ಕೋವಿಡ್‌ ಸೋಂಕಿತರನ್ನು ಹಾಸ್ಟೆಲ್‌ನಲ್ಲಿರಿಸಿ ಚಿಕಿತ್ಸೆ ಕೊಡಿಸಲು ಕರೆತರಲಾಗುತ್ತಿದೆ ಎಂದು ಸುದ್ದಿ ತಿಳಿದ ಸಾರ್ವಜನಿಕರು ಹಾಸ್ಟೆಲ್‌ ಮುಂದೆ ಜಮಾಯಿಸಿ ಯಾವುದೇ ಕಾರಣಕ್ಕೂ ಸೋಂಕಿತರನ್ನು ಇಲ್ಲಿಗೆ ತರಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

Tap to resize

Latest Videos

ಕುಂಕುಮ, ಬಳೆ ಧರಿಸದ ಪತ್ನಿಗೆ ವಿಚ್ಛೇದನಕ್ಕೆ ಅರ್ಹ: ಹೈಕೋರ್ಟ್!

ಸ್ಥಳಕ್ಕೆ ಸಹಾಯಕ ಆಯುಕ್ತ ಎಸ್‌ ಭರತ, ಎಎಸ್ಪಿ ನಿಖಿಲ ಬಿ, ತಹಸೀಲ್ದಾರ್‌ ರವಿಚಂದ್ರ, ಸಿಪಿಐ ದಿವಾಕರ ಮುಂತಾದ ಅಧಿಕಾರಿಗಳು ಆಗಮಿಸಿ ಸಾರ್ವಜನಿಕರ ಜತೆ ಮಾತನಾಡಿ, ಬೇರೆ ಎಲ್ಲೂ ಜಾಗವಿಲ್ಲ. ಇಲ್ಲಿ ಎಲ್ಲವೂ ವ್ಯವಸ್ಥೆ ಇರುವುದರಿಂದ ಇಲ್ಲಿಗೆ ತಂದಿದ್ದೇವೆ ಎಂದು ಸಮಜಾಯಿಸಿ ನೀಡಿದರು. ಜನನಿಬಿಡ ಹಾಸ್ಟೆಲ್‌ನಲ್ಲಿ ಕೋವಿಡ್‌ ಸೋಂಕಿತರನ್ನು ಹಾಕುವುದಕ್ಕೆ ಮತ್ತಷ್ಟುತೀವ್ರ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ಇದು ಸರಿಯಾದ ಜಾಗವಲ್ಲ. ನಾಳೆ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತದೆ. ಕೇಂದ್ರದ ಸನಿಹದಲ್ಲಿಯೇ ಕೋವಿಡ್‌ ಸೋಂಕಿತರಿದ್ದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹೆದರುವುದಿಲ್ಲವೇ? ಸುತ್ತಲೂ ವಾಸ್ತವ್ಯದ ಮನೆಗಳು, ಅಂಗಡಿಗಳು, ಬ್ಯಾಂಕುಗಳು, ಕಚೇರಿ ಇದ್ದು ಮುಂದೆ ಎಲ್ಲರಿಗೂ ತೊಂದರೆಯಾಗಲಿದೆ. ನೀವು ಇಲ್ಲಿ ಸೋಂಕಿತರನ್ನು ಇಡುವುದರಿಂದ ಜನರು ಭಯಬೀಳಲಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಇಲ್ಲಿ ಸೋಂಕಿತರನ್ನು ಇಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಎಎಸ್ಪಿ ನಿಖಿಲ ಬಿ ಮಾತನಾಡಿ, ಯಾವುದೇ ಸಮಸ್ಯೆ ಆದರೂ ನಾವು ನೋಡಿಕೊಳ್ಳುತ್ತೇವೆ. ಸೋಂಕಿತರು ನಿಮ್ಮೂರಿನ ಜನರಾಗಿದ್ದಾರೆ. ಹೀಗೆ ವಿರೋಧಿಸುವುದು ಸರಿಯಲ್ಲ. ಮಾನವೀಯ ನೆಲೆಯಲ್ಲಿ ಎಲ್ಲರನ್ನೂ ಕಾಣಬೇಕು ಎಂದರು. ಅಧಿಕಾರಿಗಳ ಮಾತಿಗೆ ಕಿಮ್ಮತ್ತು ಕೊಟ್ಟು ಒಪ್ಪಿದ ಸಾರ್ವಜನಿಕರು ಸೋಂಕಿತರಿಂದ ಯಾವುದೇ ಸಮಸ್ಯೆಯಾದರೂ ಜವಾಬ್ದಾರಿ ತಾಲೂಕು ಆಡಳಿತವೇ ಆಗಬೇಕು. ಊರಿನ ಜನತೆಗೆ ಯಾವುದೇ ತೊಂದರೆ ಆಗಬಾರದು. ಈಗ ಬಂದಿದ್ದು ಆಯಿತು. ಮತ್ತೆ ಇಲ್ಲಿ ಯಾವುದೇ ಕಾರಣಕ್ಕೂ ಸೋಂಕಿತರನ್ನು ತರಬಾರದು. ಹಾಸ್ಟೆಲ್‌ಗೆ ಬಿಗಿ ಪೊಲೀಸ್‌ ಭದ್ರತೆ ಹಾಕಬೇಕು. ಹಾಸ್ಟೆಲ್‌ನಲ್ಲಿದ್ದ ಸೋಂಕಿತರು ಯಾವುದೇ ಕಾರಣಕ್ಕೂ ಹೊರಬರಬಾರದು. ಅವರನ್ನು ನೋಡುವುದಕ್ಕೆ ಚಿಕಿತ್ಸೆ ಮಾಡುವವರಿಗೆ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ಕೊಡಬಾರದು ಎಂದು ತಿಳಿಸಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು ಏನೇ ಅದರೂ ಜವಾಬ್ದಾರಿ ತಮ್ಮದೇ ಎಂದು ಭರವಸೆ ನೀಡಿದರು.

ಉತ್ತರ ಕನ್ನಡದಲ್ಲಿ 40 ಜನರಿಗೆ ಕೋವಿಡ್‌ -19 ದೃಢ

ಪ್ರತಿಭಟನೆಯಲ್ಲಿ ಕೃಷ್ಣಾ ನಾಯ್ಕ, ವೆಂಕಟೇಶ ನಾಯ್ಕ, ಶ್ರೀಧರ ನಾಯ್ಕ, ಶ್ರೀಕಾಂತ ನಾಯ್ಕ, ಸಂದೀಪ ಶೇಟ್‌, ರಾಘವೇಂದ್ರ ಶೇಟ್‌, ಮಣಿ ಪೂಜಾರಿ, ಈಶ್ವರ ನಾಯ್ಕ ಸೇರಿದಂತೆ ಹಲವರು ಸೇರಿದ್ದರು.

click me!