ಕೋಲಾರ: 11 ಜನ ನಿಗೂಢ ಸಾವು..? ಗ್ರಾಮಕ್ಕೆ ದೌಡಾಯಿಸಿದ ವೈದ್ಯರ ತಂಡ

By Web DeskFirst Published Nov 20, 2019, 3:08 PM IST
Highlights

ಕೋಲಾರದಲ್ಲಿ 11 ಜನರು ಸಂಶಯಾದ್ಪದವಾಗಿ ಮೃತಪಟ್ಟಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಆರೋಗ್ಯಾಧಿಕಾರಿಗಳೂ, ಸೇರಿದಂತೆ ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದೆ.

ಕೋಲಾರ(ನ.20) : ಕೋಲಾರದಲ್ಲಿ 11 ಜನರು ಸಂಶಯಾದ್ಪದವಾಗಿ ಮೃತಪಟ್ಟಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಆರೋಗ್ಯಾಧಿಕಾರಿಗಳೂ, ಸೇರಿದಂತೆ ವೈದ್ಯರ ತಂಡ ಗ್ರಾಮಕ್ಕೆ ದೌಡಾಯಿಸಿದೆ.

ಚಮಕಲಹಳ್ಳಿ ಗ್ರಾಮದಲ್ಲಿ 16 ದಿನದಲ್ಲಿ 11 ಜನರ ನಿಗೂಡ ಸಾವಿನ ಪ್ರಕರಣದಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದು, ಚಮಕಲಹಳ್ಳಿ ಗ್ರಾಮಕ್ಕೆ ಅರೋಗ್ಯಾಧಿಕಾರಿಗಳು ಹಾಗೂ ವೈಧ್ಯರ ತಂಡ ಭೇಟಿ ನೀಡಿದ್ದಾರೆ.

30ರ ಯುವಕನ ಮೇಲೆ ಮೂರು ಮಕ್ಕಳ ತಾಯಿಗೆ ಲವ್ವು; ಮುಂದೆ ಆಗಿದ್ದು ಆಗಬಾರದ್ದು

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಎನ್.ಚಮಕಲಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗ್ರಾಮದಲ್ಲಿ ಜನರ ರಕ್ತದ ಮಾದರಿ ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ.

ಮುದಿಗೆರೆ ಪಂಚಾಯ್ತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಆರಂಭವಾಗಿದ್ದು, ಗ್ರಾಮಕ್ಕೆ ತಹಸೀಲ್ದಾರ್ ರಾಜಶೇಖರ್​​, ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್​ಕುಮಾರ್, ಹಾಗೂ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನೈ ಸ್ಥಾಪನೆ ಮಾಡಲಾಗಿದೆ.

ಮಂಡ್ಯ: ಸೊಸೆಯನ್ನು ಕೊಂದ ಮಾವ ಜೈಲಿನಲ್ಲೇ ಆತ್ಮಹತ್ಯೆ

ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮೂವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 11 ಮಂದಿ ಸಂಶಯಾಸ್ಪದವಾಗಿ ಸಾವನ್ನಪ್ಪಿರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!

click me!