ಉಪಚುನಾವಣೆ ಬಳಿಕ ಸರ್ಕಾರ ಬಂದ್ರೆ ಶ್ರೀರಾಮುಲು ಉಪಮುಖ್ಯಮಂತ್ರಿ ಆಗ್ತೇನೆ ಅಂತಾ ಹೇಳಿದ್ರು| ಎಸ್ಟಿ ಹಾಗೂ ಎಸ್ಸಿ ಪಂಗಡಕ್ಕೆ ಶೇ. 7.5 ರಷ್ಟು ಮೀಸಲಾತಿ ತರ್ತೇನೆ ಅಂತಾ ಹೇಳಿದ್ರು| ಆದರೆ ಯಾವುದನ್ನೂ ರಾಮುಲು ಮಾಡಲಿಲ್ಲ ಎಂದ ಮಾಜಿ ಸಂಸದ ಉಗ್ರಪ್ಪ|
ಬಳ್ಳಾರಿ(ನ.20): ಸಚಿವ ಬಿ. ಶ್ರೀರಾಮುಲು ಅವರು ಈ ದೇಶದ ಪ್ರಧಾನಮಂತ್ರಿ ಆಗುವವರು. ಅಂತಹ ಮಹಾನ್ ವ್ಯಕ್ತಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತೊಡೆ ತಟ್ಟುವ ಕುರಿತು ಮಾತಾಡಿದ್ದಾರೆ. ಆದ್ರೆ, ಉಪಚುನಾವಣೆ ಬಳಿಕ ಸರ್ಕಾರ ಬಂದ್ರೆ ಉಪಮುಖ್ಯಮಂತ್ರಿ ಆಗ್ತೇನೆ ಅಂತಾ ಹೇಳಿದ್ರು, ಎಸ್ಟಿ ಹಾಗೂ ಎಸ್ಸಿ ಪಂಗಡಕ್ಕೆ ಶೇ. 7.5 ರಷ್ಟು ಮೀಸಲಾತಿ ತರ್ತೇನೆ ಅಂತಾ ಹೇಳಿದ್ರು, ಆದರೆ ಯಾವುದನ್ನೂ ರಾಮುಲು ಮಾಡಲಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಅವರು ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ತಮ್ಮ ಗುರು ಜನಾರ್ದನ ರೆಡ್ಡಿ ಅವರ ರಾಜಕೀಯ ಹಿತವನ್ನ ಕಾಪಾಡಲು ಆಗಿಲ್ಲ. ಸಿದ್ದರಾಮಯ್ಯರನ್ನ ಬಿಡಿ. ಮೊದಲು ನೀವು ನುಡಿದಂತೆ ನಡೆದಿಲ್ಲ. ಆದ್ರಿಂದ ಮೊದಲು ನೀವು ರಾಜೀನಾಮೆ ಕೊಡಿ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗ ಶಾಸಕ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಮುಂದಿನ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲ್ಲಿ ನೋಡೋಣ, ನಾನು ಅಥವಾ ಪಕ್ಷದ ಸಾಮಾನ್ಯ ಕಾರ್ಯಕರ್ತ ಚುನಾವಣೆ ನಿಲ್ತೇವೆ ಎಂದು ಉಗ್ರಪ್ಪ ಅವರು ಶ್ರೀರುಮುಲು ಅವರಿಗೆ ಸವಾಲ್ ಹಾಕಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.