ಹೊಸಕೋಟೆಯಲ್ಲೂ ಗಾಂಜಾ ಘಾಟು : ಬಾರೀ ಮೌಲ್ಯದ ದಾಸ್ತಾನು ಸೀಜ್

Kannadaprabha News   | Asianet News
Published : Sep 20, 2020, 07:37 AM IST
ಹೊಸಕೋಟೆಯಲ್ಲೂ ಗಾಂಜಾ ಘಾಟು : ಬಾರೀ ಮೌಲ್ಯದ ದಾಸ್ತಾನು ಸೀಜ್

ಸಾರಾಂಶ

ರಾಜ್ಯದಲ್ಲಿ ಡ್ರಗ್ ಸಮಾಚಾರ ಮುಕ್ತಾಯವಾಗುವಂತೆ ಕಾಣುತ್ತಿಲ್ಲ. ದಿನದಿನವೂ ಕೂಡ ಹೊಸ ಹೊಸ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದೀಗ ಹೊಸಕೋಟೆಯಲ್ಲಿಯೂ ಭಾರೀ ಪ್ರಮಾಣದಲ್ಲಿ ಗಾಂಜಾ ಸೀಜ್ ಮಾಡಲಾಗಿದೆ. 

 ಹೊಸಪೇಟೆ (ಸೆ.20): ಇಲ್ಲಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ . 11,19,200 ಮೌಲ್ಯದ 56 ಕೆಜಿ 170 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಿವೈಎಸ್ಪಿ ವಿ. ರಘುಕುಮಾರ್‌, ನಗರದ ಬಿಟಿಆರ್‌ನಗರದಲ್ಲಿ ಗಾಂಜಾ ದಾಸ್ತಾನು ಮಾಡಿದ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ . 9.94 ಲಕ್ಷ ಮೌಲ್ಯದ 49 ಕೆಜಿ 700 ಗ್ರಾಂ. ಗಾಂಜಾ ಹಾಗೂ ಎರಡು ಮೊಬೈಲ್‌ ಮತ್ತು . 520 ನಗದು ವಶಕ್ಕೆ ಪಡೆದು, ನಗರವಾಸಿಗಳಾದ ಹೇಮಲತಾ ಹಾಗೂ ಬಳ್ಳಾರಿ ಜಾಗೃತಿ ನಗರ ನಿವಾಸಿ ಇರ್ಫಾನ್‌ ಅಲಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ನಗರದ ಬಡಾವಣೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿಯ ಎಂ.ಎಚ್‌. ಮಧು, ತಾಲೂಕಿನ ಧರ್ಮಸಾಗರ ಗ್ರಾಮದ ಎಂ. ಸುರೇಶ್‌ ಕುಮಾರ್‌ ಎಂಬುವರನ್ನು ವಶಕ್ಕೆ ಪಡೆದು 1 ಲಕ್ಷದ 5,200 ರು. ಮೌಲ್ಯದ 5 ಕೆಜಿ 260 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ.

ಇಬ್ಬರು ನಟರ ಹೆಸರು ಹೇಳ್ತೀನಿ ಎಂದ ಸಂಬರಗಿ

ನಗರ ಠಾಣೆ ವ್ಯಾಪ್ತಿಯಲ್ಲಿ ನಗರದ ಕನಕದಾಸ ವೃತ್ತದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ದಾಳಿ ನಡೆಸಿ ನಗರದ ವಾಸಿಗಳಾದ ಜೆ. ಹನುಮೇಶ್‌, ಜೆ. ಷಣ್ಮುಖ ಎಂಬವರನ್ನು ವಶಕ್ಕೆ ಪಡೆದು, . 20 ಸಾವಿರ ಮೌಲ್ಯದ 1 ಕೆ.ಜಿ. 210 ಗ್ರಾಂ. ಗಾಂಜಾ, ಒಂದು ಬೈಕ್‌ ಹಾಗೂ ಎರಡು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಎಸ್ಪಿ ಸೈದುಲು ಅದಾವತ್‌, ಹೆಚ್ಚುವರಿ ಎಸ್ಪಿ ಕೆ. ಲಾವಣ್ಯ ಮಾರ್ಗದರ್ಶನದಲ್ಲಿ ಪಿಐಗಳಾದ ಶ್ರೀನಿವಾಸ್‌ ಮೇಟಿ, ಪಿಎಸ್‌ಐಗಳಾದ ಬಸವರಾಜ್‌, ಪಿ. ಜಡಿಯಪ್ಪ, ಯಲ್ಲಪ್ಪ ಕದರಳ್ಳಿ ಹಾಗೂ ಮೂರು ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ