ಅಂದುಕೊಂಡಿದ್ದ ದಿನವೇ ನಿಧನರಾದ ಶತಾಯುಷಿ!

By Kannadaprabha News  |  First Published Dec 8, 2020, 7:16 AM IST

105 ವರ್ಷದ ಶತಾಯುಷಿಯೋರ್ವರು ತಾವು ಅಂದುಕೊಂಡ ದಿನವೇ ಮೃತರಾಗಿ ಅಚ್ಚರಿಯನ್ನುಂಟು ಮಾಡಿದ್ದಾರೆ. 


ಶಿವಮೊಗ್ಗ (ಡಿ.08): ಶನಿವಾರ ತನ್ನ ಕೊನೇ ದಿನ ಎಂದು ಹೇಳಿದ್ದ ಶತಾಯುಷಿಯೊಬ್ಬರು ಅಂದೇ ಕೊನೆಯುಸಿರೆಳೆದ ಅಪರೂಪದ ಘಟನೆ ಸಾಗರದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಆನಂದಪುರ ಸಮೀಪದ ಯಡೇಹಳ್ಳಿ ಗ್ರಾಪಂ ವ್ಯಾಪ್ತಿಯ ಹೆಬ್ಬೋಡಿ ಗ್ರಾಮದ ಬಿಸಿನಗದ್ದೆ ವಾಸಿಯಾದ ಮಂಗರವಳ್ಳಿ ಚೌಡಪ್ಪ (105) ಮೃತ ಶತಾಯುಷಿ. ಇವರಿಗೆ ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಮೂಲತಃ ಕೃಷಿಕರಾಗಿದ್ದ ಚೌಡಪ್ಪ ಅವರು, ತಾವು ನಿಧನ ಹೊಂದುವ ಮೊದಲು ಶುಕ್ರವಾರವೇ ತಮ್ಮ ಕುಟುಂಬದವರಿಗೆ ‘ಶನಿವಾರ ನನ್ನ ಕೊನೆಯ ದಿನ’ ಎಂದು ಮೊದಲೇ ತಿಳಿಸಿದ್ದರು.

Tap to resize

Latest Videos

ಕೊರೋನಾ ಗೆದ್ದ ರಾಜ್ಯದ ಮೊದಲ ಶತಾಯುಷಿ: ಮನೆ​ಯಲ್ಲೇ ಚಿಕಿ​ತ್ಸೆ ಪಡೆದು 100ರ ವೃದ್ಧೆ ಗುಣಮುಖ ..

ಕೊನೇ ಬಾರಿ ತಮ್ಮ ಹೆಣ್ಣು ಮಕ್ಕಳು ಹಾಗೂ ಬಂಧು ವರ್ಗದರನ್ನು ನೋಡಬೇಕೆಂದು ಕರೆಸಿಕೊಂಡು ಎಲ್ಲರೊಂದಿಗೆ ಮಾತನಾಡಿದ್ದಾರೆ.

ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡಿ, ಎಲ್ಲರೊಂದಿಗೆ ಮಾತನಾಡುತ್ತಿದ್ದ ವೇಳೆಯೇ ಕೊನೆಯುಸಿರೆಳಿದಿದ್ದಾರೆ. ಮೊದಲೇ ಸಾವನ್ನು ನಿರ್ಧರಿಸಿದಂತೆ ಶನಿವಾರವೇ ನಿಧನರಾಗಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ

click me!